- ವಿಜೃಂಭಿಸಿದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಅನ್ನಸಂತರ್ಪಣೆ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ ೮ ಕಿ.ಮೀ ದೂರದಲ್ಲಿರುವ ಪರ್ಪುಂಜ ಕೊಲತ್ತಡ್ಕದಲ್ಲಿರುವ ಶಿವಕೃಪಾ ಆಡಿಟೋರಿಯಂ ಯಶಸ್ವೀ ೪ ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ವಾರ್ಷಿಕೋತ್ಸವದ ಅಂಗವಾಗಿ ಫೆ.೧೯ ರಂದು ಶಿವಕೃಪಾ ಆಡಿಟೋರಿಯಂನ ಎದುರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ` ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ಆಡಿಟೋರಿಯಂನ ಒಳಗೆ ಶ್ರೀ ದೇವಿಗೆ ವಿಶೇಷ ಪೂಜೆ, ಚೌಕಿ ಪೂಜೆ ನಡೆದು ಹೊರಗೆ ವಿದ್ಯುತ್ ದೀಪ, ಹೂಗಳಿಂದ ಅಲಂಕೃತಗೊಂಡಿದ್ದ ರಂಗಮಂಟಪದಲ್ಲಿ ಯಕ್ಷಗಾನ ಬಯಲಾಟ ಮನರಂಜಿಸಿತು.
ಸಾರ್ವಜನಿಕ ಅನ್ನಸಂತರ್ಪಣೆ
೪ ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು ೧೫೦೦ ಮಂದಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಬಳಿಕ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ವೀಕ್ಷಿಸಿದರು. ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸ್ಥಳೀಯ ಯುವಕರು ಸಂಪೂರ್ಣ ಸಹಕಾರ ನೀಡಿದ್ದರು.
ಶಿವಕೃಪಾ ಆಡಿಟೋರಿಯಂ
ನೂತನ ಆಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಿವಕೃಪಾ ಆಡಿಟೋರಿಯಂ ೧ ಸಾವಿರ ಆಸನ ವ್ಯವಸ್ಥೆಯನ್ನು ಒಳಗೊಂಡ ಹವಾ ನಿಯಂತ್ರಿತ ಮತ್ತು ನಾನ್ ಎಸಿ ಸೌಲಭ್ಯವನ್ನು ಹೊಂದಿದೆ. ವಿಶಾಲ ಪಾರ್ಕಿಂಗ್, ಸುಸಜ್ಜಿತ ಅಡುಗೆ ಹಾಲ್ ವ್ಯವಸ್ಥೆ ಇದೆ. ಕೊರೋನ ಬಳಿಕ ಶುಭ ಸಮಾರಂಭಗಳಿಗೆ ವಿಶೇಷ ದರದ ಪ್ಯಾಕೇಜ್, ವಿಶೇಷ ಆಫರ್ ಕೂಡ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9731341308 ಅಥವಾ 8217367761ಗೆ ಸಂಪರ್ಕಿಸಬಹುದಾಗಿದೆ.