HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ: ಶಿವಂ ಡಿಜಿಟಲ್ ಸರ್ವಿಸಸ್‌ನಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ಮೇಳ ಫೆ. 15 ರಿಂದ 20 ರವರೆಗೆ ನಡೆಯಲಿದ್ದು, ಇದರ ಉದ್ಘಾಟನೆ ಫೆ. 15 ರಂದು ಬೆಳಿಗ್ಗೆ ನಡೆಯಿತು.

ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್ ದೀಪ ಬೆಳಗಿಸಿ ಮೇಳವನ್ನು ಉದ್ಘಾಟಿಸಿದರು. ಆಧಾರ್ ಕಾರ್ಡ್ ನಮ್ಮ ಮೂಲ ದಾಖಲೆಯಾಗಿದೆ. ಯಾವುದೇ ಇತರ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡಬೇಕಾಗಿದೆ. ಆಧಾರ್ ಕಾರ್ಡ್ ಲ್ಲಿ ವ್ಯತ್ಯಾಸವಿದ್ದಾಗ ಸಮಸ್ಯೆಗೆ ಒಳಗಾಗುತ್ತೇವೆ. ಹೀಗಾಗಿ ಆಧಾರ್ ಕಾರ್ಡ್ ಲ್ಲಿ ತಿದ್ದುಪಡಿಗಳು ಅನಿವಾರ್ಯವಾಗಿರುತ್ತವೆ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ ಅತೀ ಮುಖ್ಯವಾಗಿದೆ. ಆದ್ದರಿಂದ ಜನರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್ ರವರು ಮಾತನಾಡಿ ‘ಶಿವಂ ಡಿಜಿಟಲ್ ರವರ ಮನವಿ ಮೇರೆಗೆ ಐದು ದಿನಗಳ ಕಾಲ ಆಧಾರ್ ಮೇಳ ನಡೆಯಲಿದೆ. ಮಕ್ಕಳು ಮತ್ತು ವಿಕಲಚೇತನರು ಹೆಚ್ಚು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ಸರಕಾರದ ಸೌಲಭ್ಯ ಸಿಗಬೇಕಾದರೆ ಆಧಾರ್ ಕಾರ್ಡ್ ಸರಿಯಾಗಿರಬೇಕಾಗುತ್ತದೆ. ಅಂಚೆ ಇಲಾಖೆಯ ಹಲವು ಯೋಜನೆಗಳ ಮಾಹಿತಿಯನ್ನು ಈ‌ ಮೇಳದ ಜೊತೆಗೆ ನೀಡುತ್ತಿದ್ದೇವೆ ಎಂದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಆಗಮಿಸಿ ಶುಭ ಹಾರೈಸಿದರು.

ಬೆಟ್ಟಂಪಾಡಿ ಗ್ರಾ.ಪಂ. ಮಾಜಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಹಾಲಿ ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ರಮ್ಯ ದಿವಾಕರ್, ಮಹೇಶ್ ಕೋರ್ಮಂಡ ಬೆಟ್ಟಂಪಾಡಿ ಪೋಸ್ಟ್ ಮಾಸ್ಟರ್ ಶ್ರೀಮತಿ ಅನಿತಾ, ಆಧಾರ್ ಆಪರೇಟರ್ ಅಶೋಕ್, ಕುಂಞಿಕೃಷ್ಣ ಮಣಿಯಾಣಿ ತಲೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಶಿವಂ ಡಿಜಿಟಲ್ ಸರ್ವಿಸಸ್ ನ ಮ್ಹಾಲಕ‌ ರಂಜಿತ್ ತಲೆಪ್ಪಾಡಿಯವರು ಸ್ವಾಗತಿಸಿದರು.


Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.