ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಬನ್ನೂರು ನೀರ್ಪಾಜೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಿಶಲ್ ಸ್ಟೀಲ್ ಇಂಡಸ್ಟ್ರೀಸ್, ಬೊಳ್ವಾರುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಶಲ್ ಸ್ಟೀಲ್ಸ್, ಬಿ.ಸಿ ರೋಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾ ಸ್ಟೀಲ್ ಸಂಸ್ಥೆಯು ಇದೀಗ ನಾಲ್ಕನೇ ಕೊಡುಗೆಯಾಗಿ ಕ್ರಿಶಲ್ ಚಿಕನ್ಸ್ ಎಂಬ ಕೋಳಿ ಉದ್ಯಮ ಸಂಸ್ಥೆಯು ಫೆ.೧೫ ರಂದು ಹಾರಾಡಿಯಲ್ಲಿನ ರೈಲ್ವೇ ಬ್ರಿಡ್ಜ್ ಬಳಿ ಉದ್ಘಾಟನೆಗೊಂಡಿದೆ.
ಬನ್ನೂರು ಸಂತ ಅಂತೋನಿ ಚರ್ಚ್ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ನೂತನ ಉದ್ಯಮಕ್ಕೆ ಪವಿತ್ರ ಜಲ ಸಂಪ್ರೋಕ್ಷಿಸಿ ಆಶೀರ್ವಚನ ನೀಡಿ ಮಾತನಾಡಿ, ದೇವರು ಪ್ರತಿಯೋರ್ವರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಆದರೆ ಆ ಪ್ರತಿಭೆಯನ್ನು ಯಾವ ರೀತಿ ಸಮಾಜದಲ್ಲಿ ತೋರ್ಪಡಿಸಬೇಕೆನ್ನುವುದು ಅತೀ ಮುಖ್ಯವಾಗಿದೆ. ಅದರಂತೆ ಕಿರಣ್ ಹಾಗೂ ಸಂಗಡಿಗರು ದೇವರು ಉದಾರತೆಯಿಂದ ದಯಪಾಲಿಸಿದ ಈ ಜಾಗದಲ್ಲಿ ಕೋಳಿ ಉದ್ಯಮವನ್ನು ಆರಂಭಿಸುವತ್ತ ಸೂಕ್ತ ಹೆಜ್ಜೆಯನ್ನಿಟ್ಟಿರುವಿರಿ. ನಿಮ್ಮಲ್ಲಿನ ಯೋಚನೆ, ಯೋಜನೆಗಳು ಮುಂದಿನ ದಿನಗಳಲ್ಲಿ ಕಾರ್ಯಾರೂಪಕ್ಕೆ ಬರುವ ಮೂಲಕ ಈ ಉದ್ಯಮದಲ್ಲಿ ಯಶಸ್ವಿ ಹೊಂದುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮತ್ತೋರ್ವ ಧರ್ಮಗುರು, ಸಂತ ಅಂತೋನಿ ಚರ್ಚ್ನ ಸಹಾಯಕ ಧರ್ಮಗುರು ವಂ|ಪ್ರೇಮ್ ಡಿ’ಸೋಜರವರು ಮಾತನಾಡಿ, ದೇವರು ಕೊಟ್ಟ ಜ್ಞಾನ ಹಾಗೂ ವಿವೇಕವನ್ನು ಉಪಯೋಗಿಸಿ ನಮ್ಮಲ್ಲಿನ ಪ್ರತಿಭೆಯನ್ನು ಪ್ರಚುರಪಡಿಸುವಂತಾಗಬೇಕು. ಜನರ ಅವಶ್ಯಕತೆಗಳನ್ನು ಪೂರೈಸಲು ಈ ಭಾಗದಲ್ಲಿ ಕಿರಣ್ರವರು ಕೋಳಿ ಉದ್ಯಮವನ್ನು ಆರಂಭಿಸಿದ್ದಾರೆ. ಸಂಸ್ಥೆಯ ಮಾಲಕರಲ್ಲಿನ ಆಸೆ-ಆಕಾಂಕ್ಷೆಗಳು ಏನಿದೆಯೋ ಅವೆಲ್ಲವನ್ನು ದೇವರು ಈಡೇರಿಸಲಿ. ನೂತನ ಸಂಸ್ಥೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕು ಎಂದರು.
ನಗರಸಭಾ ಸದಸ್ಯರಾದ ಗೌರಿ ಬನ್ನೂರು, ರಾಬಿನ್ ಸಾಲ್ಮರ, ಪುತ್ತೂರು ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಪುತ್ತೂರು ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ ಬನ್ನೂರು, ಬನ್ನೂರು ಸಂತ ಅಂತೋನಿ ಚರ್ಚ್ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಜೆರಿ ಪಾಸ್, ಜೋಕಿಂ ಮಿನೇಜಸ್ ಸೇಡಿಯಾಪು, ವಿಲಿಯಂ ಗಲ್ಬಾವೋ ಹಾರಾಡಿ, ನಮ್ಮ ಸ್ಟುಡಿಯೋ ಮಾಲಕ ತೋಮಸ್ ಗೊನ್ಸಾಲ್ವಿಸ್, ಮರಿಯಾ ಪ್ಲಾಸ್ಟಿಕ್ ಹಾಗೂ ಅಲ್ಯೂಮಿನಿಯಂನ ಸಂತೋಷ್ ಡಿ’ಸೋಜ, ಸಂಸ್ಥೆಯ ಮಾಲಕ ಕಿರಣ್ರವರ ಕುಟುಂಬಸ್ಥರ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ರಿಶಲ್ ಸ್ಟೀಲ್ ಸಂಸ್ಥೆಯ ವಿಜಿತ್ ತೆಂಕಿಲ ಸ್ವಾಗತಿಸಿ, ವಿಜಯಚಂದ್ರ ವಂದಿಸಿದರು.
ಕಳೆದ ಹಲವು ವರ್ಷಗಳಿಂದ ಕ್ರಿಶಲ್ ಹೆಸರಿನಲ್ಲಿ ಸ್ಟೀಲ್ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದೇವೆ. ಗ್ರಾಹಕರ ಹಾಗೂ ನನ್ನ ಆತ್ಮೀಯ ಗೆಳೆಯರ ತುಂಬು ಹೃದಯದ ಸಹಕಾರದಿಂದ ಬೊಳ್ವಾರು, ಬಿ.ಸಿ ರೋಡ್, ನೀರ್ಪಾಜೆಯಲ್ಲಿ ಸ್ಟೀಲ್ ಇಂಡಸ್ಟ್ರೀಸ್ ಉದ್ಯಮವನ್ನು ಈಗಾಗಲೇ ವಿಸ್ತರಿಸಿದ್ದೇವೆ. ಇದೀಗ ಸ್ಟೀಲ್ ಉದ್ಯಮದೊಂದಿಗೆ ಕೋಳಿ ಉದ್ಯಮವನ್ನು ಆರಂಭಿಸಿ ಜನರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ನೂತನವಾಗಿ ಉದ್ಯಮವನ್ನು ಆರಂಭಿಸಿದ್ದೇವೆ. ಗ್ರಾಹಕರಿಗೆ ನಗುಮುಖದ ಸೇವೆಯೊಂದಿಗೆ ಸೇವೆಯನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರ ಆಶೀರ್ವಾದವೇ ನಮಗೆ ಶ್ರೀರಕ್ಷೆಯಾಗಿದೆ.
-ಕಿರಣ್ ಡಿ’ಸೋಜ, ಮಾಲಕರು, ಕ್ರಿಶಲ್ ಚಿಕನ್ಸ್
ಕ್ರಿಶಲ್ ಚಿಕನ್ಸ್ನ ಮಾಲಕ ಕಿರಣ್ ಡಿ’ಸೋಜರವರ ತಾಯಿ ಹಿಲ್ಡಾ ಡಿ’ಸೋಜ ಹಾಗೂ ಪತ್ನಿ ಸ್ಟೆಫಿರವರು ಜೊತೆಗೂಡಿ ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಗೊಳಿಸಿದರು.
ಸಹ ಸಂಸ್ಥೆಗಳು…
-ಕ್ರಿಶಲ್ ಸ್ಟೀಲ್ ಇಂಡಸ್ಟ್ರೀಸ್, ನೀರ್ಪಾಜೆ-ಬನ್ನೂರು
-ಕ್ರಿಶಲ್ ಸ್ಟೀಲ್ಸ್, ಬೊಳ್ವಾರು
-ಪ್ರಿಯಾ ಸ್ಟೀಲ್, ಬಿ.ಸಿ ರೋಡ್