HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಹಿರಿಯ ವಿದ್ಯಾರ್ಥಿ ಸಂಘ ರಚನೆ

ಪುತ್ತೂರು: ಇಲ್ಲಿನ ಪರ್ಲಡ್ಕದ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘವು ನೂತನವಾಗಿ ಆಸ್ತಿತ್ವಕ್ಕೆ ಬಂದಿದೆ. ೧೯೫೬ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಕಳೆದ ೬೪ ವರ್ಷಗಳಿಂದ ನಿರಂತರವಾಗಿ ಪರ್ಲಡ್ಕ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದೆ. ಇದರ ಹಲವಾರು ಹಳೆವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದರೂ, ಹಿರಿಯ ವಿದ್ಯಾರ್ಥಿಗಳ ಸಂಘ ರಚನೆಯಾಗಿರಲಿಲ್ಲ. ಇದೀಗ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡ ನವೀಕರಣಗೊಳಿಸುವ ನಿಟ್ಟಿನಲ್ಲಿ ಕಟ್ಟಡ ಕಾಮಗಾರಿ ಸಮಿತಿಯು ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೊಡಿಸುವ ಸಲುವಾಗಿ ಹಿರಿಯ ವಿದ್ಯಾರ್ಥಿ ಸಂಘದ ರಚನೆಗೆ ಚಾಲನೆ ನೀಡಿದೆ.

ಸಂಘದ ಪ್ರಥಮ ಅಧ್ಯಕ್ಷರಾಗಿ ಪುತ್ತೂರು ಶ್ರೀರಾಮ್ ಕನ್‌ಸ್ಟ್ರಕ್ಷನ್ ಮಾಲಕರಾದ ಪ್ರಸನ್ನ ಭಟ್ ಸರ್ವಾನುಮತದಿಂದ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಮಾಜಿ.ತಾ.ಪಂ.ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಮಕ್ಕಳ ತಜ್ಞ ಡಾ| ಮಂಜುನಾಥ್ ಶೆಟ್ಟಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜೈನುದ್ದೀನ್ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಮಂಜುನಾಥ ಆಚಾರ್ಯ ಬೀರಮಲೆ, ಖಜಾಂಜಿಯಾಗಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ವತ್ಸಲಾ ಬಿ. ಜೊತೆ ಕಾರ್ಯದರ್ಶಿಯಾಗಿ ವಿಕ್ರಂ ಪರ್ಲಡ್ಕ, ಶ್ರೀಮತಿ ವೀಣಾ ಮಸ್ಕರೇನಸ್ ಆಯ್ಕೆಗೊಂಡರು. ಸಂಘದ ಸಲಹಾ ಸಮಿತಿ ಸದಸ್ಯರಾಗಿ ಡಾ| ರವೀಂದ್ರ ಆಚಾರ್ಯ ಹುಬ್ಬಳ್ಳಿ, ಸುದರ್ಶನ್ ರಾವ್ , ಡಾ| ಮನೋಹರ್ ಕೆವಿ ಮಂಗಳೂರು, ವಿಜಯಕುಮಾರ್ ಮೊಳೆಯಾರ್, ಹಾಗೂ ಮಹೇಶ್ ಎಂ ಪರ್ಲಡ್ಕ, ಇವರುಗಳನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಕಟ್ಟಡ ಕಾಮಗಾರಿ ಸಮಿತಿಯ ಅಧ್ಯಕ್ಷೆ, ನಗರಸಭಾ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಗೌರಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಸಭೆಯನಲ್ಲಿ ಹಿರಿಯ ವಿದ್ಯಾರ್ಥಿಗಳಾದ ಡಾ| ರವೀಂದ್ರ ಆಚಾರ್, ರಮೇಶ್ , ಶ್ರೀ ಆದಿತ್ಯ ಬಾಳಿಗಾ ಚಂದ್ರಶೇಖರ್ ಚಿದಾನಂದ ನಾಯಕ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಮೊದಲಿಗೆ ಪ್ರಭಾರ ಮುಖ್ಯಗುರುಗಳಾದ ಶ್ರೀಮತಿ ವತ್ಸಲಾ ಬಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಾಣಿಶ್ರೀ ವಂದಿಸಿದರು. ಸಭೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸಮಿತಿ ಸದಸ್ಯರು, ಕಟ್ಟಡ ಕಾಮಗಾರಿ ಸಮಿತಿ ಸದಸ್ಯರು, ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.