HomePage_Banner
HomePage_Banner
HomePage_Banner
HomePage_Banner
Breaking News

ನಿವೃತ್ತ ಅಸಿಸ್ಟೆಂಟ್ ರಿಜಿಸ್ಟ್ರಾರ್ ಶ್ರೀ ರಾಜು ರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ೨೦ ಅಂಶಗಳ ಸಭೆಯಲ್ಲಿ ಸುಮಾರು ೩೬ ವರ್ಷಗಳ ಕಾಲ ಸಹಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಾಜು ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿ ರಾಜು ರವರನ್ನು ಶಾಲು, ಪೇಟ, ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ ಬ್ಯಾಂಕಿನ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ರತ್ನಕುಮಾರ್ ಮತ್ತು  ರಾಜು ರವರ ಎರಡು ಆಪ್ತ ಸ್ನೇಹಿತರು ಉಪಸ್ಥಿತರಿದ್ದರು. ಶ್ರೀ ರಾಜು ರವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ನೂತನ ಪ್ರಭಾರ ಅಸಿಸ್ಟೆಂಟ್ ರಿಜಿಸ್ಟ್ರಾರ್ ಸುಧೀರ್ ರವರಿಗೆ ಹೂಗುಚ್ಚ ನೀಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕ ವಸಂತ ಎಸ್. ಮತ್ತು ಶರತ್ ಹಾಗೂ ಪುತ್ತೂರು ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಇರ್ದೆ-ಬೆಟ್ಟಂಪಾಡಿಯ ರಾಮಯ್ಯ ರೈ , ಆಲಂಕಾರಿನ ಪ್ರಶಾಂತ್ ರೈ , ಕುಂಬ್ರದ ರಾಜೀವಿ ರೈ , ಕೆದಂಬಾಡಿಯ  ಹಂಸಾವತಿ , ಬನ್ನೂರಿನ ಗೋಪಾಲಕೃಷ್ಣ ಭಟ್ , ನರಿಮೊಗರಿನ ಮಧುಕರ್ , ನೆಲ್ಯಾಡಿಯ ದಯಾಕರ್ ರೈ , ಕೊಳ್ತಿಗೆಯ ಹಂಸಾವತಿ , ಬಿಳಿನೆಲೆಯ ಎಲ್ಯಣ್ಣ ಗೌಡ , ಕಡಬದ ಚಾಕೋ , ಬಲ್ನಾಡಿನ ಸೀತಾರಾಮ ಗೌಡ , ಆರ್ಯಾಪಿನ ಜಯಂತಿ , ಉಪ್ಪಿನಂಗಡಿಯ ಕ್ಲೇರಿ ವೇಗಸ್ , ಪಾಣಾಜೆಯ ಲಕ್ಷ್ಮಣ ನಾಯ್ಕ್ , ಕಾವು ಸಂಘದ ಕೇಶವ ಮೂರ್ತಿ , ಹೊಸ್ಮಠದ ಸೋಮಸುಂದರ್ ಶೆಟ್ಟಿ ಉಪಸ್ಥಿತರಿದ್ದರು.

ಸಹಕಾರ ಸಂಘಗಳ ಪರವಾಗಿ ಮುಂಡೂರಿನ ಸಿಇಓ ಜಯಪ್ರಕಾಶ್ ರೈ ನಿವೃತ್ತರಿಗೆ ಶುಭ ಕೋರಿದರು. ಸವಣೂರಿನ ಸಿಇಓ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿ, ಚಾರ್ವಕದ ಸಿಇಓ ಅಶೋಕ್ ರವರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.