HomePage_Banner
HomePage_Banner
HomePage_Banner
HomePage_Banner

ಕಾಂಚನ ನಡ್ಪ ದೇವಸ್ಥಾನದ ವರ್ಷಾವಧಿ ಜಾತ್ರೆ-ದರ್ಶನ ಬಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಗ್ರಾಮ ದೇವರಾದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಅಂಗವಾಗಿ ದೇವರ ದರ್ಶನ ಬಲಿ ಉತ್ಸವ ಫೆ.13ರಂದು ನಡೆಯಿತು.

ಫೆ.೧೨ರಂದು ಗೊನೆ ಮುಹೂರ್ತದೊಂದಿಗೆ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು ಫೆ.೧೩ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಪ್ಪಸೇವೆ ನಡೆಯಿತು. ಬಳಿಕ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ, ಭಂಡಾರ ತೆಗೆಯುವ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ವರ್ಣರು ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಿತು. ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜಾತ್ರೋತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ದೇವಸ್ಥಾನದ ಮೊಕ್ತೇಸರರೂ ಆಗಿರುವ ಅರ್ಚಕ ನಾರಾಯಣ ಬಡೆಕ್ಕಿಲ್ಲಾಯ ಹಾಗೂ ಇತರೇ ಅರ್ಚಕರು ಸಹಕರಿಸಿದರು.

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಟ್ರಸ್ಟ್‌ನ ಗೌರವಾಧ್ಯಕ್ಷ ಎ.ಸುಂದರ ಗೌಡ ಕಾಂಚನ, ಅಧ್ಯಕ್ಷ ದುಗ್ಗಪ್ಪ ಗೌಡ ಅಗರ್ತಿಮಾರು, ಉಪಾಧ್ಯಕ್ಷ ಶ್ರೀಧರ ಗೌಡ ನಡ್ಪ, ಕಾರ್ಯದರ್ಶಿ ಶಿವರಾಮ ಕಾರಂತ ಉರಾಬೆ, ಜೊತೆ ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಲೋಕೇಶ ಗೌಡ ಬಜತ್ತೂರು, ಸುಮನ ಬಡೆಕ್ಕಿಲಾಯ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಕೇಶವ ಗೌಡ ಅಗರ್ತಿಮಾರು, ಕಾರ್ಯದರ್ಶಿ ಉಮೇಶ ನೆಕ್ಕರೆ, ತಾ.ಪಂ.ಸದಸ್ಯ ಮುಕುಂದ ಬಜತ್ತೂರು, ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಕಾಂಚನ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.