HomePage_Banner
HomePage_Banner
HomePage_Banner
HomePage_Banner
Breaking News

ಫೆ.24 -ಫೆ. 26: ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಹಾಗೂ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ ,ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಹಾಗೂ ನೇಮೋತ್ಸವ ಫೆ.೨೪ ರಿಂದ ಫೆ.೨೬ರ ವರೆಗೆ ಕುವೆತ್ತೋಡಿ ಬ್ರಹ್ಮಶ್ರೀ ನರಸಿಂಹ ಪ್ರಸಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಫೆ.೨೪ರಂದು ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ.ಬರೆಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ,ಕಾಪೆಜಾಲು,ಕುದ್ಮಾರುನಲ್ಲಿ ಹೊರೆ ಕಾಣಿಕೆ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಸಂಜೆ ೫ಕ್ಕೆ ತಂತ್ರಿಗಳ ಆಗಮನ,೭ರಿಂದ ಸ್ವಸ್ತಿ ಪುಣ್ಯಾಹವಾಚನ,ಸ್ಥಳ ಶುದ್ದಿ,ಪ್ರಾಸಾದ ಶುದ್ದಿ,ಬಿಂಬ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ,ಪ್ರಾಕಾರ ಬಲಿ,ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

ಫೆ.೨೫ರಂದು ಬೆಳಿಗ್ಗೆ ೬ಕ್ಕೆ ಗಣಹೋಮ,ಬೆಳಿಗ್ಗೆ ೮.೧೨ರ ಮೀನ ಲಗ್ನದಲ್ಲಿ ಪ್ರತಿಷ್ಟೆ,ಕಲಶಾಭಿಷೇP ತಂಬಿಲ,ಬೆಳಿಗ್ಗೆ ೧೦ಕ್ಕೆ ಕೊರಗಜ್ಜ ದೈವಸ್ಥಾನದ ಶುದ್ದ ಕಲಶ,ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ೪ಕ್ಕೆ ನಾಗಬ್ರಹ್ಮ ಆದಿಮುಗೇರ್ಕಳ ದೈವದ ಭಂಡಾರ ತೆಗೆಯುವುದು,ರಾತ್ರಿ ಗಂಧ ಪ್ರಸಾದ ವಿತರಣೆ ನಂತರ ನಡೆವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ವಹಿಸುವರು.ಕುವೆತ್ತೋಡಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಧಾರ್ಮಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ, ತಾ.ಪಂ.ಸದಸ್ಯೆ ಲಲಿತಾ ಈಶ್ವರ,ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯರಾದ ತಾರಾ ಅನ್ಯಾಡಿ,ಗೀತಾ ಕುವೆತ್ತೋಡಿ,ರವಿಕುಮಾರ್ ಕೆಡೆಂಜಿ,ಪ್ರವೀಣ್ ಕೆರೆನಾರು,ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್,ಶಾಂತಿಮೊಗರು ಶ್ರೀ ಸುಬ್ರಹ್ಮೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ,ರಾಜ್ಯ ಮುಗೇರ ಸಂಘದ ಅಧ್ಯಕ್ಷ ಡಾ.ರಘು,ನಾಗಬ್ರಹ್ಮ ಆದಿಮುಗೇರ್ಕಳ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಬೇರಿಕೆ,ಅಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್.ಕಾರ್ಲಾಡಿ, ಮದನ ಪೂಜಾರಿ,ರಾಮಯ್ಯ ಗೌಡ ನೂಜಿ,ಕುಂಇಣ್ಣ ನಾಯ್ಕ ಕಾರ್ಲಾಡಿ ಉಪಸ್ಥಿತರಿರುವರು.
ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ, ನಂತರ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಗರಡಿ ಇಳಿಯುವುದು,ನಂತರ ತನ್ನಿ ಮಾಣಿಗ ಗರಡಿ ಇಳಿಯುವುದು,ಫೆ.೨೬ರಂದು ಬೆಳಿಗ್ಗೆ ಹರಕೆಗಂಧ ಪ್ರಸಾದ,ಗುಳಿಗ ದೈವದ ನೇಮೋತ್ಸವ,ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಬ್ರಹ್ಮಕಲಶೊತ್ಸವ ಸಮಿತಿ,ಅಭಿವೃದ್ದಿ ಸಮಿತಿ,ಆಡಳಿತ ಸಮಿತಿಯವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.