ಪುತ್ತೂರು: ಪಡೀಲ್- ನೆಹರುನಗರ ರಸ್ತೆಯ ಬನ್ನೂರು ಕಟ್ಟೆಯ ಬಳಿ ಫೆ.18ರಂದು ನಸುಕಿನ ಜಾವ 2.30ರ ಹೊತ್ತಿಗೆ ಅಕಾಲಿಕ ಮಳೆಯಿಂದ ಮನೆಯೊಂದು ಹಾನಿಯಾದ ಘಟನೆ ನಡೆದಿದೆ.
ಕೂಲಿ ಕಾರ್ಮಿಕ ಕುಟುಂಬವೊಂದು ವಾಸಿಸುತ್ತಿದ್ದ ಮನೆಯ ಒಳ ಭಾಗದಲ್ಲಿ ಮರದ ಪೀಠೋಪಕರಣ, ಹಂಚುಗಳು ಬಿದ್ದು ಸಂಪೂರ್ಣ ಹಾನಿಯಾಗಿವೆ.ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬ ಬೇರೆ ಕಡೆ ಹೋಗಿರುವುದರಿಂದ ಸಂಭಾವ್ಯ ಆಪಾಯ ತಪ್ಪಿದೆ.
ಘಟನಾ ಸ್ಥಳದ ಅಕ್ಕಪಕ್ಕದಲ್ಲಿದ್ದ ಮನೆಯವರಿಗೆ ದೊಡ್ಡ ಶಬ್ದವೊಂದು ಕೇಳಿದಾಗ ಈ ಸಂಭವ ನಡೆದಿದ್ದು, ಅಲ್ಲಿಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.