ಪುತ್ತೂರು: ಟೈಲರ್ ವೃತ್ತಿ ಬಾಂಧವರನ್ನು ಸಂಘಟಿಸುವ ಉದ್ದೇಶದಿಂದ ಸ್ಥಾಪನೆಯಾದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇನ್ ೨೧ ವರ್ಷಗಳನ್ನು ಪೂರೈಸಿ ೨೨ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ೧೯೯೯ರ ಮಾ.೭ರಂದು ಸ್ಥಾಪನೆಯಯಾದ ಈ ಸಂಘಟನೆಯು ಪ್ರತೀವರ್ಷ ಮಾ.೭ರಂದು ಸಂಸ್ಥಾಪನಾ ದಿನವಾಗಿ ಟೈಲರ್ಸ್ ಡೇ ದಿನವನ್ನಾಗಿ ಆಚರಿಸುವ ಉದ್ದೇಶ ಹೊಂದಿದೆ.
ಪುತ್ತೂರು ತಾಲೂಕು ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಮಾ.೭ರಂದು ನಡೆಯುವ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು. ಪುತ್ತೂರು ತಾಲೂಕು ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಜಯರಾಮ ಬಿ.ಎನ್. ಅದ್ಯಕ್ಷತೆ ವಹಿಸಿದ್ದರು. ಸಮಿತಿ ವತಿಯಿಂದ ಪುತ್ತೂರು ಶಾಸಕ ಸಂಜೀವ ಮಠಂದೂರುರವರನ್ನು ಭೇಟಿ ಮಾಡಿ ತಾಲೂಕಿನ ಬಡ ಕುಟುಂಬದಲ್ಲಿರುವ ಟೈಲರ್ ಅಸೋಸಿಯೇಶನ್ ಸದಸ್ಯರಿಗೆ ಶಾಸಕರ ಹಾಗೂ ಟೈಲರ್ ಅಸೋಸಿಯೇಶನ್ ವತಿಯಿಂದ ಹೊಲಿಗೆ ಯಂತ್ರವನ್ನು ನೀಡುವುದೆಂದೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಸಮಿತಿ ಲೆಕ್ಕಪರಿಶೋಧಕ ರಘುನಥ ಬಿ., ಜಿಲ್ಲಾ ಕಾರ್ಯದರ್ಶಿ ಜಯಂತ ಉರ್ಲಾಂಡಿ, ತಾಲೂಕು ಕಾರ್ಯದರ್ಶಿ ಉಮಾನಾಕ್ ಪುತ್ತೂರು, ಜಿಲ್ಲಾ ಸಮಿತಿ ಸದಸ್ಯ ಶಂಭು ಬಲ್ಯಾಯ ಮುಂಡೋಡಿ, ಜಿಲ್ಲಾ ಸಮಿತಿ ಸದಸ್ಯ ದಯಾನಂದ ಹೆಗ್ಡೆ ತಾರಿಗುಡ್ಡೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ವಲಯದ ವಿಜಯಲಕ್ಷ್ಮಿ ಪುತ್ತೂರು, ಯಶೋಧರ ಜೈನ್ ಪುತ್ತೂರು, ಸವಿತಾ ಜಿ.ಕೆ.ಪುತ್ತೂರು, ಮೋನಪ್ಪ ಗೌಡ ತೆಂಕಿಲ, ಸಾವಿತ್ರಿ ಮುರ, ರೇವತಿ ಸಿ.ಎನ್., ರವಿ ಡಿ.ಸೋಜ, ಕುಂಬ್ರ ವಲಯದ ಆನಂದ ರೈ, ಬಾಲಕೃಷ್ಣ ಪಾಟಾಳಿ ಸವಣೂರು ವಲಯದ ಯಶೋಧ ನವೀನ್, ಜಗನ್ನಾಥ, ಉಪ್ಪಿನಂಗಡಿ ವಲಯದ ಉಷಾಚಂದ್ರ ಮುಳಿಯ, ಜಯಶ್ರೀ ಆಚಾರ್ಯ, ಪುಣಚ ವಲಯದ ನಳಿನಿ ಸುವರ್ಣ, ರೇಖಾ, ರುಕ್ಮಯ್ಯ ಗೌಡ, ಪುತ್ತೂರು ವಲಯದ ರಮೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.