ಪುತ್ತೂರು: ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕಾನೂನು ಸಂಯೋಜಕರಾಗಿ ಶೈಲಜಾ ಅಮರನಾಥರವರು ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಕರ್ನಾಟಕ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಜೆನೆಟ್ ಡಿಸೋಜಾರವರು ಈ ನೇಮಕಾತಿ ಮಾಡಿದ್ದಾರೆ. ಪುತ್ತೂರು ಬಪ್ಪಳಿಗೆ ನಿವಾಸಿಯಾಗಿದ್ದು ವಕೀಲರಾಗಿರುವ ಶೈಲಜಾ ಅಮರನಾಥರವರು ಪ್ರಸ್ತುತ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ.