- ಶಿಕ್ಷಕನ ಪ್ರತಿಭೆಗಳೇ ಶಿಕ್ಷಕ ವೃತ್ತಿಯನ್ನು ಅರ್ಥಪೂರ್ಣವಾಗಿಸುವ ಸಾಧನ – ಶಿಕ್ಷಣಾಧಿಕಾರಿ
ಪುತ್ತೂರು : ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಪುತ್ತೂರು ಘಟಕ ಮತ್ತು ಇಲಾಖಾ ಪ್ರತಿನಿಧಿಗಳು, ಕ.ರಾ.ಸ.ನೌ.ಸಂಘ ಬೆಂಗಳೂರು ಪುತ್ತೂರು ಘಟಕ ಇವುಗಳ ಆಶ್ರಯದಲ್ಲಿ ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ಕ.ರಾ.ಸ.ನೌ.ಸಂಘ ಬೆಂಗಳೂರು ದ.ಕ.ಜಿಲ್ಲಾ ಘಟಕ, ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ವತಿಯಿಂದ ರಾಜ್ಯ ಸರಕಾರಿ ನೌಕರರಿಗಾಗಿ ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕುಗಳ ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ಭಾಗವಹಿಸಿ ವಿಜೇತರಾದ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ನೆಲ್ಲಿಕಟ್ಟೆ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರು ಶಿಕ್ಷಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿ ಶಿಕ್ಷಕನ ಪ್ರತಿಭೆಗಳೇ ಅವನ ಶಿಕ್ಷಕ ವೃತ್ತಿಯನ್ನು ಅರ್ಥಪೂರ್ಣವಾಗಿಸುವ ಸಾಧನಗಳು. ಆದ್ದರಿಂದ ಶಿಕ್ಷಕ ಬೇರೆ ಬೇರೆ ಪ್ರತಿಭೆಗಳನ್ನು ತನ್ನದಾಗಿಸಿಕೊಳ್ಳಬೇಕು ಎಂದರು. ಕ.ರಾ.ಪ್ರಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಭಾ ಸಂಪನ್ನನಾದ ಶಿಕ್ಷಕನೇ ಶಿಕ್ಷಣ ವ್ಯವಸ್ಥೆಯ ಆಸ್ತಿ. ಎಲ್ಲಾ ಶಿಕ್ಷಕರನ್ನು ಇಂತಹ ಆಸ್ತಿಗಳನ್ನಾಗಿಸುವ ಅಗತ್ಯವಿದೆ ಎಂದರು.
ಕ.ರಾ.ಪ್ರಾ.ಶಿ.ಸಂಘ ಪುತ್ತೂರು ಘಟಕದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಪೆರ್ಲಂಪಾಡಿ ಮಾತನಾಡಿ ಶಿಕ್ಷಕ ಪ್ರತಿಭಾವಂತನಾದರೆ ಮಕ್ಕಳೂ ಕೂಡ ಪ್ರತಿಭಾವಂತರಾಗುತ್ತಾರೆ. ಮಕ್ಕಳನ್ನು ಪ್ರತಿಭಾ ಸಂಪನ್ನರಾಗಿ ಮಾಡುವುದೇ ನಮ್ಮ ಗುರಿಯಾಗಬೇಕು ಎಂದರು.
ಶಿಕ್ಷಕ ಸಂಘದ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ವೇದಾವತಿ ಮುಕ್ವೆ ಮಾತನಾಡಿ ಇಲಾಖೆಯ ಪ್ರೋತ್ಸಾಹವೇ ಶಿಕ್ಷಕನ ಪ್ರತಿಭಾ ವಿಕಾಸಕ್ಕೆ ದಾರಿ. ಇಲಾಖೆ ಸದಾ ಶಿಕ್ಷಕನಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಶಿಕ್ಷಕ ರಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ ಮಾತನಾಡಿ ಶಿಕ್ಷಕ ಸ್ನೇಹಿಯಾಗಿ ಕೆಲಸ ಮಾಡುವುದೇ ನಮ್ಮ ಸಂಘದ ಮೊದಲ ಗುರಿ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಉಮಾನಾಥ ರೈ ಮಾತನಾಡಿ ಶಿಕ್ಷಕನಿಗೆ ವಿವಿಧ ಕಲೆಗಳ ತರಬೇತಿ ನೀಡುವ ಕೆಲಸ ಇಲಾಖೆಯಿಂದ ಆಗಬೇಕಿದೆ ಎಂದರು.
ಜಿಲ್ಲಾ ಸಂಘದ ನಾಮ ನಿರ್ದೇಶಿತ ಸಂಘಟನಾ ಕಾರ್ಯದರ್ಶಿ ರಾಮಣ್ಣ ರೈ, ಬಂಟ್ವಾಳ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ಬಂಟ್ವಾಳ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ, ಸಮನ್ವಯಾಧಿಕಾರಿ ನವೀನ್ ವೇಗಸ್ ಮಾತನಾಡಿ ಶುಭಹಾರೈಸಿದರು.
ಅಭಿನಂದನೆ : ತೇಜಸ್ವಿ ಕೆ.ಗೋಳಿತ್ತೊಟ್ಟು, ಸುಜಾತ ಕೆ. ನೇರ್ಲ, ರಾಜು ಎಸ್.ಟಿ.ದರ್ಬೆತ್ತಡ್ಕ, ಜ್ಯೋತಿರಾಣಿ ಎಸ್.ಬಿಳಿಯೂರುಕಟ್ಟೆ, ವಿನೋದ್ ಕುಮಾರ್ ಕೆಯ್ಯೂರು, ಬಾಬು ಎಂ.ಕೆಯ್ಯೂರು, ಅಶ್ರಫ್ ಉಪ್ಪಿನಂಗಡಿ, ಪ್ರದೀಪ್ ಕುಮಾರ್ ಅಕ್ಷರದಾಸೋಹ, ರಶ್ಮಿತಾ ಎನ್. ಪುಣ್ಚಪ್ಪಾಡಿ, ಜ್ಯೋತಿ ಸಿ.ಜೆ.ಸರ್ವೆ, ಸ್ಮಿತಾಶ್ರೀ ಸಂಜಯನಗರ, ರಾಣಿ ಪಿ.ಟಿ.ಕಬಕ, ಪವಿತ್ರಾ ಎ.ಬಿಳಿನೆಲೆ ಕೈಕಂಬ, ಆಶಾ ಟಿ.ರಾಗಿಕುಮಾರಿ, ಜ್ಯೋತಿ ದೇವರಮನೆ ಅಮೈ, ದಿಲೀಪ್ ಕುಮಾರ್ ಓಂತ್ರಡ್ಕ, ಕುಸುಮಾದರ ಓಂತ್ರಡ್ಕ, ರಮೇಶ್ ಉಳಯ ಸಂಜಯನಗರ, ತಾರಾನಾಥ ಸವಣೂರು, ರಮೇಶ ನೆ.ಮುಡ್ನೂರು, ಶ್ರೀಕಾಂತ ನಾಯ್ಕ ಎಂ.ಅರೆಲ್ತಡಿ, ಜನಾರ್ಧನ ಡಿ. ಬಡಗನ್ನೂರು, ಮಹೇಶ್ ಎನ್.ಇಡಾಳ, ಮಂಜುನಾಥ ಎಚ್.ವಿ.ಐತ್ತೂರು, ಸಂತೋಷ್ ಎಸ್.ಪಿ. ಎಡಮಂಗಲ, ಸುಧೀರ್ ಕೆ.ದೇರಾಜೆ, ಅರುಣ್ ಕುಮಾರ್ ಶೇಟ್ ಎ.ಆರ್. ರಾಮಕುಂಜ, ಮನೋಹರ ಎನ್.ಕೊಂಬಾರು, ರಮೇಶ್ ಪಿ.ಎಡಮಂಗಲ, ಉಮೇಶ್ ನಾಯ್ಕ ಎಸ್.ದೇರಾಜೆ, ರವಿಕುಮಾರ್ ಜಿ.ಆರ್.ಅಡಿಂಜೆ, ಆನಂದಮೂರ್ತಿ ಬಿ.ಎಸ್.ಮೂರಾಜೆಕೊಪ್ಪ, ರಮೇಶ್ ಎಸ್.ಬೇರಿಕೆ, ಗೋವಿಂದ ನಾಯ್ಕ ನೂಜಿಬಾಳ್ತಿಲ, ಪ್ರವೀಣ ಎಸ್.ಕೆ.ಪಾಲೆತ್ತಡ್ಕ, ಹಾರ್ವೇಶ್ ನಾಯ್ಕ ಜಿ.ಕೊಣಾಜೆ, ಶಾಸ್ವತ್ ಬಿಇಒ ಕಛೇರಿ ಪುತ್ತೂರು, ಉಸ್ಮಾನ್ ಎ.ಉಪ್ಪಿನಂಗಡಿ, ಗಿರೀಶ್ ಬಿಲ್ಲವ. ರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಬಕ ಶಾಲಾ ಶಿಕ್ಷಕಿ ರಾಣಿ ಹಾಸನ ಪ್ರಾರ್ಥಿಸಿ ಸ.ನೌ.ಸಂಘದ ಸದಸ್ಯೆ ತನುಜಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಮೇಶ್ ಉಳಯ ಪ್ರಾಸ್ತಾವಿಕ ಮತನಾಡಿದರು. ಶ್ರೀಕಾಂತ್ ನಾಯಕ್ ಕಂಬಳಕೋಡಿ ವಿಜೇತರನ್ನು ಪರಿಚಯಿಸಿದರು. ಪುತ್ತೂರು ಶಿಕ್ಷಕರ ಸಂಘದ ಉಪಾಧ್ಯಕ್ಷ ನವೀನ್ ಕುಮಾರ್ ರೈ ಮತ್ತು ಸುಧಾಕರ ರೈ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿಗಳಾದ ವಿಮಲ್ ಕುಮಾರ್ ನೆಲ್ಯಾಡಿ, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರುಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.