ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಪ್ರವರ್ತಿತ ನವೋದಯ ಸ್ವ ಸಹಾಯ ಗುಂಪುಗಳ ಒಕ್ಕೂಟ ಕೊಳ್ತಿಗೆ ಮತ್ತು ರೈತ ಮಿತ್ರ ಕೂಟ ಕೊಳ್ತಿಗೆ ಇವುಗಳ ಜಂಟಿ ಆಶ್ರಯದಲ್ಲಿ ಫೆ.27ರಂದು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ಪೆರ್ಲಂಪಾಡಿಯಲ್ಲಿ ಅಪರಾಹ್ನ 2:00 ರಿಂದ ಸಂಜೆ ಗಂಟೆ 5:30ರ ವರೆಗೆ ಅಣಬೆ ಕೃಷಿ ತರಬೇತಿ ಕಾರ್ಯಾಗಾರವು ನಡೆಯಲಿದೆ. ಪಾಂಡುರಂಗ ಕೆ ಅಣಬೆ ಕೃಷಿ ತರಬೇತುದಾರರು ಕೃಷಿ ವಿಜ್ಞಾನ ಕೇಂದ್ರ ಕಾಸರಗೋಡು ಇವರು ತರಬೇತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.