HomePage_Banner
HomePage_Banner
HomePage_Banner
HomePage_Banner

ಫೆ.26: ಪ್ರಸಿದ್ಧ ಎಮ್ಮೆಮಾಡು ಉರೂಸ್ ಸಮಾರಂಭ

ಪುತ್ತೂರು: ಕೊಡಗು ಜಿಲ್ಲೆಯ ಪ್ರಸಿದ್ಧ ಎಮ್ಮೆಮಾಡು ಉರೂಸ್ ಸಮಾರಂಭ ಫೆ.೨೬ರಿಂದ ಮಾರ್ಚ್ ೫ರ ತನಕ ಧಾರ್ಮಿಕ ಪ್ರವಚನ, ದ್ಸಿಕ್ರ್ ಹಲ್ಬಾ, ಖತಂ ದುವಾ, ದುವಾ ಮಜ್ಲಿಸ್, ಸ್ವಲಾತುನ್ನಾರಿಯ, ಸಮಾರೋಪ ಸಮ್ಮೇಳನದೊಂದಿಗೆ ನಡೆಯಲಿದೆ.

ಫೆ.೨೬ರಂದು ಮಖಾಂ ಝಿಯಾರತ್ ಉರೂಸ್ ಉದ್ಘಾಟನೆ ನಡೆಯಲಿದೆ. ಎಮ್ಮೆಮಾಡು ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನಡೆಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಉರೂಸ್ ಉದ್ಘಾಟಿಸಲಿದ್ದಾರೆ. ರಾತ್ರಿ ಮತಪ್ರವಚನ ನಡೆಯಲಿದೆ. ಫೆ.೨೭ರಂದು ದಿಕ್ರ್ ಹಲ್ಬ, ಫೆ.೨೮ರಂದು ಖತಂ ದುಅ ಮಗ್ರಿಬ್ ಬಳಿಕ, ಮಾ.೧ರಂದು ಸಾರ್ವಜನಿಕ ಸಮ್ಮೇಳನ, ಮಾ.೩ರಂದು ದುಅ ಮಜ್ಲಿಸ್, ಮಾ.೪ರಂದು ಮಗ್ರಿಬ್ ಬಳಿಕ ಸ್ವಲಾತುನ್ನಾರಿಯ ಮಜ್ಲಿಸ್ ಹಾಗೂ ಮಾ.೫ರಂದು ಸಮಾರೋಪ ಸಮ್ಮೇಳನ ಜುಮಾ ನಮಾಝ್ ಬಳಿಕ ನಡೆಯಲಿದೆ. ಕೋವಿಡ್ ನಿಯಮಾವಳಿ ಆದೇಶದಂತೆ ಅನ್ನದಾನ ರದ್ದುಗೊಳಿಸಲಾಗಿದೆ. ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.