ಪುತ್ತೂರು : ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯ ಸತ್ಯ ಧರ್ಮ ಚಾವಡಿಯಲ್ಲಿ ಸಕಲ ವಿಘ್ನ ನಿವಾರಣೆಗೆ 12 ತೆಂಗಿನಕಾಯಿ ಗಣಹೋಮ ಮತ್ತು ಪರಮ ಗುರು ಶ್ರೀನಾರಾಯಣ ಗುರುದೇವರ ಫೋಟೋ ಇಟ್ಟು ಗುರುಪೂಜೆ ಸಲ್ಲಿಸಲಾಯಿತು.
ಬಳಿಕ ಮಾತೆ ದೇಯಿ ಬೈದೆತಿಯ ಗರ್ಭಗುಡಿಯಲ್ಲಿ ಪೂಜೆ ಹಾಗೂ ಕೋಟಿ ಚೆನ್ನಯ ಮೂಲಸ್ಥಾನ ಗರಡಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಿವಾನಂದ ಶಾಂತಿಯವರಿಂದ ಪೂಜೆ ಸಲ್ಲಿಸಲಾಯಿತು.