ಕಾಣಿಯೂರು: ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್ಗಳನ್ನು ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ನನ್ನನ್ನು ತೇಜೋವಾಧೆ ಮಾಡಲಾಗಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಕಾಣಿಯೂರು ಗ್ರಾ.ಪಂ, ಉಪಾಧ್ಯಕ್ಷ ಗಣೇಶ್ ಉದನಡ್ಕ ಸೈಬರ್ ಪೋಲಿಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಕಾಣಿಯೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಮಾಧವಿ ಕೋಡಂದೂರವರ ವಿರುದ್ಧ ೧೨೦(ಬಿ), ೧೭೧(ಬಿ), ೪೯೯,೫೦೦,೫೦೩,೫೦೪ ಜೊತೆಗೆ ೩೪ಐಪಿಸಿ, ಕಲಂ: ೬೭ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗ್ರಾ.ಪಂ, ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿಯೂ ನನ್ನ ಪ್ರತಿ ಸ್ಪರ್ಧಿಯು ಮನೆ ಮನೆಯವರಿಗೆ ಈ ಅವಹೇಳನ ಪೋಸ್ಟ್ನ್ನು ತೋರಿಸಿ ನನ್ನ ಹೆಸರನ್ನು ತೇಜೊವಧೆ ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಗಣೇಶ್ರವರು ಆರೋಪಿಸಿದ್ದಾರೆ. ಗಣೇಶ್ ಉದನಡ್ಕ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.