ಪುತ್ತೂರು: ಕಲ್ಲಾರೆಯಲ್ಲಿರುವ ಭರತ್ ಪ್ರಿಂಟರ್ಸ್ ಮಾಲಕ ತಿಮ್ಮಪ್ಪ ಗೌಡ(61ವ)ರವರು ಫೆ.24ರ ನಸುಕಿನ ಜಾವ ಹೃದಯಘಾತದಿಂದ ನಿಧನರಾದರು.
ಮೂಲತಃ ಕರಮನೆ ನಿವಾಸಿಯಾಗಿರುವ ತಿಮ್ಮಪ್ಪ ಗೌಡ ಅವರು ಮುದ್ರಣ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳಿಂದ ಅನುಭವ ಹೊಂದಿದ್ದು, ಕಲ್ಲಾರೆಯಲ್ಲಿ ಭರತ್ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಡ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.