HomePage_Banner
HomePage_Banner
HomePage_Banner
HomePage_Banner

ಲವ್ ಸಿಂಬಲ್‌ಗೆ ಹೃದಯದ ಚಿತ್ರವೇಕೆ? ಪ್ರೇಮಿಗಳಿಗೆ ಲವ್‌ಬರ್ಡ್ಸ್ ಅನ್ನೋದೆಕೇ? ಯಾವುದು ಪ್ಯೂರ್ ಲವ್…? ಪ್ರೀತಿನಾ ಪ್ರೀಯಿಂದಲೇ ಪ್ರೀತ್ಸಿ…

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

. . . ✍️@ ಸಿಶೇ ಕಜೆಮಾರ್

❤️ ಇದು ಪ್ರೇಮಿಗಳ ದಿನದ ಸ್ಪೇಷಲ್


 
ಪ್ರೀತಿ ಎಂಬ ಎರಡೂವರೆ ಅಕ್ಷರದ ಅರ್ಥ ವಿವರಣೆಗೆ ನಿಲುಕದಷ್ಟು ದೊಡ್ಡದಿದೆ. ಪ್ರೀತ್ಸೆ ಪ್ರೀತ್ಸೆ ಅಂತ ಹುಚ್ಚು ಹುಚ್ಚಾಗಿ ಹಾಡು ಹಾಡುತ್ತಾ ಹುಡುಗಿಯರನ್ನು ಕಾಡುತ್ತಾ ತಿಕ್ಕಲು ತಿಕ್ಕಲಾಗಿ ಕುಣಿಯುವುದು ಪ್ರೀತಿಯಲ್ಲ. ಅಪ್ಪ ತನ್ನ ಮಗನನ್ನು ಮುದ್ದು ಮಾಡ್ತಾನಲ್ಲ ಅದೂ ಪ್ರೀತಿ, ತಾಯಿ ಮಗುವನ್ನು ಲಾಲಿ ಹಾಡಿಸಿ ಮಲಗಿಸ್ತಾಲಲ್ಲ ಅದೂ ಅಮರ ಪ್ರೀತಿ. ಗೆಳೆಯ ಗೆಳತಿಯರ ನಡುವಿನದ್ದು ಆ ಕ್ಷಣದ ಪ್ರೀತಿಯಾದರೆ, ಗುರುಗಳ ಮೇಲಿರುವುದು ಹೆದರಿಕೆಯ ಪ್ರೀತಿ. ಒಟ್ಟಿನಲ್ಲಿ ಪ್ರೀತಿ ಇಲ್ಲದಿದ್ದರೆ ಬದುಕಿಲ್ಲ. ಪರಿಶುದ್ಧ ಪ್ರೀತಿ ಎಂಬುದು ಬದುಕಿಡೀ ಜತೆಗೆ ಇರುವ ಟಾನಿಕ್. ಒಂದು ಪರಿಶುದ್ಧ ಪ್ರೀತಿಯಿಂದಲೇ ಇಂದು ನಾವು ನೀವೆಲ್ಲರೂ ಈ ಭೂಮಿಯಲ್ಲಿ ಬದುಕಿದ್ದೇವೆ. ಬನ್ನಿ ಈ ಪ್ರೀತಿಯ ಬಗ್ಗೆ ನಾವು ನೀವು ಪ್ರೀತಿಯಿಂದಲೇ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡೋಣ…

ಲವ್ ಅರ್ಥಾತ್ ಪ್ರೀತಿ, ಈ ಲವ್ ಸಿಂಬಲ್‌ಗೆ ನಮ್ಮ ಹೃದಯದ ಚಿತ್ರವನ್ನೇಕೆ ಕೊಟ್ಟಿದ್ದಾರೆ. ಪ್ರೀತಿಗೂ ಹೃದಯಕ್ಕೂ ಏನಾದರೂ ಸಂಬಂಧವಿದೆಯಾ? ಈ ಹೃದಯದ ಚಿತ್ರದ ಹಿಂದಿರುವ ಸತ್ಯವೇನು? ತುಂಬಾ ಜನ ಪ್ರೇಮಿಗಳು ತಮ್ಮ ಪ್ರೇಮಿ, ಪ್ರಿಯತಮನ ಎದುರು ನಿಂತು ` ನೀನು ಸಿಗಲ್ಲ ಅಂದ್ರೆ ಅವತ್ತೇ ನನ್ನ ಉಸಿರು ನಿಂತು ಹೋಗುತ್ತೇ ತಿಳ್ಕೊಂಡಿರು’ ಎಂಬ ಮಾತಾಡಿರುತ್ತಾರೆ. ಕೆಲವರಂತೂ ಒಂದು ಹುಡುಗಿ ಹುಡುಗನೀಗೋಸ್ಕರವೇ ಬದುಕಿರುತ್ತಾರೆ. ಈ ಉಸಿರು ನಿಂತು ಹೋಗುವುದು ಅಂದರೆ ಏನರ್ಥ ಹೇಳಿ. ಎದೆ ಬಡಿತ ನಿಂತು ಹೋಗುವುದು ಅಂತ ತಾನೆ? ` ನೀ ಇಲ್ದೆ ನಾ ಬದುಕಲ್ಲ ಕಣೇ ಅಂತ ಪರೋಕ್ಷವಾಗಿ ಹೇಳಲೆಂದೇ ಪ್ರೀತಿಗೆ ಹೃದಯದ ಸಿಂಬಲ್ ಬಳಸ್ತಾರೆ. ಹೃದಯದಿಂದ ಬಂದ ಮಾತಲ್ಲಿ ಸತ್ಯ, ನಿಷ್ಠೆ ಇರುತ್ತೆ. ಅಲ್ಲಿ ಪ್ರಾಮಾಣಿಕತೆ ಇರುತ್ತೆ, ಪ್ರೀತಿ ಇರುತ್ತೆ, ಕಾಳಜಿ ಇರುತ್ತೆ. ಐ.ಲವ್.ಯೂ ಎಂನ ಪಿಸು ಮಾತು ಯಾವತ್ತೂ ಹೃದಯದಿಂದಲೇ ಬಂದಿರುತ್ತೆ ಅದಕ್ಕೆ ಪ್ರೀತಿ ಎಂಬ ಪದಕ್ಕೆ ಪರ್‍ಯಾಯವಾಗಿ ಹೃದಯದ ಸಿಂಬಲ್ ಬಳಸಲಾಗಿದೆ. ಈಗ ಗೊತ್ತಾಯ್ತು ತಾನೆ. ಲವ್ ಸಿಂಬಲ್‌ಗೆ ಹೃಯದಯ ಚಿತ್ರವೇಕೆ ಬಳಸುತ್ತಾರೆ ಅಂತ.

ಇನ್ನು ಪ್ರೇಮಿಗಳನ್ನು ಲವ್ ಬರ್ಡ್ಸ್‌ಗೆ ಹೋಲಿಸುತ್ತಾರೆ. ಹುಡುಗ ಹುಡುಗಿ ಅಂಟಿಕೊಂಡಂತೆ ನಡೆದು ಹೋಗ್ತಾ ಇದ್ರೆ ಅವರಿಗೆ ಲವ್ ಬರ್ಡ್ಸ್ ಅಂತಾರೆ. ಈ ಲವ್ ಬರ್ಡ್ಸ್ ಪದ ಹೇಗೆ ಬಳಕೆಗೆ ಬಂತು ಅಂದ್ರೆ ಆಫ್ರೀಕಾದಲ್ಲಿ ಒಂದು ಜಾತಿಯ ಬಣ್ಣದ ಹಕ್ಕಿಗಳಿವೆ. ಈ ಹಕ್ಕಿಗಳು ಸದಾ ಜೋಡಿ ಜೀವದ ಥರಾ ಒಂದಕ್ಕೊಂದು ಅಂಟಿಕೊಂಡೇ ಕೂತಿರ್‍ತಾ ಇದ್ದವಂತೆ. ಈ ಪ್ರೀತಿಯ ಹೊಳೆಗೆ ಬಿದ್ದ ಹುಡುಗ ಹುಡುಗಿ ಕೂಡ ಅದೇ ಥರಾ ಅಂಟಿಕೊಂಡೇ ಕೂತಿರ್‍ತಾರೆ. ಅದೇ ಕಾರಣದಿಂದ ಪ್ರೇಮಿಗಳನ್ನು ಲವ್‌ಬರ್ಡ್ಸ್ ಎಂದು ಕರೀತಾರೆ. ಅಂತೂ ಹಕ್ಕಿಗಳಂತೆ ಸ್ವಚ್ಛಂಧವಾಗಿ, ಪರಿಶುದ್ಧವಾದ ಪ್ರೀತಿ ನಮ್ಮದಾಗಿರಲಿ.

ಪ್ರೀತಿಯ ಬಲೆಗೆ ಬೀಳದವರು ಯಾರಿದ್ದಾರೆ ಹೇಳಿ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಬಲೆಗೆ ಬಿದ್ದವರೆ, ಪ್ರೀತಿಯ ಬಲೆಯಲ್ಲಿ ಎದ್ದುಬಿದ್ದು ಒಂದಿಷ್ಟು ಮಂದಿ ದಡ ಸೇರಿದರೆ, ಇನ್ನೊಂದಿಷ್ಟು ಮಂದಿ ವಿರಹದಲ್ಲೇ ಜೀವನ ಕಳೆದವರೂ ಇದ್ದಾರೆ. ಹಾಗದರೆ ಯಾವುದು ಪ್ಯೂರ್ ಲವ್. ನಿಮ್ಮನ್ನು ಒಬ್ಬ ಪ್ರೀತಿ ಮಾಡುತ್ತಿದ್ದಾನೆ ಅವನದು ಪ್ಯೂರ್ ಲವ್ ಅಂತ ನಿಮ್ಮಲ್ಲೇ ಅನೇಕ ಪ್ರಶ್ನೆಗಳು ಎದ್ದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಅವನು ಎಲ್ಲರಂತಿಲ್ಲ, ಫ್ರೀ ಆಗಿ ಮಾತನಾಡುತ್ತಿಲ್ಲ. ಮಿಕ್ಕವರಂತೆ ಮನಸು ಬಿಚ್ಚಿ ನಗುತ್ತಿಲ್ಲ. ಮತ್ತಿತರಂತೆ ತಮಾಷೆ ಮಾಡುತ್ತಿಲ್ಲ. ಫ್ರೀಯಾಗಿ ಮಾತನಾಡುವುದಿರಲಿ ನಿಮ್ಮೊಂದಿಗೆ ಮಾತನಾಡಲು ದೊರೆತ ಅವಕಾಶದಲ್ಲೂ ಹಿಂಜರಿಕೆಯಿಂದ ಹಿಂದುಳಿಯುತ್ತಿದ್ದಾನೆ. ನಿಮ್ಮನ್ನು ದೃಷ್ಟಿಯಲ್ಲೇ ಹಿಂಬಾಲಿಸುತ್ತಿದ್ದಾನೆ.ನೀವು ನಿಂತೆಡೆ ಎವೆಯಿಕ್ಕದೆ ನೋಡುತ್ತಿದ್ದಾನೆ. ನಿಮ್ಮ ದೃಷ್ಟಿ ಅವನೆಡೆಗೆ ಹರಿದಾಕ್ಷಣ ಗಲಿಬಿಲಿಗೊಂಡವನಂತೆ ತನ್ನ ದೃಷ್ಟಿ ಬದಲಾಯಿಸುತ್ತಿದ್ದಾನೆ. ಗುಂಪಿನಲ್ಲಿ ನಿಮ್ಮ ಬಗ್ಗೆ ಸಹಜವಾಗಿ ಯಾರೇ ತಮಾಷೆ, ಗೇಲಿ ಮಾಡಿದರೆ ಎಲ್ಲರಂತೆ ಅವನು ನಗುವುದಿಲ್ಲ. ಅಷ್ಟೇ ಅಲ್ಲ ನಿಮ್ಮನ್ನು ಅಪಹಾಸ್ಯ ಮಾಡಿದವರನ್ನು ದುರುಗುಟ್ಟಿ ನೋಡುತ್ತಾನೆ. ಉಕ್ಕಿ ಬರುವ ಕೋಪವನ್ನು ಅವಡುಗಚ್ಚಿ ನಿಗ್ರಹಿಸುತ್ತಾನೆ. ನೀವು ನಡೆಯುವಾಗ ಮೈಮರೆತು ಜಾರಿದರೆ ಅಥವಾ ರಭಸದಲ್ಲಿ ಆಕಸ್ಮತ್ತಾಗಿ ಏನಾದರೂ ತಾಗಿದರೆ ನಿಮ್ಮ ಸಹಾಯಕ್ಕೆ ಧಾವಂತದಿಂದ ಧಾವಿಸುತ್ತಾನೆ. ಅವನದು ಸ್ನೇಹವಂತೂ ಅಲ್ಲ, ಸ್ನೇಹವೇ ಬೇರೆ, ಮೋಹ ಅನುರಾಗಗಳಿಗೆ ಸ್ನೇಹದಲ್ಲಿ ಜಾಗವಿಲ್ಲ. ಬಾಹ್ಯ ಅಲಂಕಾರಕ್ಕೆ ಸ್ನೇಹದಲ್ಲಿ ಮಹತ್ವವಿಲ್ಲ. ಗುಸುಗುಸುಗಳು,ಪಿಸುಮಾತುಗಳು, ಬೇಕಾಗೇ ಇಲ್ಲ. ಆದರೆ ಅವನ ವರ್ತನೆಯಲ್ಲಿ ಸ್ನೇಹದ ಯಾವ ಕುರುಹುಗಳು ಕಾಣುತ್ತಿಲ್ಲ. ಸ್ನೇಹಿನಂತೆ ಹುಚ್ಚಾಬಟ್ಟೆ ಆತ ಹರಟುತ್ತಿಲ್ಲ. ನಾಚಿಕೆಯಿಂದ ಸದಾ ಮೌನಿಯಾಗಿರುತ್ತಾನೆ. ಆದರೆ ನಿಮ್ಮ ಪ್ರತಿ ಚಲನ ವಲನದ ಬಗ್ಗೆ ಕುತೂಹಲಿಯಾಗಿದ್ದಾನೆ. ಎದುರಿಸಲು ಸಾಧ್ಯವಾಗದಿದ್ದರೂ ನಿಮ್ಮ ಒಂದು ಕಣ್ಣೋಟಕ್ಕಾಗಿ ಕಾತರಿಸುತ್ತಾನೆ. ನಿಂತಲ್ಲಿ ನಿಲ್ಲಲಾಗದೆ ಚಡಪಡಿಸುತ್ತಾನೆ. ಹೌದು ….ಹೇಳಿಕೊಳ್ಳಲಾಗದ ಎದೆಯ ತುಡಿತಕ್ಕೆ ಏನದು ಹೆಸರು? ಡಿಯರ್ ಗರ್ಲ್ಸ್, ನಿಮ್ಮ ಸುತ್ತಲಿನವರಲ್ಲಿ ಯಾರಲ್ಲಾದರೂ ಈ ಲಕ್ಷಣಗಳು ಕಂಡು ಬಂದಲ್ಲಿ ನೋ ಡೌಟ್, ಇದು ಪ್ರೀತಿ, ಲವ್. ಅವನು ನಿಮ್ಮನ್ನು ಇಷ್ಟಪಟ್ಟಿದ್ದಾನೆ,ಮನಸ್ಸಲ್ಲೇ ಆರಾಧಿಸುತ್ತಿದ್ದಾನೆ. ನಿಮ್ಮ ಪ್ರೀತಿಗೆ ಹಂಬಲಿಸುತ್ತಿದ್ದಾನೆ.ನಿಮ್ಮಿಂದ ಮೂರು ಪದಗಳ ನಿರೀಕ್ಷೆಯಲ್ಲಿದ್ದಾನೆ. ಇಂಥವರು ಪ್ರೇಮದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ನಿಮ್ಮ ಬಗ್ಗೆ ಕಾಳಜಿಯುಳ್ಳವರಾಗಿರುತ್ತಾರೆ. ಭವಿಷ್ಯದ ಬಗ್ಗೆ ಭದ್ರ ಕನಸು ಕಟ್ಟಿಕೊಂಡಿರುತ್ತಾರೆ. ಇಂಥವರನ್ನು ನೀವು ಇಷ್ಟಪಟ್ಟಲ್ಲಿ ಖಂಡಿತಾ ಪ್ರಪೋಸ್ ಮಾಡಬಹುದು.

ನಾನು ಮೊದಲೇ ಹೇಳಿದಾಗೆ ಪ್ರೀತಿ ಎಂಬ ಎರಡೂವರೆ ಅಕ್ಷರದ ಅರ್ಥ ವಿವರಣೆಗೆ ನಿಲುಕದಷ್ಟು ದೊಡ್ಡದಿದೆ. ಇಂದಿನ ಯುವ ಜನಾಂಗದ ಪ್ರೀತಿ ಅದು ಪ್ರೀತಿನೇ ಅಲ್ಲ ಅದೊಂದು ಕಾಮದಹನ, ಮೋಹದ ನರ್ತನ. ದೈಹಿಕ ಮಿಲನ ಅಷ್ಟೇ. ಹದಿಹರೆಯದ ಮನಸ್ಸುಗಳು ಬಯಸುವ ಹಸಿ ಬಿಸಿ ಪ್ರೀತಿಯ ಮುಂದೆ ಈ ಅಮರಾಮಧುರಾ ಪ್ರೀತಿಯ ಕುರಿತು ಯಾರೂ ಕೂಡ ಯೋಚಿಸುವುದೇ ಇಲ್ಲ. ಒಂದು ಪರಿಶುದ್ಧ ಪ್ರೀತಿ ಹೇಗಿರುತ್ತದೆ ಗೊತ್ತಾ? ಪರಿಶುದ್ಧ ಪ್ರೀತಿ ಯಾವತ್ತೂ ಯಾರನ್ನೂ ನೋಯಿಸುವುದಿಲ್ಲ. ನಾನು ನಿನ್ನನ್ನು ಅತಿಯಾಗಿ ಪ್ರೀತಿಸ್ತೀನಿ, ಅದೇ ಕಾರಣಕ್ಕೆ ನಿನ್ನನ್ನು ಅತಿಯಾಗಿ ಬೈತಿನಿ ಅಷ್ಟೊಂದು ಪ್ರೀತಿ ಇರುವುದರಿಂದಲೇ ಒಮ್ಮೊಮ್ಮೆ ಹೊಡೆದೂ ಬಿಡ್ತೀನಿ ಅಂತಾರೆ ಕೆಲವರು.ಸ ಪ್ರಾಮಾಣಿಕವಾಗಿ ಹೇಳುವುದಾದರೆ ನಿರ್ಮಲ ಪ್ರೀತಿ ಯಾವತ್ತೂ ಯಾರನ್ನೂ ನೋಯಿಸುವುದಿಲ್ಲ. ನೋವು ಕೊಡುವಂಥದ್ದು ಪ್ರೀತಿಯಲ್ಲವೇ ಅಲ್ಲ. ಚಿಟಕಿ ಹೊಡೆಯೋದ್ರೊಳಗೆ ಅವನನ್ನು/ಅವಳನ್ನು ಪಟಾಯಿಸಿಬಿಡ್ತಿನಿ ಅಂತಿರ್‍ತಾರೆ ಕೆಲವರು, ನೆನಪಿಡಿ ಪ್ರೀತಿ ಅನ್ನೋದು ಕೈಚಳಕವಲ್ಲ, ಅದು ದುಡ್ಡು ಕೊಟ್ಟರೆ ಖರೀದಿಗೆ ಸಿಗುವುದಿಲ್ಲ. ನಿಮ್ಮನ್ನು ಕುರಿತು ಎದುರಿಗಿರುವ ವ್ಯಕ್ತಿಗೆ ಸದಭಿಪ್ರಾಯ ಬಂದಾಗ ಮಾತ್ರ ಅವರೆದೆಯಲ್ಲಿ ನಿಮ್ಮ ಕುರಿತು ಪ್ರೀತಿ ಹುಟ್ಟುತ್ತದೆ. ಬೇರೊಬ್ಬ ವ್ಯಕ್ತಿಯ ಬಗ್ಗೆ ನೀವು ತೆಗೆದುಕೊಳ್ಳುವ ಕಾಳಜಿಯಿಂದಲೂ ಪ್ರೀತಿ ಹುಟ್ಟಬಲ್ಲದು. ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಮನೆಮಂದಿಗಿಂತ ಬಂಧುಗಳ ಮನೆಯವರೇ ಹೆಚ್ಚು ಆಪ್ತರಾಗಿಬಿಡುತ್ತಾರೆ. ನೀವು ಯಾರನ್ನಾದರೂ ಇಷ್ಟ ಪಡ್ತಾ ಇದ್ದೀರಿ ಅಂದುಕೊಳ್ಳಿ. ಯಾವತ್ತೂ ಯಾವ ಸಂದರ್ಭದಲ್ಲೂ ನನ್ನ ಪ್ರೀತಿಗಾಗಿ ಇಂಥ ತ್ಯಾಗ ಮಾಡು ಎಂಬರ್ಥದ ಮಾತನಾಡಲು ಹೋಗಬೇಡಿ. ಬೇರೆಯವರಿಗೂ ನಿಮ್ಮ ಪ್ರೀತಿಯ ಪ್ರದರ್ಶನ ಮಾಡಲು ಹೋಗಬೇಡಿ. ಏಕೆಂದರೆ ಪರಿಶುದ್ಧ ಪ್ರೀತಿ ಪ್ರದರ್ಶನದ ವಸ್ತುವಲ್ಲ. ಅದು ಯಾವತ್ತೂ ತ್ಯಾಗ ಬೇಡುವುದಿಲ್ಲ. ಪ್ರೀತಿ ಎಂದಾಕ್ಷಣ ಅಲ್ಲಿ ಅನುಮಾನ, ಅತಿಯಾಸೆ, ಅತಿ ನಿರೀಕ್ಷೆ ಕಂಡೆ ಕಾಣಿಸುತ್ತದೆ. ಆದರೆ ಪರಿಶುದ್ಧ ಪ್ರೀತಿ ಎಂಬುದು ಯಾವತ್ತೂ ನಿಷ್ಠೆ ಬೇಡುತ್ತದೆ. ದೈಹಿಕ ಆಕರ್ಷಣೆ ಯಾವತ್ತೂ ಪರಿಶುದ್ಧ Aಪ್ರೀತಿ ಆಗಲು ಸಾಧ್ಯವೇ ಇಲ್ಲ. ಯಾವುದೋ ಒಂದು ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮಿಂದಲೇ ನೋವಾಯಿತು ಅಂದರೆ ಆಗ ನಿಮಗೆ ನೀವೆ ಕಠಿಣ ಶಿಕ್ಷೆ ವಿಧಿಸಿಕೊಳ್ಳಲು ಹೋಗಬೇಡಿ, ಆದರೆ ನೀವು ಮೆಚ್ಚುವ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಿರಿ. ಸಂಕೋಚ ಬಿಟ್ಟು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ನೆನಪಿರಲಿ ಪ್ರೀತಿ ಅಂದರೆ ಸೆಕ್ಸ್ ಅಲ್ಲ, ಸೆಕ್ಸ್ ಅನ್ನೋದು ಪ್ರೀತಿಯಾಗಲು ಸಾಧ್ಯವೂ ಇಲ್ಲ. ಸೆಕ್ಸ್ ಎಂಬುದು ಸ್ವಲ್ಪ ಹೊತ್ತಿನ ಅಗತ್ಯ ಅಷ್ಟೆ. ಆದರೆ ಪರಿಶುದ್ಧ ಪ್ರೀತಿ ಎಂಬುದು ಬದುಕಿಡೀ ಜೊತೆ ಇರುವ ಟಾನಿಕ್. ದೇಹಕ್ಕೆ ವಯಸ್ಸಾದಂತೆಲ್ಲ ರೊಮ್ಯಾಂಟಿಕ್ ಲವ್ ನಮ್ಮಿಂದ ಮರೆಯಾಗುತ್ತದೆ. ಆದರೆ ಆಕರ್ಷಣೆಯ ಸೋಂಕೇ ಇಲ್ಲದ ಪ್ರೀತಿ ಸಾಯುವವರೆಗೂ ಜತೆಗೇ ಇರುತ್ತದೆ. ಅನುಮಾನ ಬೇಡ. ಪರಿಶುದ್ಧ ಪ್ರೀತಿ ನಮಗೆ ಖುಷಿ ಕೊಡುತ್ತೆ, ರಕ್ಷಣೆ ಒದಗಿಸುತ್ತೆ. ಇತರರು ನಮ್ಮನ್ನು ಪ್ರೀತಿ ಅಭಿಮಾನದಿಂದ ನೋಡುವ ಹಾಗೆ ಮಾಡುತ್ತೆ. ಹಾಗಾದರೆ ಪ್ರೀತಿನಾ ಪ್ರೀತಿಯಿಂದಲೇ ಪ್ರೀತ್ಸಿ…

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.