ಪುತ್ತೂರು: ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಕಾರ್ಯಕರ್ತರಿಗೆ ಗೌರವ ಸಿಗಬೇಕಾದರೆ ಮತದಾರರ ನಾಡಿ ಮಿಡಿತ ತಿಳಿದು ಕೊಳ್ಳಬೇಕು.ಮತದಾರ ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಆಡಳಿತ ನಡೆಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.
ಪುತ್ತೂರು ಕೋ ಓ ಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಫೆ೨೩ ರಂದು ನಡೆದ ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ಪಂಚಾಯತ್ ಅದ್ಯಕ್ಷ ಉಪಾಧ್ಯಕ್ಷರಿಗೆ ಕೇಸರಿ ಶಾಲು ಹೊದೆಸಿ ಗೌರವಿಸಿದರು.

ನಮಗೆ ಸ್ಥಾನ ಮಾನ ಬಂದಾಗ ವಿಚಾರ ಮಂಡನೆ ಮಾಡುವ ಅಗತ್ಯತೆ ಇದೆ. ಯಾಕೆಂದರೆ ಬಿಜೆಪಿಯನ್ನು ಪ್ರತಿನಿಧಿಸುವವರು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು. ಇಲ್ಲಿ ಒಳ್ಳೆಯದಾದರೂ ಕೆಟ್ಟದಾದರು ಹೆಸರು ಬಿಜೆಪಿಗೆ. ಹಾಗಾಗಿ ನಾವು ಸಾಮಾನ್ಯ ವ್ಯಕ್ತಿಯ ಸಮಸ್ಯೆ ಕೇಳುವ ತಾಳ್ಮೆ ಇರಬೇಕು. ದುಖಃ ದುಮ್ಮಾನಕ್ಕೆ ಸರಿಯಾದ ನ್ಯಾಯ ಕೊಡುವ ಕೆಲಸ ಮಾಡಬೇಕು. ಆಡಳಿತದಲ್ಲಿ ಭಿಗಿ ಇರಬೇಕು.

ಪಂಚಾಯತ್ ಯೋಜನೆಗಳನ್ನು ಅನುಷ್ಠಾನ ಮಾಡುವ ನಿರ್ಣಯಕ್ಕೆ ನೌಕರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಸಮಯ ಪ್ರಜ್ಞೆ ಇರಬೇಕು. ಪಂಚಾಯತ್ ಸಭೆಯಲ್ಲಿ ಭಾಗವಹಿಸುವ ಮೊದಲು ಪ್ರೀ ಕೌನ್ಸಿಲ್ ನಲ್ಲಿ ಪಾಲ್ಗೊಳ್ಳಬೆಕು. ಪಕ್ಷದ ಕಾರ್ಯಕ್ರಮಕ್ಕೆ ಪ್ರಥಮ ಆದ್ಯತೆ ನೀಡಿ. ಭ್ರಷ್ಟಾಚಾರ ಮುಕ್ತವಾಗಿರಿ ಸ್ವಜನ ಪಕ್ಷಪಾತ ಮಾಡಬೇಡಿ. ಸವಲತ್ತು ಇದ್ದರೂ ಕಟ್ಟ ಕಡೆಯ ವ್ಯಕ್ತಿಗೆ ಕೊಟ್ಡು ಮತ್ತೆ ಕಷ್ಟದಲ್ಲಿ ಕೂಡಾ ನಾವು ಹೇಗೆ ಮಾನವಿಯತೆಯಿಂದ ಮೆರೆಯಿರಿ ಎಂದರು. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ತಾ.ಪಂ, ಜಿ.ಪಂ ಚುನಾವಣೆ ಬರಲಿದೆ. ಆ ಚುನಾವಣೆಯಲ್ಲಿ ನಾವು ಗೆಲ್ಲಬೇಕು ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ ವೇದಿಕೆಯಲ್ಲಿ ಉಪಸ್ಥಿತರಿದ್ದರು.