HomePage_Banner
HomePage_Banner
HomePage_Banner
HomePage_Banner
Breaking News

ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣ-ಜಿಲ್ಲಾಡಳಿತದಿಂದ ಮತ್ತೆ ಕಟ್ಟುನಿಟ್ಟಿನ ಕ್ರಮ ಜಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೇನಾಲದಲ್ಲಿ ಚೆಕ್‌ಪೋಸ್ಟ್ ಆರಂಭ
  • ಜಿಲ್ಲೆ ಪ್ರವೇಶಕ್ಕೆ 72 ಗಂಟೆಯೊಳಗಿನ ನೆಗೆಟಿವ್ ವರದಿ ಪ್ರತಿ ಕಡ್ಡಾಯ
  •  ಜಿಲ್ಲೆಯ ನಾಲ್ಕು ಗಡಿಗಳಲ್ಲಿ ಮಾತ್ರ ಸಂಚಾರ
  • ಉಳಿದೆಡೆ ಬಂದ್

ಪುತ್ತೂರು: ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ದ.ಕ ಜಿಲ್ಲೆ ಪ್ರವೇಶಕ್ಕೆ ದ,ಕ ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗಿದ್ದು. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಿಂದ ಮೂಲಕ ಕೇರಳ ಗಡಿ ಬಾಗದಲ್ಲಿ ಸಂಪರ್ಕಿಸುವ ಮೇನಾಲದಲ್ಲಿ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಕೇರಳದಿಂದ ವಾಹನಗಳಲ್ಲಿ ಬರುವಂತ ಪ್ರಯಾಣಿಕರನ್ನು ಕೊರೋನಾ ತಪಾಸಣೆ ನಡೆಸಿದ ಬಳಿಕ ಕಳುಹಿಸಲಾಗುತ್ತಿದೆ. ಆರೋಗ್ಯ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಚೆಕ್‌ಪೋಸ್ ಕಾರ್ಯನಿರ್ವಹಿಸುತ್ತಿದೆ. ರಸ್ತೆ ಬಂದ್ ಮಾಡಲಾಗಿದೆ.


ಕೇರಳ ರಾಜ್ಯದಿಂದ ಜಿಲ್ಲೆಯ ನಾಲ್ಕು ಗಡಿ ಭಾಗದಲ್ಲಷ್ಟೇ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ಮಂಗಳೂರು ತಾಲೂಕಿನ ತಲಪಾಡಿ, ಬಂಟ್ವಾಳ ತಾಲೂಕಿನ ಸಾರಡ್ಕ, ಪುತ್ತೂರು ತಾಲೂಕಿನ ಮೇನಾಲ ಹಾಗೂ ಸುಳ್ಯ ತಾಲೂಕಿನ ಜಾಲ್ಸೂರು ಹೊರತು ಪಡಿಸಿ ಉಳಿದ ಭಾಗಗಳಲ್ಲಿರುವ ಗಡಿ ಪ್ರದೇಶಗಳಲ್ಲಿ ರಸ್ತೆ ಬಂದ್ ಮಾಡಲಾಗಿದೆ.

ದ.ಕ ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರರವರ ಆದೇಶದಂತೆ ದ.ಕ ಜಿಲ್ಲೆ ಹಾಗೂ ಕೇರಳದ ಕಾಸರಗೋಡು ಮಧ್ಯೆಯ ಬಹುತೇಕ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದು ಕೆಲವು ಪ್ರಮುಖ ರಸ್ತೆಗಳ ಮೂಲಕ ಮಾತ್ರ ಷರತ್ತುಬದ್ಧ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ.

ಅಂತಹ ಸ್ಥಳಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣೆಯ ಬಳಿಕ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ.

ಪ್ರತಿ ಚಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರಿಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. ದ.ಕ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರು ೭೨ ಗಂಟೆಯೊಳಗೆ ಕೋವಿಡ್ ಪರೀಕ್ಷೆನಡೆಸಲಾದ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕು. ಅದನ್ನು ಪರಿಶೀಲಿಸಿದ ಬಳಿಕ ಜಿಲ್ಲೆಗೆ ಪ್ರವೇಶ ನೀಡಲಾಗುತ್ತದೆ. ಪುತ್ತೂರು ತಹಶೀಲ್ದಾರ್ ಮೋನಾರೋತ್ , ತಾ. ಆರೋಗ್ಯಧಿಕಾರಿ ಡಾ. ಆಶೋಕ್ ರೈ, ಮಂಗಳೂರು ನೊಡೆಲ್ ಅಧಿಕಾರಿ ಡಾ. ಆಶೋಕ್ ಹೆಚ್, ನೆ.ಮುಡ್ನೂರು  ಗ್ರಾ.ಪಂ. ಅಧ್ಯಕ್ಷ ರಮೇಶ್ ರೈ ಸಾಂತ್ಯ, ಪಿಡಿಒ ಸಂದೇಶ್ ಕೆ.ಎನ್. , ಗ್ರಾಮ ಲೆಕ್ಕಿಗ ರಾಧಾಕೃಷ್ಣ, ಗ್ರಾಮ ಸಹಾಯಕ ರಾಧಾಕೃಷ್ಣ ಪಾಟಾಳಿ ಭೇಟಿ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.