ಐತ್ತೂರು: ಕಾಂಗ್ರೆಸ್ಗೆ ಒಲಿದ ಅಧ್ಯಕ್ಷ ಸ್ಥಾನ
ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರೋಹಿತ್.ಎಸ್.
ಕಡಬ: ಐತ್ತೂರು ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಶ್ಯಾಮಲ ಉಪಾಧ್ಯಕ್ಷರಾಗಿ ರೋಹಿತ್ ಎಸ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯತ್ನಲ್ಲಿ ಒಟ್ಟು 11 ಸ್ಥಾನಗಳಲ್ಲಿ 6 ಬಿಜೆಪಿ ಬೆಂಬಲಿತ ಹಾಗೂ 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ. ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ಯಾಮಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರೋಹಿತ್ ಎಸ್. ಅವರು ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಯಂ. ಅವರು ಚುನಾವಣಾಧಿಕಾರಿಯಾಗಿದ್ದರು. ಈ ಸಂದರ್ಭದಲ್ಲಿ ಸದಸ್ಯರಾದ ಧನಲಕ್ಷ್ಮೀ, ವಿಜಯಲಕ್ಷ್ಮಿ, ಉಷಾ, ವತ್ಸಲ, ನಾಗೇಶ್, ವಿ.ಯಂ.ಕುರಿಯನ್, ಮನಮೋಹನ್ ಗೋಳ್ಯಾಡಿ, ಈರೇಶ್, ಪ್ರೇಮ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೇಖರ್ ಬಿ, ಕಾರ್ಯದರ್ಶಿ ರಮೇಶ್ ಆಚಾರಿ, ಬಿಲ್ ಕಲೆಕ್ಟರ್ ಶಿಬು ಕೆ.ಟಿ. ಉಪಸ್ಥಿತರಿದ್ದರು