HomePage_Banner
HomePage_Banner
HomePage_Banner
HomePage_Banner

ಮನವಳಿಗೆ ಗುತ್ತುವಿನಲ್ಲಿ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ | ಯಕ್ಷಗಾನದ ಮೂಲಕ ಧರ್ಮ ಪ್ರಜ್ಞೆ ಮೂಡಿಸುವ ಕಾರ್ಯವಾಗಲಿ – ಒಡಿಯೂರು ಶ್ರೀ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ದೈವ ದೇವರುಗಳನ್ನು ಶ್ರದ್ಧಾ ಮತ್ತು ಭಕ್ತಿಯಿಂದ ಆರಾಧನೆ ಮಾಡಿದರೆ ದೈವದೇವರುಗಳೇ ಮನುಷ್ಯನನ್ನು ಕೈಹಿಡಿದು ಮುನ್ನಡೆಸುತ್ತಾರೆ. ಮನವಳಿಕೆ ಗುತ್ತಿನಲ್ಲಿ ದೈವ ದೇವರ ಆರಾಧನೆಯಿಂದ ಧಾರ್ಮಿಕ ಶ್ರದ್ಧೆ ಮತ್ತು ಧಾರ್ಮಿಕ ಪ್ರಜ್ಞೆ ಇದೆ. ಯಕ್ಷಗಾನದಲ್ಲಿ ನವರಸ ಕಲೆ ಇದ್ದು ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಮನುಷ್ಯನಿಗೆ ಯಕ್ಷಗಾನದಿಂದ ನೈಪುಣ್ಯತೆ, ಕೌಶಲ್ಯತೆ ಬರುವುದರ ಜೊತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಶ್ರೀ ಗುರುದೇವ ದತ್ತಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪೆರಾಬೆ ಗ್ರಾಮದ ಮನವಳಿಕೆ ಗುತ್ತುವಿನಲ್ಲಿ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಿಳಿಸಿ ಯಕ್ಷಗಾನದ ಮೂಲಕ ಧರ್ಮ ಪ್ರಜ್ಞೆ ಮೂಡಿಸುವ ಕಾರ್ಯವಾಗಲಿ ಎಂದು ತಿಳಿಸಿ ಸುಸಂಸ್ಕೃತ ಮನೆತನದಿಂದ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲು ಸಾಧ್ಯ ಎಂದು ಹೇಳಿ ಆಶಿರ್ವಾದಿಸಿದರು.

ಜಾಗತಿಕ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಐಕಳ ಮಾತನಾಡಿ ಮಕ್ಕಳಿಂದ ಸಂಸ್ಕಾರ ಉಳಿಯ ಬೇಕು. ಬಂಟ ಸಮಾಜವು ಎಲ್ಲಾ ಸಮಾಜವನ್ನು ಪ್ರೀತಿ ಮಾಡುವ ಸಮಾಜವಾಗಿದ್ದು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದುರ ಮೂಲಕ ಕೀರ್ತಿಗೆ ಪಾತ್ರವಾಗಿದೆ. ಜಾಗತಿಕ ಬಂಟ ಸಂಘಗಳ ಒಕ್ಕೂಟದಿಂದ ಇದೀಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ೧೨೦ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ ಎಂದು ಹೇಳಿ ಹೆಂಡತಿಯ ಸಹಕಾರ ಇದ್ದರೆ ಮಾತ್ರ ಗಂಡ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿ ಹೇಮಂತ್ ರೈ ಮನವಳಿಕೆ ಗುತ್ತು ರಂತಹ ಮಕ್ಕಳು ಹುಟ್ಟಿದರೆ ಆ ಕುಟುಂಬವೇ ಸಾರ್ಥಕ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಯಕ್ಷದ್ರುವ ಪಟ್ಲ ಪೌಂಡೇಷನ್‌ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ. ಹೇಮಂತ್ ರೈ ಮನವಳಿಕೆ ಗುತ್ತುರವರು ಯಕ್ಷದ್ರುವ ಪಟ್ಲ ಪೌಂಡೇಷನ್‌ನ ಚೆನೈ ಘಟಕದ ಸ್ಥಾಪನೆಗೆ ಮೂಲ ಕಾರಣೀಕರ್ತರಾಗಿದ್ದು ಆ ಮೂಲಕ ಮನವಳಿಕೆ ಗುತ್ತಿನ ಋಣವಿದೆ ಎಂದು ತಿಳಿಸಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಇನ್ನಷ್ಟು ಧರ್ಮಕಾರ್ಯ ಮಾಡಲು ಭಗವಂತ ಅನುಗ್ರಹಿಸಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಹೇಮಂತ್ ರೈ ಮನವಳಿಕೆ ಗುತ್ತುರವರು ದುರ್ಗಾದೇವಿ ರೌದ್ರವತಾರದಲ್ಲಿ ದೂಮ್ರಾಕ್ಷನನ್ನು ವಧೆ ಮಾಡಿದ ಧರ್ಮ ದೈವ ದೂಮಾವತಿ ಹಾಗೂ ಪರಿವಾರ ದೈವಗಳು ನೆಲೆನಿಂತ ಜಾಗವೇ ಮನವಳಿಕೆ ಗುತ್ತು ಆಗಿದೆ. ಮನವಳಿಕೆ ಗುತ್ತಿನಲ್ಲಿ ಹಿರಿಯರಾದ ಕರಿಯಪ್ಪ ರೈ, ಉಮೇಶ್ ರೈ ಮನವಳಿಕೆ ಹಾಗೂ ಇನ್ನಿತರರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ದಿವಸದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮನವಳಿಕೆ ಗುತ್ತಿನವರಾದ ವೈಧ್ಯಕೀಯ ಸಾಧಕರಾದ ಡಾ. ಅಭಿಷೇಕ್ ಶೆಟ್ಟಿ, ಎಕಲವ್ಯ ಪ್ರಶಸ್ತಿ ಪುರಷ್ಕೃತ ಅಭಿಷೇಕ್ ಎನ್. ಶೆಟ್ಟಿ ಅವರ ತಂದೆ ಜಗನ್ನಾಥ್ ಶೆಟ್ಟಿ , ತಾಯಿ ತುಳಸಿ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪಟ್ಟಿಯನ್ನು ನಿತ್ಯಾನಂದ ಶೆಟ್ಟಿ ಮನವಳಿಕೆ, ಸುಭಾಶ್ ರೈ ಮನವಳಿಕೆ, ಲಕ್ಷ್ಮಿನಾರಾಯಣ ರೈ ಹರೇಕಳ ರವರು ವಾಚಿಸಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘ ಇದರ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೊಡಗು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಮಡಿಕೇರಿಯ ಅಧ್ಯಕ್ಷರಾದ ಬಿ. ಕೆ ರವೀಂದ್ರ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಹೇಶ್ ಬಸ್‌ನ ಮಾಲಕರಾದ ಜಯರಾಮ ಶೇಖ, ಮನವಳಿಕೆ ಗುತ್ತಿನ ಯಜಮಾನ ರಮನಾಥ ರೈ ಉಪಸ್ಥಿತರಿದ್ದರು. ದಯಾನಂದ ರೈ ಮನವಳಿಕೆ ಗುತ್ತು ಸ್ವಾಗತಿಸಿ, ಭಾಸ್ಕರ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿ, ಅಪೂರ್ವ ಜೆ. ಶೆಟ್ಟಿ ಪ್ರಾರ್ಥಿಸಿ, ಮನವಳಿಕೆ ಗುತ್ತಿನ ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ, ವಿಜಯಕುಮಾರ್ ರೈ, ರಾಧಾಕೃಷ್ಣ ರೈ ದೆಹಲಿ, ಸುಧಾಕರ ರೈ, ಪ್ರದೀಪ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಶಾಂತ್ ರೈ ಮನವಳಿಕೆ ಗುತ್ತು ರವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಬರೋಡದ ಉಧ್ಯಮಿ ಶಶಿಧರ ಶೆಟ್ಟಿ ಬರೋಡ ಸೇರಿದಂತೆ ಊರಪರವೂರ ಹಲವು ಮಂದಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

ಮನವಳಿಕೆ ಗುತ್ತು ಧರ್ಮದೈವ ದೂಮಾವತಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಭಾಕಾರ್ಯಕ್ರಮ ನಡೆದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಚೆಂಡೆ ಹಾಗೂ ಇನ್ನಿತರ ವಾದನದೊಂದಿಗೆ ಸಿಡಿಮದ್ದು ಪ್ರದರ್ಶನದೊಂದಿಗೆ ಅನ್ನ ಸಂತರ್ಪಣೆಯ ಮೂಲಕ ವಿಜ್ರಂಭನೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹೇಮಂತ್ ರೈ ಯವರ ತಂದೆ ವಿಠಲ ರೈ ಮನವಳಿಕೆ ಗುತ್ತು, ತಾಯಿ ಕುಸುಮಾ ವಿ. ರೈ, ಪತ್ನಿ ರಶ್ಮಿ ಹೇಮಂತ್ ರೈ ಮನವಳಿಕೆ ಗುತ್ತು ಹಾಗೂ ಮನವಳಿಕೆ ಗುತ್ತಿನ ಕುಟುಂಬಸ್ಥರು ಒಟ್ಟು ಕಾರ್ಯಕ್ರಮದಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.