HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ ಶಾಲಾ ಕಟ್ಟಡ ನವೀಕರಣ ಕಾರ್ಯದ ಮನವಿ ಪತ್ರಬಿಡುಗಡೆ

ಪರ್ಲಡ್ಕ : ಇಲ್ಲಿನ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯ ೬ ದಶಕಗಳ ಹಳೆಯ ಕಟ್ಟಡದ ನವೀಕರಣ ಕಾರ್ಯಕ್ರಮವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಕಟ್ಟಡ ಕಾಮಗಾರಿ ಸಮಿತಿಯು ಶೀಘ್ರದಲ್ಲಿಯೇ ಕೈಗೊಳ್ಳಲಿದ್ದು ಈ ಸಂಬಂಧ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಊರಿನ ವಿದ್ಯಾಭಿಮಾನಿಗಳಿಂದ ದೇಣಿಗೆ ಸಂಗ್ರಹಿಸುವ ಸಲುವಾಗಿ ಮನವಿ ಪತ್ರದ ಬಿಡುಗಡೆ ಕಾರ್ಯಕ್ರಮ ಜರಗಿತು. ಶಾಲೆಯ ಹಿರಿಯ ವಿದ್ಯಾರ್ಥಿ, ತಾ.ಪಂ. ಮಾಜಿ ಅಧ್ಯಕ್ಷ, ಕಟ್ಟಡ ಕಾಮಗಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮನವಿ ಪತ್ರವನ್ನು ಬಿಡುಗಡೆಗೊಳಿಸಿದರು. ನಂತರ ಮಾತಾನಾಡಿದ ಅವರು ಪರ್ಲಡ್ಕ ಶಾಲೆಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಾವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಥಮ ಹಂತವಾಗಿ ಈ ಶಾಲೆಯ ಕಟ್ಟಡದ ನವೀಕರಣ ಕಾರ್ಯ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ಈ ಕಾರ್ಯ ಯಶಸ್ಸುಗೊಳ್ಳಲಿ ಎಂದು ಹಾರೈಸಿದರಲ್ಲದೆ ಈ ಸಂಬಂಧ ಸರ್ವರೂ ಸಮಿತಿಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆಯನ್ನು ಕಟ್ಟಡ ಕಾಮಗಾರಿ ಸಮಿತಿಯ ಅಧ್ಯಕ್ಷೆ ಹಾಗೂ ನಗರಸಭೆಯ ಉಪಾಧ್ಯಕ್ಷೆ ವಿದ್ಯಾಗೌರಿ ವಹಿಸಿದ್ದರು. ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಭಟ್ ಕಟ್ಟಡ ನವೀಕರಣದ ಯೋಜನೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ| ಮಂಜುನಾಥ್ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಆಚಾರ್ಯ ಬೀರಮಲೆ, ಜೊತೆಕಾರ್ಯದರ್ಶಿ ವಿಕ್ರಂ ಪರ್ಲಡ್ಕ ಉಪಸ್ಥಿತರಿದ್ದರು. ಕಟ್ಟಡ ಕಾಮಗಾರಿ ಸಮಿತಿಗೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಭಟ್ ಗೌರವಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷ ಡಾ| ಮಂಜುನಾಥ್ ಶೆಟ್ಟಿ, ಲೊಕೇಶ್ ಆಚಾರ್ಯ ಬೀರಮಲೆ ಇವರುಗಳು ದೇಣಿಗೆಯನ್ನು ಸಮಿತಿಯ ಅಧ್ಯಕ್ಷೆ ವಿದ್ಯಾಗೌರಿಯವರಿಗೆ ಹಸ್ತಾಂತರಿಸಿದರು. ಅಲ್ಲದೆ ವಿಜಯಕುಮಾರ್ ಮೊಳೆಯರ್, ಮಹೇಶ್ ಎಂ, ಪರ್ಲಡ್ಕ, ರಾವತ್ ರಾಮ್ ಪರ್ಲಡ್ಕ, ಕಮಲಬಾಬು ಕೋಡಿಜಾಲ್ ಇವರುಗಳು ದೇಣಿಗೆಯನ್ನು ಸಮಿತಿಗೆ ನೀಡಿದರು. ಪ್ರಭಾರ ಮುಖ್ಯಗುರು ವತ್ಸಲಾ ಬಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ ವಂದಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸಮಿತಿ ಸದಸ್ಯರು, ಕಟ್ಟಡ ಕಾಮಗಾರಿ ಸಮಿತಿ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.