HomePage_Banner
HomePage_Banner
HomePage_Banner
HomePage_Banner

ಫೆ.16-19: ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಸಂತೋಷ್ ಮೊಟ್ಟೆತ್ತಡ್ಕ

 ಪುತ್ತೂರು: ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿ ಪೂಜೆಯು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಷಿವಾದದೊಂದಿಗೆ ಫೆ.೧೬ ರಿಂದ ೧೯ರ ವರೆಗೆ ಶ್ರೀ ಕ್ಷೇತ್ರದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯೊಂದಿಗೆ ಜರಗಲಿರುವುದು.

ಫೆ.16ರಂದು ಹೊರೆ ಕಾಣಿಕೆ:
ಶ್ರೀ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಸಂದರ್ಭ ಭಕ್ತಾಧಿಗಳಿಂದ ಹೊರೆ ಕಾಣಿಕೆಯು ಜರಗಲಿದ್ದು, ಹೊರೆ ಕಾಣಿಕೆಯು ಫೆ.೧೬ ರಂದು ಪೂರ್ವಾಹ್ನ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಇಲ್ಲಿಂದ ಬೃಹತ್ ಮೆರವಣಿಗೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಹೊರಡಲಿರುವುದು. ಸಂಪ್ಯ ಆರ್ಯಾಪು ಶ್ರೀ ಮಹಾವಿಷ್ಣು ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಹೊರೆ ಕಾಣಿಕೆಗೆ ಚಾಲನೆ ನೀಡಲಿರುವರು. ಮಧ್ಯಾಹ್ನ ಶ್ರೀ ಕ್ಷೇತ್ರಕ್ಕೆ ತಂತ್ರಿವರ್ಯರ ಆಗಮನವಾಗಲಿದ್ದು, ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತ ಮಾಡಲಾಗುವುದು. ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಾಸಾದ ಪರಿಗ್ರಹ, ಪ್ರಾಸಾದಶುದ್ದಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ನೂತನ ಬಿಂಬ ಜಲಧಿವಾಸ, ವಾಸ್ತು ಪೂಜಾಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ.

ಸಭಾ ಕಾರ್ಯಕ್ರಮ:
ರಾತ್ರಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಆದಿ ದ್ರಾವಿಡ ಸಮಾಜದ ಮುಖಂಡರಾದ ದೇವದಾಸ್ ಕೃಷ್ಣಾಪುರರವರು ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ತಾಲೂಕು ಪಂಚಾಯತ್ ಕಡಬದ ಅಧ್ಯಕ್ಷೆ ಕು.ರಾಜೇಶ್ವರಿ, ಸಂಪ್ಯ-ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಉದಯರವಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್, ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ಎಸ್.ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಎಸ್.ಬಿ. ಜಯರಾಮ್ ರೈ ಬಳಜ್ಜ, ಸುಳ್ಯ ಉಬರಡ್ಕದ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ರೈ ಉಬರಡ್ಕ., ರೋಟರಿ ಸ್ವರ್ಣ, ಪುತ್ತೂರು ನಿಯೋಜಿತ ಅಧ್ಯಕ್ಷ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಕುಕ್ಕಾಡಿ ತಂತ್ರಿವರ್ಯರಾದ ಪ್ರೀತಂ ಪುತ್ತೂರಾಯ, ಆರ್ಯಾಪು ಗುತ್ತಿನ ಮನೆ ಫಣಿರಾಜ್ ಜೈನ್, ಮಂಜಪ್ಪ ರೈ ಬಾರಿಕೆ ಮನೆತನ ಆರ್ಯಾಪುರವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ನೇರಳಕಟ್ಟೆ-ಆರ್ಯಾಪು, ಜ್ಯೋತಿಷ್ಯ ಶಿರೋಮಣಿ(ಸಂಸ್ಕೃತ ಎಂ.ಎ.)ಗಳಾದ ಗಣೇಶ್ ಭಟ್ ಕೇಕನಾಜೆ, ಸ್ಥಳ ದಾನಿಗಳೂ ಹಾಗೂ ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ದೈವಜ್ಞರಾದ ಶ್ರೀಮತಿ ಗೋಪಿರವರಿಗೆ ಅಲ್ಲದೆ ಶ್ರೀ ಅಮ್ಮನವರ ದೇವಸ್ಥಾನದ ಜಿರ್ಣೋದ್ದಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ದೇವಸ್ಥಾನದ ಜಿರ್ಣೋದ್ದಾರಕ್ಕೆ ಪ್ರಮುಖ ಕಾರಣಕರ್ತರಾದ ಶ್ರೀ ಅಮ್ಮನವರ ಸೇವಾ ಸಮಿತಿಯ ಸದಸ್ಯರಿಗೆ ಹಾಗೂ ಇತರರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ “ಅಮ್ಮನ ಪ್ರಸಾದ” ನಡೆಯಲಿದೆ. ಬಳಿಕ `ಮನಿವಂಶಿ ಮ್ಯೂಸಿಕ್ ಪುತ್ತೂರು’ ಬಿ.ಕೆ. ಸುಂದರ್ ನೆಲ್ಲಿಗುಂಡಿ ಬಪ್ಪಳಿಗೆ ಪುತ್ತೂರು ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಲಿರುವುದು.

ಫೆ.೧೭, ಬುಧವಾರ:
ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಚಂಡಿಕಾ ಹೋಮ, ಶ್ರೀ ಅಮ್ಮನವರ ಪ್ರತಿಷ್ಟೆ, ಸ-ಪರಿವಾರ ದೈವಗಳಾದ ಸತ್ಯ ಸಾರಾಮಾನಿ, ಅಣ್ಣಪ್ಪ ಪಂಜುರ್ಲಿ, ಗುಳಿಗ, ಸನ್ನಿಧಿ ಗುಳಿಗ ದೈವಗಳ ಪ್ರತಿಷ್ಟೆ ಅಶ್ಲೇಷಾ ಬಲಿ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆಸಾರ್ವಜನಿಕ ಅನ್ನ ಸಂತರ್ಪಣೆ “ಅಮ್ಮನ ಪ್ರಸಾದ” ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಶಿವಾನಂದ ಶೆಣೈ ಪುತ್ತೂರು ಸಾರಥ್ಯದ ಸಮ್ರೃದ್ದಿ ಮ್ಯೂಸಿಕಲ್ಸ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ. ಸಂಜೆ ಕಲ್ಲುರ್ಟಿ ದೈವದ ಅಭಯ ಸ್ವೀಕಾರ, ಸಂಜೆ ಶ್ರೀ ಅಮ್ಮನವರಿಗೆ ಮಹಾಪೂಜೆ, ಕ್ಷೇತ್ರದ ಇತರೇ ದೈವಗಳಿಗೆ ಪೂಜೆ, ಶ್ರೀ ಅಮ್ಮನವರಿಂದ ಹಾಗೂ ಸ-ಪರಿವಾರ ದೈವಗಳಿಂದ ಅಭಯ ಸ್ವೀಕಾರ, ಶ್ರೀ ಅಮ್ಮನವರ ಭಂಡಾರ ತೆಗೆಯುವುದು ಉತ್ಸವ ಬಯಲು `ಆರ್ಯಾಪು ನೇರಳಕಟ್ಟೆ’ ಮೂಲ ಕ್ಷೇತ್ರಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಕೊಂಡೊಯ್ಯುವುದು.

ಸಭಾ ಕಾರ್ಯಕ್ರಮ:
ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಮ್ಮನವರ ದೇವಸ್ಥಾನ, ಆರ್ಯಾಪು-ನೇರಳಕಟ್ಟೆ ಇದರ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್‌ಮೂಲೆರವರು ಅಧ್ಯಕ್ಷತೆ ವಹಿಸಲಿರುವರು. ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಧಾರ್ಮಿಕ ಪ್ರವಚನ ನೀಡಲಿರುವರು. ಮುಖ್ಯ ಅಭ್ಯಾಗತರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವು, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಆದಿ ದ್ರಾವಿಡ ಸಮಾಜದ ಮುಖಂಡರಾದ ಮೋಹನ್ ನೆಲ್ಲಿಗುಂಡಿ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಗಂಗಾಧರ ಸೀಗೆಬಲ್ಲೆ, ಆರ್ಯಾಪು ವ್ಯ.ಸೇ.ಸ.ಬ್ಯಾಂಕ್‌ನ ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಪುತ್ತೂರು ವಿಶ್ವ ಬ್ರಾಹ್ಮಣ ಸಂಘ ಹಾಗೂ ರಾಧಾಕೃಷ್ಣ ಮಂದಿರದ ಉಪಾಧ್ಯಕ್ಷರಾದ ಎಸ್.ಭುಜಂಗ ಆಚಾರ್ಯ, ಪಣಿರಾಜ ಜೈನ್ ಗುತ್ತಿನ ಮನೆ ಆರ್ಯಾಪು, ಆರ್ಯಾಪು ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಆರ್ಯಾಪು ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಸಿ.ಟಿ ಸುರೇಶ್‌ರವರು ಭಾಗವಹಿಸಲಿದ್ದಾರೆ.

ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ “ಅಮ್ಮನ ಪ್ರಸಾದ”, ಬಳಿಕ ಶ್ರೀ ಬೆಂಕೆನಾಥೇಶ್ವರ, ಕ್ರಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು, ಬಾಳ, ಮಂಗಳೂರು ದ.ಕ. ಇವರಿಂದ ಯಕ್ಷಗಾನ ಬಯಲಾಟ ಶ್ರೀ ಜಗದೀಶ ರೈ, ಲೋಕೋಪಯೋಗಿ ಇಲಾಖೆ ೧ನೇ ದರ್ಜೆ ಗುತ್ತಿಗೆದಾರರು ಮಡಿಕೇರಿ ಇವರ ಪ್ರಾಯೋಜಕತ್ವದ `ಮಹಿಮೆದ ಮಂತ್ರ ದೇವತೆ'(ತುಳುನಾಡಿನ ಜನರ ಮನಗಳಲ್ಲಿ ನೆಲೆಯಾದ ಶ್ರೀ ದೇವಿಯ ಭಕ್ತಿಪ್ರಧಾನ ಸತ್ಯಕಥೆ)ಯು ಪ್ರದರ್ಶನಗೊಳ್ಳಲಿದೆ.

ಫೆ.18, ಗುರುವಾರ:
ಪ್ರಾತ:ಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಷ್ಟಾಪಿಸುವುದು. ಪ್ರಾತ:ಕಾಲ ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು. ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ ದೈವಗಳಿಗೆ ಪೂಜೆ, ಮಧ್ಯಾಹ್ನ ಮಡಸ್ಥಾನ ಸೇವೆ, ಶ್ರೀ ಅಮ್ಮನವರು ಹಾಗೂ ಇತರೇ ದೈವಗಳಿಂದ ಅಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ `ಅಮ್ಮನ ಪ್ರಸಾದ’, ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ಥಾನಕ್ಕೆ ಕೊಂಡೊಯ್ಯುವುದು ಹಾಗೂ ಪ್ರತಿಷ್ಟಾಪಿಸುವುದು. ಫೆ.೧೯ ರಂದು ಶುಕ್ರವಾರ ಪೂರ್ವಾಹ್ನ ಶುದ್ಧ ಕಲಶ ಮತ್ತು ತಂಬಿಲ ನಡೆಯಲಿದೆ.

ಸಹಕಾರ ನೀಡುವ ಸಂಘ-ಸಂಸ್ಥೆಗಳು:
ನಾಲ್ಕು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯುವ ಈ ಬ್ರಹ್ಮಕಲಶೋತ್ಸವವಕ್ಕೆ ಶ್ರೀ ಅಮ್ಮನವರ ಸೇವಾ ಸಮಿತಿ ಆರ್ಯಾಪು-ನೇರಳಕಟ್ಟೆ, ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಬೂಡಿಯಾರು-ಹೊಸಮನೆ, ಆರ್ಯಾಪು, ಕಂಬಳತ್ತಡ್ಡ ಆರ್ಯಾಪು ಶ್ರೀ ಕೃಷ್ಣ ಯುವಕ ಮಂಡಲ, ಆರ್ಯಾಪು-ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ, ಪುತ್ತೂರು ಸಂಟ್ಯಾರು ಒಕ್ಕೂಟ ಶ್ರೀ ಕ್ಷೇತ್ರ ಗ್ರಾಮಾಭಿವೃರ್ದಧಿ ಯೋಜನೆ, ಸಂಪ್ಯ ಶ್ರೀ ರಾಮನಗರ ನವಚೇತನಾ ಯುವಕ ಮಂಡಲ, ಮೇರ್ಲ ನವರಾತ್ರಿ ಭಜನಾ ಸಮಿತಿ, ಬೂಡಿಯಾರು-ಹೊಸಮನೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ, ಆರ್ಯಾಪು ಶ್ರೀ ಪೂಮಾಣಿ-ಕಿನ್ನಿಮಾನಿ ದೈವಸ್ಥಾನ ಸಮಿತಿ ಬಾರಿಕೆ, ಕಂಬಳತ್ತಡ್ಡ ಶ್ರೀ ಲಕ್ಷ್ಮೀ ಸ್ತ್ರೀ ಶಕ್ತಿ ಗುಂಪು ಅಂಗನವಾಡಿ ಕೇಂದ್ರ, ಕಂಬಳತ್ತಡ್ಡ ಶ್ರೀ ದುರ್ಗಾ ಸ್ತ್ರೀ ಶಕ್ತಿ ಗುಂಪು ಅಂಗನವಾಡಿ ಕೇಂದ್ರ ಇವುಗಳು ಸಹಕಾರ ನೀಡಲಿವೆ.

ಈ ಪುಣ್ಯ ಕಾರ್ಯದಲ್ಲಿ ಭಗವದ್ಬಕ್ತ ಬಂಧುಗಳಾದ ತಾವೆಲ್ಲರೂ ಸಕುಟುಂಬ ಸಮೇತರಾಗಿ ಭಾಗವಹಿಸಿ ತ್ರಿಕರಣಪೂರ್ವಕವಾಗಿ ಸಹಕಾರ ನೀಡುವುದರೊಂದಿಗೆ ತತ್ಸಬಂದವಾಗಿ ಶ್ರೀ ಕ್ಷೇತ್ರದಲ್ಲಿ ನಡೆಯಲ್ಲಿರುವ ಎಲ್ಲಾ ಧಾರ್ಮಿಕ, ವೈದಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಂಧ-ಪ್ರಸಾದ ಸ್ವೀಕರಿಸಿ ಶ್ರೀ ಅಮ್ಮನವರ ಕ್ರಪೆಗೆ ಪಾತ್ರರಾಗಬೇಕಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಶನ್‌ಮೂಲೆ, ಅಧ್ಯಕ್ಷರಾದ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳಿತ ಮೊಕ್ತೇಸರರಾದ ಗಂಗಾಧರ ಸೀಗೆಬಲ್ಲೆ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಕೋಶಾಧಿಕಾರಿ ಸುರೇಶ್ ಪಿ, ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಶ್ರೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶಕ್ಕೆ ಹೊರೆ ಕಾಣಿಕೆ ಮೆರವಣಿಗೆಯು ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಡಲಿರುವುದು.
*ಹೊರೆ ಕಾಣಿಕೆ ಸಂದರ್ಭದಲ್ಲಿ ಶ್ರೀ ಅಮ್ಮನಿಗೆ ಗ್ರಾಮದ ಎಲ್ಲಾ ಮನೆಗಳಿಂದ ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಬೇಕಾಗಿ ವಿನಂತಿ
*ಹೊರೆ ಕಾಣಿಕೆ ಸಮರ್ಪಿಸುವ ಭಕ್ತಾಭಿಮಾನಿಗಳು ತಮ್ಮ ಹೊರೆಕಾಣಿಕೆಯ ವಸ್ತುಗಳನ್ನು ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಬಳಿಯಿರುವ ಗಣೇಶ-ಸುಬ್ರಹ್ಮಣ್ಯ ಕಟ್ಟೆಯಲ್ಲಿ ತಂದಿಡಬಹುದು. ಅಲ್ಲಿಂದ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು.
*ಊರ-ಪರ ಊರ ಭಕ್ತಾಭಿಮಾನಿಗಳಿಂದ ಬ್ರಹ್ಮಕಲಶಕ್ಕೆ ಬೇಕಾಗುವ ಅಕ್ಕಿ, ಬಾಳೆ ಎಲೆ, ತೆಂಗಿನ ಕಾಯಿ, ತರಕಾರಿ, ಹಿಂಗಾರ,ಸಿಯಾಲ,ಬಾಳೆಗೊನೆ. ಇತ್ಯಾದಿಗಳನ್ನು ಸ್ವೀಕರಿಸಲಾಗುವುದು.
* ಮಹಾ ಪೂಜೆಯ ಸಂದರ್ಭದಲ್ಲಿ ಶ್ರೀ ಅಮ್ಮನವರಿಗೆ ಮಡಸ್ಥಾನ ಸೇವೆ (ವಿಶೇಷ ಸೇವೆ ಸಮರ್ಪಿಸುವವರು) ದಿನಾಂಕ : 17-02-2021 ರೊಳಗೆ ತಿಳಿಸುವಂತೆ ಕೋರಲಾಗಿದೆ.
* ಶ್ರೀ ಅಮ್ಮನವರ ದೂತರಿಗೆ ಬಲಿ ನೀಡಲಿರುವ ಕೋಳಿಗಳನ್ನು ದಿನಾಂಕ 18-02-2021 ರಂದು ಪ್ರಾತ:ಕಾಲ ೦೪.30 ಕ್ಕೆ ಮುಂಚೆ ತಂದೊಪ್ಪಿಸುವುದು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.