HomePage_Banner
HomePage_Banner
HomePage_Banner
HomePage_Banner

ಪಾಂಗ್ಲಾಯಿ ಶಾಂತಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 25ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ, ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದರ್ಬೆ ಪಾಂಗ್ಲಾಯಿ ಶ್ರೀ ಶಾಂತಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೨೫ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಸನ್ಮಾನ ಕಾರ್ಯಕ್ರಮಗಳು ಫೆ.೧೫ರಂದು ನಡೆಯಿತು.


ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೆ.೧೪ರ ಸಂಜೆ ಸ್ಥಳ ಶುದ್ದಿ, ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೆಘ್ನ ಹೋಮ ಹಾಗೂ ಪ್ರಸಾದ ವಿತರಣೆ ನಡೆಯಿತು. ಫೆ.೧೫ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸನ್ಮಾನ:
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಕ್ಷೇತ್ರದ ಮೊಕ್ತೇಸರ ಟಿ. ಸುಂದರ ಗೌಡ, ಉದ್ಯಮಿ, ಕೊಡುಗೈ ದಾನಿ ಸಚಿನ್ ಟ್ರೇಡರ್‍ಸ್‌ನ ಮ್ಹಾಲಕ ಮಂಜುನಾಥ ನಾಯಕ್ ಹಾಗೂ ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾತನಾಡಿ, ವಿಶೇಷವಾಗಿ ತಾಯಿಯ ಸ್ಥಾನವನ್ನು ನೀಡುವ ದೇವಿಯ ಆರಾಧನೆಯಿಂದ ೩೩ ಕೋಟಿ ದೇವತತೆಗಳ ಆರಾಧನೆ ಮಾಡಿದ ಫಲವಿದೆ. ಕ್ಷೇತ್ರದಲ್ಲಿ ಭಕ್ತರ ನಿರಂತರ ಸೇವೆಯಿಂದ ಸಾನಿಧ್ಯದ ವೃದ್ಧಿಯಾಗುತ್ತದೆ. ಲೋಕಕಲ್ಯಾಣಾರ್ಥ ಹಾಗೂ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಇಲ್ಲಿ ಶತ ಚಂಡಿಕಾಯಾಗ ನಡೆದಿರುವುದು ಇಲ್ಲಿನ ವಿಶೇಷವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ, ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, ನಮ್ಮಲ್ಲಿನ ಶ್ರದ್ಧೆ ಹಾಗೂ ಶ್ರದ್ಧಾಕೇಂದ್ರಗಳಿಗೆ ಹೊಗುವ ಮೂಲಕ ನೆಮ್ಮದಿಯ ಜೀವನ ಸಾಧ್ಯ. ಜೀವನದಲ್ಲಿ ಬರುವ ಕಷ್ಟಗಳ ಮೂಲಕ ದೇವರು ನಮ್ಮನ್ನು ಪರೀಕ್ಷಿಸುತ್ತಾರೆ. ನಾವು ಸತ್ಯಕ್ಕೆ ಬದ್ಧರಾಗಿರಬೇಕು. ಭರವಸೆಯಿಂದ ದೇವರ ಆರಾಧನೆ ಮಾಡಬೇಕು ಎಂದರು.

ಪಾಂಗ್ಲಾಯಿ ಶ್ರೀಮುಂಡ್ಯತ್ತಾಯ ದೈವಸ್ಥಾನದ ಅಧ್ಯಕ್ಷ ವಿನಯ ಭಂಡಾರಿ, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ದರ್ಬೆ ವಾಣಿ ವಿಲಾಸ್ ಹೋಟೆಲ್‌ನ ಮ್ಹಾಲಕ ಶ್ರೀಪತಿ ರಾವ್, ಸಚಿನ್ ಟ್ರೇಡರ್‍ಸ್‌ನ ಮ್ಹಾಲಕ ಮಂಜುನಾಥ ನಾಯಕ್ ಮೊಕ್ತೇಸರ ಟಿ. ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೀತಲ್ ಹರೀಶ್ ಆಚಾರ್ಯ ಪ್ರಾರ್ಥಿಸಿದರು. ಪುಂಡಲಿಕ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ಸದಾಶಿವ ಗೌಡ, ನಿತೀನ್ ಪಾಂಗ್ಲಾಯಿ , ಬಾಲಕೃಷ್ಣ ಗೌಡ, ಲಿಂಗಪ್ಪ ಗೌಡ, ಯೋಗಿನಿ, ಗಣೇಶ್ ಬೊಳುವಾರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.