ಕಡಬ: ಇಲ್ಲಿನ ಶ್ರೀರಾಂ ಟವರ್ಸ್ನಲ್ಲಿ ಕಳೆದ ೧೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀ ಗಣೇಶ್ ಮೆಡಿಕಲ್ಸ್ನ ವಿಸ್ತೃತ ಮಳಿಗೆ ವೆಟ್ ಮತ್ತು ಪೆಟ್ ಫೆ.೨೦ರಂದು ಶುಭಾರಂಭಗೊಳ್ಳಲಿದೆ.
ಗ್ರಾಹಕ ಸ್ನೇಹಿ ಸೇವೆಯ ಮೂಲಕ ಕಳೆದ ೧೫ ವರ್ಷಗಳಿಂದ ಕಡಬದ ಆಸುಪಾಸಿನ ಜನತೆಗೆ ಚಿರಪರಿಚಿತವಾಗಿರುವ ಶ್ರೀ ಗಣೇಶ್ ಮೆಡಿಕಲ್ಸ್ ಇದೀಗ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ವಿಶಾಲವಾದ ಔಷಧಾಲಯ ಫೆ.೨೦ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಕೋಳಿ ಸಾಕಣೆ, ಹೈನುಗಾರಿಕೆ, ಪ್ರಾಣಿಸಾಕಣೆ ಇವುಗಳಿಗೆ ಸಂಬಂಧಿಸಿದ ಎಲ್ಲಾ ಆರೋಗ್ಯ ಸಾಮಾಗ್ರಿಗಳು ಅಲ್ಲದೆ ಹಾವು ಕಡಿತ, ಹೃದಯಾಘಾತ ಮುಂತಾದ ತುರ್ತು ಸಂದರ್ಭಗಳಿಗೆ ಬೇಕಾದ ಔಷಧಗಳು ಲಭ್ಯವಾಗಲಿದೆ ಎಂದು ಮಾಲಕ ಅಜಿತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.