ಕಡಬ: ಜೀರ್ಣೋದ್ಧಾರಗೊಂಡಿರುವ ಕೇನ್ಯ ಗ್ರಾಮದ ಕಯಂಬಾಡಿ ಮಠದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರು ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮವು ಫೆ.೧೫ರಿಂದ ಫೆ.೧೭ರವರೆಗೆ ನಡೆಯಲಿದ್ದು, ಫೆ.೧೫ರಂದು ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿತು.
ಫೆ,೧೫ರಂದು ಮಂಗಳೂರು ಹಾಗೂ ಕೇನ್ಯ ಗ್ರಾಮದ ಸುತ್ತ ಮುತ್ತಲಿನಿಂದ ಕ್ಷೇತ್ರಕ್ಕೆ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ ಕ್ಷೇತ್ರದ ಋತ್ವಿಜರ ಆಗಮನ ಬಳಿಕ ಗೇಹ ಪ್ರತಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ವಾಸ್ತು ಹೋಮ, ರಕ್ಷೆಘ್ನ ಹೋಮ, ಭೂವರಾಹ ಹೋಮ ನಡೆಯಿತು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಅಚ್ಯುತ ಭಟ್, ಆಡಳಿತ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಬನ್ನಿಂತಾಯ, ವಾಸುದೇವ ರಾವ್ ಕುಡುಪು ಸಂಚಾಲಕರಾದ ಪುಟ್ಟಣ್ಣ ಗೌಡ ಕಯಂಬಾಡಿ, ಶಿವಪ್ಪ ಗೌಡ ಕಯಂಬಾಡಿ ಸೇರಿದಂತೆ ಹಲವಾರು ಪ್ರಮುಖರು ಆಡಳಿತ ಸಮಿತಿಯವರು, ಊರವರು ಉಪಸ್ಥಿತರಿದ್ದರು.
ಇಂದು ದೇವಳದಲ್ಲಿ:
ಫೆ.೧೬ರಂದು ಪೂರ್ವಾಹ್ನ ಗಣಪತಿ ಹೋಮ, ನವಗ್ರಹ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಪವಮಾನ ಹೋಮ, ಸಂಜೆ ಸುದರ್ಶನ ಹೋಮ, ಕಲಶ ಮಂಡಲ ರಚನೆ ನಡೆಯಲಿದೆ.