HomePage_Banner
HomePage_Banner
HomePage_Banner
HomePage_Banner

ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಹಸಿರು ಹೊರೆಕಾಣಿಕೆ ಸಮರ್ಪಣೆ

ಕಾಣಿಯೂರು : ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ ,ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಹಾಗೂ ನೇಮೋತ್ಸವ ಫೆ.೨೪ರಂದು ಆರಂಭಗೊಂಡಿದ್ದು ಫೆ.೨೬ರ ವರೆಗೆ ಕುವೆತ್ತೋಡಿ ಬ್ರಹ್ಮಶ್ರೀ ನರಸಿಂಹ ಪ್ರಸಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಫೆ.೨೪ರಂದು ಕ್ಷೇತ್ರಕ್ಕೆ ಗ್ರಾಮದ ವಿವಿದೆಡೆಯಿಂದ ಹಸಿರುಹೊರೆಕಾಣಿಕೆ ಸಮರ್ಪಿಸಲಾಯಿತು.ಬರೆಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ,ಕಾಪೆಜಾಲು,ಕುದ್ಮಾರುನಿಂದ ಮೆರವಣಿಗೆ ಮೂಲಕ ಹೊರೆ ಕಾಣಿಕೆ ಸಂಗ್ರಹಿಸಿ ಕ್ಷೇತ್ರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್ ಕಾರ್ಲಾಡಿ, ಉಪಾಧ್ಯಕ್ಷ ಸತೀಶ್ ಹೊಸೊಕ್ಲು, ಸಂಜೀವ ಗೌಡ ಕೂರ, ರಾಮಯ್ಯ ಗೌಡ ನೂಜಿ, ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ,ಜತೆ ಕಾರ್ಯದರ್ಶಿ ಪದ್ಮನಾಭ ಕೆರೆನಾರು, ರಾಘವೇಂದ್ರ ದೈಪಿಲ,ಕೋಶಾಧಿಕಾರಿ ಕುಂಇಣ್ಣ ನಾಯ್ಕ ಕಾರ್ಲಾಡಿ, ಆಡಳಿತ ಸಮಿತಿ ಅಧ್ಯಕ್ಷ ಹರೀಶ ಬೇರಿಕೆ, ಉಪಾಧ್ಯಕ್ಷ ರಮೇಶ್ ಬೇರಿಕೆ, ಕಾರ್ಯದರ್ಶಿ ತಾ.ಪಂ.ಸದಸ್ಯೆ ಲಲಿತಾ ಈಶ್ವರ, ಜತೆ ಕಾರ್ಯದರ್ಶಿ ಬಾಬು ಬರೆಪ್ಪಾಡಿ, ಕೋಶಾಧಿಕಾರಿ ಅಶ್ವತ್ಥ್ ಪದ್ಮುಂಜ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಉಪಾಧ್ಯಕ್ಷ ಚೆನ್ನಪ್ಪ ಗೌಡ ನೂಜಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಮೆದು, ಜತೆ ಕಾರ್ಯದರ್ಶಿ ಅಶೋಕ ಕೆಡೆಂಜಿ, ಕೋಶಾಧಿಕಾರಿ ದೇವರಾಜ್ ನೂಜಿ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.