ಪುತ್ತೂರು: ಕಳೆದ ಒಂದೂವರೆ ವರುಷದಿಂದ ಕೋರ್ಟುರಸ್ತೆ ಇಂಡಿಯನ್ ಆರ್ಕೇಡ್ನಲ್ಲಿ ವ್ಯವಹರಿಸುತ್ತಿರುವ ಮಹಿಳೆಯರ ಹಾಗೂ ಮಕ್ಕಳ ಒಳ ಉಡುಪುಗಳ, ನೈಟ್ ವೇರ್ಸ್ನ ಬ್ರಾಂಡೆಡ್ ಮಳಿಗೆ ‘ಲಶ್’ ಫ್ಯಾಶನ್ ಇನ್ಸೈಡ್ ವತಿಯಿಂದ ನೆಲ್ಲಿಕಟ್ಟೆ ಡಾ| ಶಿವರಾಮ ಕಾರಂತ ಪ್ರೌಢಶಾಲಾ ಹೆಣ್ಣು ಮಕ್ಕಳಿಗೆ ಉಚಿತ ವಸ್ತ್ರ ವಿತರಣೆ ಕಾರ್ಯಕ್ರಮ ಫೆ.೨೧ ಶಾಲೆಯಲ್ಲಿ ನಡೆಯಿತು.
ಲಶ್ ಫ್ಯಾಷನ್ನ ಮ್ಹಾಲಕಿ ಮಾಲಿನಿ ಕಶ್ಯಪ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯಗುರು ಜಲಾಜಕ್ಷಿ ಕೆ.ಎಮ್., ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಓಬಲೇಶ್, ಎಸ್ಡಿಎಂಸಿ ಸದಸ್ಯ ಬಾಲಚಂದ್ರ, ನಿವೃತ್ತ ಬ್ಯಾಂಕ್ ಉದ್ಯೋಗಿ ಮೀನಾಕ್ಷಿ, ಮಾಲಿನಿ ಕಶ್ಯಪ್ರವರ ಸಹೋದರಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಶಿಕ್ಷಕಿ ನಳಿನಿ ಎ., ಶಾಲಾ ನಾಯಕ ಅನಾಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಷಾ, ಶ್ರೇಯಾ ಪ್ರಾರ್ಥನೆ ಮಾಡಿದರು. ಶಿಕ್ಷಕಿ ಅನ್ನಮ್ಮ ಕಾರ್ಯಕ್ರಮ ನಿರೂಪಿಸಿದರು. ಸುಮಾರು ೨೦ ವಿದ್ಯಾರ್ಥಿಗಳಿಗೆ ಸಮವಸ್ತ್ರ, ೭೦ ಮಕ್ಕಳಿಗೆ ಪೆನ್ನನ್ನು ವಿತರಿಸಲಾಯಿತು.