- ಅಧ್ಯಕ್ಷರಾಗಿ ರಾಮಚಂದ್ರ ಪೂಜಾರಿ, ಉಪಾಧ್ಯಕ್ಷರಾಗಿ ಉಷಾ ಲಕ್ಷ್ಮಣ ಪೂಜಾರಿ
ಪುತ್ತೂರು;ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಮೊದಲ ಮೂವತ್ತು ತಿಂಗಳ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮಚಂದ್ರ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆಯ್ಕೆಯಾಗಿದ್ದಾರೆ. ಒಟ್ಟ 11 ಸ್ಥಾನಗಳನ್ನು ಹೊಂದಿರುವ ಪಂಚಾಯತ್ ನಲ್ಲಿ 6 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದರು.
ಫೆ.19ರಂದು ಆಯ್ಕೆ ಪ್ರಕ್ರಿಯೆ ನಡೆದಿದೆ. ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮಚಂದ್ರ ಪೂಜಾರಿ ಹಾಗೂ ಜಯಪ್ರಕಾಶ್ ಬದಿನಾರು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಪ್ರಕಾಶ್ ಬದಿನಾರುರವರ ಸಲ್ಲಿಸಿದ ನಾಮಪತ್ರದಲ್ಲಿ ಚುನಾವಣಾ ಉದ್ದೇಶಕ್ಕಾಗಿ ತಹಶಿಲ್ದಾರ್ ರವರಿಂದ ಪಡೆದ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತ ಗೊಂಡಿದ್ದು ಬಿಜೆಪಿ ಬೆಂಬಲಿತ ರಾಮಚಂದ್ರ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಲಕ್ಷ್ಮಣ ಪೂಜಾರಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪೂರ್ಣಿಮಾ ನಾಮಪತ್ರ ಸಲ್ಲಿಸಿದ್ದು ಆಯ್ಕೆಯಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಲಕ್ಷ್ಮಣ ಪೂಜಾರಿ 6 ಮತಗಳನ್ನು ಪಡೆದು, 5 ಮತ ಪಡೆದ ಕಾಂಗ್ರೆಸ್ ಬೆಂಬಲಿತ ಪೂರ್ಣಿಮಾ ವಿರುದ್ಧ 1 ಮತದ ಅಂತರದಲ್ಲಿ ಜಯಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಚುನಾವಣಾಧಿಕಾರಿಯಾಗಿದ್ದರು. ಪಿಡಿಓ ಚಿತ್ರಾವತಿ, ಕಾರ್ಯದರ್ಶಿ ರಮೇಶ್ ಹಾಗೂ ಸಿಬಂದಿಗಳು ಸಹಕರಿಸಿದರು.
ಸದಸ್ಯರಾದ ಗೀತಾ, ಜಗನ್ನಾಥ ಶೆಟ್ಟಿ, ಮಲ್ಲಿಕಾ, ವಿಶ್ವನಾಥ, ಪುಷ್ಪಾ, ರಾಮಣ್ಣ ಗೌಡ, ಮೋಹಿನಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಗ್ರಾ.ಪಂ ಮಾಜಿ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ, ಮಾಜಿ ಉಪಾಧ್ಯಕ್ಷ ಬಾಬು ಗೌಡ ಭಂಡಾರದ ಮನೆ, ಮಾಜಿ ಸದಸ್ಯರಾದ ಮನೋಹರ್ ಡಿ.ವಿ ಮೋಹನ ಪಕ್ಕಳ ಕುಂಡಾಪು, ನ್ಯಾಯವಾದಿ ದೇವಾನಂದ ಕೋಡಿಂಬಾಡಿ ಮೊದಲಾದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು