ಉಪ್ಪಿನಂಗಡಿ: ಬಜತ್ತೂರು ಗ್ರಾ.ಪಂ.ನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತರಾದ ಪ್ರೇಮಾ ಬಿ. ಹಾಗೂ ಉಪಾಧ್ಯಕ್ಷೆಯಾಗಿ ಸುಮೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೧೫ ಸ್ಥಾನಗಳನ್ನು ಹೊಂದಿರುವ ಬಜತ್ತೂರು ಗ್ರಾ.ಪಂ.ನಲ್ಲಿ ೧೩ ಮಂದಿ ಅವಿರೋಧ ಆಯ್ಕೆಯಾಗಿದ್ದರು. ಅವರಲ್ಲಿ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದರೆ, ಉಳಿದ ೧೦ ಮಂದಿ ಬಿಜೆಪಿ ಬೆಂಬಲಿತ ಸದಸ್ಯರು. ಬಳಿಕ ಎರಡು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಸಂತೋಷ್ ಕುಮಾರ್ ಪಿ. ಹಾಗೂ ಗಂಗಾಧರ ಪಿ.ಎನ್. ಚುನಾಯಿತರಾಗಿದ್ದರು. ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ `ಎ’ ಮಹಿಳೆ ಮೀಸಲಾತಿ ಬಂದಿದ್ದು, ಪ್ರೇಮಾ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲಾತಿ ಬಂದಿದ್ದು, ಸುಮೀತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಸಂತೋಷ್ ಕುಮಾರ್ ಪಂರ್ದಾಜೆ, ಮೋನಪ್ಪ ಗೌಡ ಬೆದ್ರೋಡಿ, ಅರ್ಪಿತಾ, ವಿಮಲಾ, ಉಮೇಶ್ ಓಡ್ರಪಾಲು, ರತ್ನ, ನಝೀರ್ ಬೆದ್ರೋಡಿ, ಪ್ರೆಸಿಲ್ಲಾ ಡಿಸೋಜಾ, ಮಾಧವ ಪೂಜಾರಿ ಒರುಂಬೋಡಿ, ಗಂಗಾಧರ ಕೆ.ಎಸ್., ಯಶೋಧಾ, ಭಾಗೀರಥಿ, ಗಂಗಾಧರ ಪಿ.ಎನ್. ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿದ್ದ ಪುತ್ತೂರು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ. ಪಿಡಿಒ ಪ್ರವೀಣ್ ಕುಮಾರ್ ಸಹಕರಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ಉಪ್ಪಿನಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಸಚಿನ್ ಮುದ್ಯ, ಬಜತ್ತೂರು ಬಿಜೆಪಿ ಶಕ್ತಿ ಕೇಂದ್ರದ ವಸಂತ ಗೌಡ ಪಿಜಕ್ಕಳ ಉಪಸ್ಥಿತರಿದ್ದು, ಶುಭ ಹಾರೈಸಿದರು.