ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ಕಾಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಉದಯ ರೈ ಮಾದೋಡಿ ಆಯ್ಕೆಯಾಗಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿ, ಬೆಳಂದೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಸುಜಾತರವರ ಅಧ್ಯಕ್ಷತೆಯಲ್ಲಿ ಫೆ ೨೪ರಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯಕುಮಾರ್ ಅಗಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕುಶಾಲಪ್ಪ ಗೌಡ, ಭವಾನಿಶಂಕರ ಅಗಳಿ, ರಾಧಾಕೃಷ್ಣ ಬೈತಡ್ಕ, ಹರೀಶ್ ಮುಂಡಾಳ, ಲಲಿತಾ ಅಜರಂಗಳ, ತಾರಾ ಬೆಳಂದೂರು, ಮಾಧವಿ ಬೊಮ್ಮೊಡಿ. ಅರ್ಚಕರಾದ ನಾಗರಾಜ್ ಭಾಗವತ್, ವಿನಾಯಕ ಜೋಷಿ, ಬೆಳಂದೂರು ಗ್ರಾ.ಪಂ. ಸದಸ್ಯರಾದ ಮೋಹನ್ ಅಗಳಿ, ಜಯಂತ ಅಬೀರ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮೋನಪ್ಪ ಗೌಡ ಕೂರೋಡಿ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಶ್ರೀಧರ ಗೌಡ ಅಗಳಿ, ಲಿಂಗಪ್ಪ ಗೌಡ ಅಗಳಿ, ಬಾಲಕೃಷ್ಣ ಗೌಡ ಅಗಳಿ, ಶೇಖರ ಮೇಗಿನಮನೆ, ಕರುಣಾಕರ್ ನಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರ ಹಸ್ತಾಂತರ:
ಬೆಳಂದೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸುಜಾತರವರು ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾದ ಉದಯ ರೈ ಮಾದೋಡಿಯವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು- ಉದಯ ರೈ ಮಾದೋಡಿ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಉದಯ ರೈ ಮಾದೋಡಿಯವರು, ಎಲ್ಲರೂ ಸಮರ್ಪಣಾ ಮನೋಭಾವದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ದೇವರ ಸಾನಿಧ್ಯ ಬೆಳಗುವುದರೊಂದಿಗೆ ಊರಿಗೆ ಸುಭಿಕ್ಷೆಯಾಗಲಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲ ಭಕ್ತರನ್ನು ಸೇರಿಸಿಕೊಂಡು ದೇವಾಲಯದ ಅಭಿವೃದ್ಧಿಯಲ್ಲಿ ಗಮನಹರಿಸಲಾಗುವುದು ಎಂದವರು, ಬೆಳಂದೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಸುಜಾತವರು ದೇವಸ್ಥಾನದ ಆಡಳಿತಾಧಿಕಾರಿಯಾಗಿ ದೇವಸ್ಥಾನದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಕಾರ್ಯ ನಿರ್ವಹಿಸಿದ್ದು, ನೂತನ ವ್ಯವಸ್ಥಾಪನಾ ಸಮಿತಿಯಿಂದ ಕೃತಜ್ಞತೆ ಸಲ್ಲಿಸಿದ್ದರು.
ಉದಯ ರೈ ಮಾದೋಡಿಯವರ ಪರಿಚಯ:
ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಉದಯ ರೈ ಮಾದೋಡಿಯವರು, ಅಗಳಿ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ೧೦ ವರ್ಷ ಆಡಳಿತ ಸಮಿತಿ ಸದಸ್ಯರಾಗಿಯೂ ಸೇವೆಸಲ್ಲಿಸಿರುವ ಇವರು ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯಲ್ಲಿ ಸುಮಾರು ೨೫ ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಸಹಕಾರ ಗ್ರಾಹಕರ ಮಹಾ ಮಂಡಲದ ಅಧ್ಯಕ್ಷರಾಗಿ, ಮಂಗಳೂರು ಜನತಾ ಬಜಾರ್ನ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಸಮಿತಿ ಸದಸ್ಯರಾಗಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯರಾಗಿ, ಬೆಳಂದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಗದ ಅಧ್ಯಕ್ಷರಾಗಿ, ಕಾಣಿಯೂರು ಯೂತ್ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷರಾಗಿ, ಕೊಡಿಮಾರು ಗೆಳೆಯರ ಬಳಗದ ಗೌರವಾಧ್ಯಕ್ಷರಾಗಿ, ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ಗೌರವಾಧ್ಯಕ್ಷರಾಗಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿಯಲ್ಲಿಯೂ ಉದಯ ರೈ ಮಾದೋಡಿಯವರು ಸೇವೆ ಸಲ್ಲಿಸಿದ್ದಾರೆ.