ಪುತ್ತೂರು: ಬಡಗನ್ನೂರು ಗ್ರಾಮದ ಆದಿದೈವ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ನಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26 ರಿಂದ ಆರಂಭಗೊಂಡು ಮಾ.02 ರವರೇಗೆ ವಿಜೃಂಭಣೆಯಿಂದ ಜರಗಲಿದೆ.
ಫೆ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ಶ್ರೀ ಗಣಪತಿ ಹೋಮ, ಮೀನ ಲಗ್ನದ ಸುಮುಹೂರ್ತದಲ್ಲಿ ಧ್ವಜಾರೋಹಣ, ಶ್ರೀ ನಾಗ ಸಾನ್ನಿಧ್ಯದಲ್ಲಿ ಕ್ಷೀರ ಅಭಿಷೇಕ, ತಂಬಿಲ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ನವಕ ಕಲಶಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ, ಧೂಮಾವತಿ ಸಾನ್ನಿಧ್ಯದಲ್ಲಿ ಬಲಿ ಉತ್ಸವ ನಡೆಯಲಿದೆ.
ಫೆ.27ರಂದು ಬೆಳಿಗ್ಗೆ ಧೂಮಾವತಿ ಸಾನಿಧ್ಯದಲ್ಲಿ ಶುದ್ಧ ಕಲಶ, ಪಂಚಪರ್ವ, ಧೂಮಾವತಿ ನೇಮೋತ್ಸವ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ಬಳಿಕ ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ಶುದ್ಧ ಕಲಶ ಹೋಮ, ಪಂಚಪರ್ವ, ರಾತ್ರಿ ಭಂಡಾರ ಇಳಿಯುವುದು, ಧೂಮಾವತಿ ಬಲಿ ಉತ್ಸವ ನಡೆದು ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಫೆ.28ರಂದು ಬೆಳಿಗ್ಗೆ ನಾಗ ಸಾನ್ನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಪಂಚಾಮೃತ ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಲ್ಲಾಲ್ಧಾಯ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ ನಡೆಯಲಿದೆ. ರಾತ್ರಿ ಭಂಡಾರ ಇಳಿಯುವುದು, ಧೂಮಾವತಿ ಬಲಿ ಉತ್ಸವ, ಕಲ್ಲಾಲ್ಲಯ ನೇಮೋತ್ಸವ, ಕೊರತಿ ದೈವಕ್ಕೆ ನರ್ತನ ಸೇವೆ ನಡೆಯಲಿದೆ.
ಮಾ.01ರಂದು ಬೆಳಿಗ್ಗೆ ಬೆರ್ಮೆರ್ ಗುಂಡ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ದೇಯಿ ಬೈದೆತಿ, ಸತ್ಯಧರ್ಮ ಚಾವಡಿಯಲ್ಲಿ ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮೂಲಸ್ಥಾನ ಗರಡಿಯಲ್ಲಿ ಕಲಶ ಹೋಮ, ಪೂಜೆ, ಧೂಮಾವತಿ ಬಲಿ ಉತ್ಸವ ನಡೆದು ರಾತ್ರಿ ವಿದ್ವಾನ್ ವೆಂಕಟಕೃಷ್ಣ ಭಟ್ ಇವರ ಶಿಷ್ಯೆ, ಶ್ರೀರಕ್ಷಾ ಎಸ್.ಎಚ್.ಪೂಜಾರಿ ಹಾಡಿರುವ ಸುಧಾಕರ ಸುವರ್ಣ ತಿಂಗಳಾಡಿ ಸಾಹಿತ್ಯದಲ್ಲಿ ಮೂಡಿಬಂದ ಕನ್ನಡ ಭಕ್ತಿಗಾನ ಸುಧೆ ` ಗೆಜ್ಜೆಗಿರಿ ನಂದಾಮೃತ’ ಭಕ್ತಿಗಾನ ಲೋಕಾರ್ಪಣೆ ನಡೆಯಲಿದೆ. ಬಳಿಕ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ದರ್ಶನ ಸೇವೆ, ಬೆರ್ಮೆರ್ ಗುಂಡದಲ್ಲಿ ಫಲ ಸಮರ್ಪಣೆ, ವೀರಪಥದಲ್ಲಿ ಕೋಟಿ ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ, ಮಾತೆ ಮಕ್ಕಳ ಪುನೀತ ಸಮಾಗಮ ನಡೆದು ಬಳಿಕ ಕೋಟಿ ಚೆನ್ನಯ ಮೂಲಸ್ಥಾನ ಗರಡಿ ನೇಮೋತ್ಸವ, ಪ್ರಸಾದ ವಿತರಣೆ, ದರ್ಶನ ಸೇವೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೇಮೋತ್ಸವ ಸಮಿತಿ ಪದಾಧಿಕಾರಿಗಳಾದ ಅಧ್ಯಕ್ಷ ಸಂಜೀವ ಪೂಜಾರಿ ಕೂರೇಲು, ಸಂಚಾಲಕ ಸತ್ಯಜಿತ್ ಸುರತ್ಕಲ್, ಗೌರವಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ಕೆ.ಟಿ, ಉಪಾಧ್ಯಕ್ಷರುಗಳಾದ ರವಿ ಕಕ್ಕೆಪದವು, ವಾಸು ಪೂಜಾರಿ ಗುಂಡ್ಯಡ್ಕ, ಪ್ರಕಾಶ್ ಪೂಜಾರಿ ಕಟಪಾಡಿ, ಯಶವಂತ್ ಪೂಜಾರಿ ದೇರಾಜೆಗುತ್ತು, ಪ್ರಧಾನ ಕಾರ್ಯದರ್ಶಿ ಮೋಹನ್ಸಾದ್ ಬಂಗೇರ, ಜತೆ ಕಾರ್ಯದರ್ಶಿಗಳಾದ ಜನಾರ್ದನ ಪೂಜಾರಿ ಪಡುಮಲೆ,ಜಯವಿಕ್ರಮ್ ಕಲ್ಲಾಪು, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಅನುವಂಶಿಕ ಮುಖ್ಯಸ್ಥ ಶ್ರೀಧರ ಪೂಜಾರಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್,ಉಪಾಧ್ಯಕ್ಷರುಗಳಾದ ಪಿತಾಂಬರ ಹೇರಾಜೆ, ಡಾ.ರಾಜಶೇಖರ್ ಕೋಟ್ಯಾನ್, ಅನುವಂಶಿಕ ಮೊಕ್ತೇಸರರುಗಳಾದ ಲೀಲಾವತಿ ಅಮ್ಮ, ರವೀಂದ್ರ ಸುವರ್ಣ, ಪದ್ಮನಾಭ ಸುವರ್ಣ, ಸವಿತ ಮಹಾಬಲ ಪೂಜಾರಿರವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.02: ದೇಯಿ ಬೈದ್ಯೆತಿ ಮಹಾನೇಮ
ಮಾ.02ರಂದು ಬೆಳಿಗ್ಗೆ ಸತ್ಯಧರ್ಮ ಚಾವಡಿಯಲ್ಲಿ ಕಲಶ ಹೋಮ, ನೈವೇದ್ಯ ಸೇವೆ, ದೇಯಿ ಬೈದ್ಯೆತಿ ಸಮಾಧಿಯಲ್ಲಿ ದೀಪಾರಾಧನೆ, ಮಹಾಪೂಜೆ, `ದೇಯಿ ಬೈದ್ಯೆತಿ ಮಹಾನೇಮ ವೈಭವ’ ನಡೆದು ಪ್ರಸಾದ ವಿತರಣೇ, ಧ್ವಜಾವರೋಹಣ ನಡೆದು ಅನ್ನಸಂತರ್ಪಣೆ ನಡೆಯಲಿದೆ.