HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಉತ್ಸವಾದಿ – ಧ್ವಜಾರೋಹಣ, ಬಸವನ ಮನೆ ಪ್ರವೇಶ, ರಥಕ್ಕೆ ಬೆಳ್ಳಿ ಮುಗುಳಿ ಅರ್ಪಣೆ

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಉತ್ಸವಾದಿಗಳ ಪ್ರಕಾರ ಧ್ವಜಾರೋಹಣ ಹಾಗೂ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಫೆ. ೨೪ರಂದು ಜರಗಿತು.
ವೇದಮೂರ್ತಿ ಕೆಮ್ಮಿಂಜೆ ಕೇಶವ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು. ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಶತ ರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ, ಅನ್ನ ಸಂತರ್ಪಣೆ ಜರಗಿತು.


ಈ ಮಧ್ಯೆ ದೇವಳದ ವ್ಯವಸ್ಥಾಪನಾ ಸಮಿತಿಯ ಆಶಯದಂತೆ ನಿರ್ಮಿಸಲಾದ ಶಿಲಾಮಯವಾದ ಬಸವನ ಮನೆಗೆ ಬಸವನ ಪ್ರವೇಶದೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ಹಾಗೂ ದೇವಳದ ಬ್ರಹ್ಮರಥಕ್ಕೆ ಬೆಳ್ಳಿಯ ಮುಕುಟ ಕಲಶ (ಮುಗುಳಿ) ಸಮರ್ಪಣೆ ಹಾಗೂ ಮಹಾಕಾಳಿ ಅಮ್ಮನವರಿಗೆ ಬೆಳ್ಳಿಯ ಪಾದ ಸಮರ್ಪಣೆಯೂ ಜರುಗಿತು.


ಕಾರ್ಯಕ್ರಮದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಮಿತಿ ಸದಸ್ಯರಾದ ಹರೀಶ್ ಉಪಾಧ್ಯಾಯ, ಹರಿರಾಮಚಂದ್ರ, ಸುನಿಲ್, ಮಹೇಶ್ ಬಜತ್ತೂರು, ಜಯಂತ ಪೊರೋಳಿ, ರಾಮ ನಾಯ್ಕ್, ಹರಿಣಿ, ಪ್ರೇಮಲತಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್, ಮಾಜಿ ಸದಸ್ಯರಾದ ಕೆ. ರಾಧಾಕೃಷ್ಣ ನಾಕ್, ಡಾ. ರಾಜಾರಾಮ, ಸಂಜೀವ ಗಾಣಿಗ, ಸುಂದರ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ಧನ್ಯ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸ್ಥಳೀಯ ಪ್ರಮುಖರಾದ ಯು. ರಾಮ, ಡಾ| ಎಂ.ಎನ್. ಭಟ್, ಡಾ| ಕೆ.ಜಿ. ಭಟ್, ಬಿ. ಐತ್ತಪ್ಪ ನಾಯ್ಕ್, ರಾಮಚಂದ್ರ ಮಣಿಯಾಣಿ, ವಿಜಯ ಕುಮಾರ್ ಕಲ್ಲಳಿಕೆ, ಚಿದಾನಂದ ನಾಯಕ್, ಯು.ಜಿ. ರಾಧ, ಎನ್. ಉಮೇಶ್ ಶೆಣೈ, ಮಹೇಂದ್ರ ವರ್ಮ ಉಪಸ್ಥಿತರಿದ್ದರು.

ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ, ಕೃಷ್ಣ ಪ್ರಸಾದ್ ಬಡಿಲ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.