HomePage_Banner
HomePage_Banner
HomePage_Banner
HomePage_Banner

ಬೊಳುವಾರು ಆಂಜನೇಯ ಮಂತ್ರಾಲಯದ ಧರ್ಮದರ್ಶಿ ನಾರಾಯಣ ಮಣಿಯಾಣಿಯವರಿಗೆ ಶ್ರದ್ಧಾಂಜಲಿ ಸಭೆ

ಪುತ್ತೂರು; ಇತ್ತೀಚೆಗೆ ನಿಧನರಾದ ಬೊಳುವಾರು ಆಂಜನೇಯ ಮಂತ್ರಾಲಯದ ಧರ್ಮದರ್ಶಿ ನಾರಾಯಣ ಮಣಿಯಾಣಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಫೆ.24ರಂದು ಬೊಳುವಾರು ವಿಶ್ವಕರ್ಮ ಸಭಾ ಭವನದಲ್ಲಿ ನಡೆಯಿತು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಉಸ್ಮಾನ್, ನಗರ ಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ಸಂತೋಷ್ ಬೊಳುವಾರು, ಆರ್. ಎಸ್.ಎಸ್ ಮುಖಂಡ ಅಚ್ಚುತ್ತ ನಾಯಕ್, ಲೋಕೇಶ್ ಹೆಗ್ಡೆ ಮಾತನಾಡಿ ನುಡಿ ನಮನ ಸಲ್ಲಿಸಿದರು.

ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಇಂದಿರಾ ಪುರುಷೋತ್ತಮ ಆಚಾರ್ಯ, ದೀಕ್ಷಾ ಪೈ, ಶಿವರಾಮ ಸಪಲ್ಯ, ಡಾ.ಎಂ.ಕೆ ಪ್ರಸಾದ್, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ, ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ರಂಗನಾಥ ರಾವ್, ರಮಾನಂದ ನಾಯಕ್, ಯುವರಾಜ್ ಪೆರಿಯತ್ತೋಡಿ, ಉದಯಕುಮಾರ್, ಪ್ರೇಮಲತಾ ರಾವ್, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ದಿನೇಶ್ ಸಾಲಿಯಾನ್ ಬನ್ನೂರು, ರಾಜೇಶ್ ಬನ್ನೂರು, ಸುಧೀರ್ ಕುಮಾರ್ , ವಿಶ್ವನಾಥ ಗೌಡ ಬನ್ನೂರು, ರವೀಂದ್ರನ್, ಸುಂದರ ಗೌಡ, ಜ್ಯೋತಿ ಆರ್ ನಾಯಕ್ ಸೇರಿದಂತೆ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.