HomePage_Banner
HomePage_Banner
HomePage_Banner
HomePage_Banner

34-ನೆಕ್ಕಿಲಾಡಿಯಲ್ಲಿ ಪಿಂಚಣಿ ಅದಾಲತ್

  • ಫಲಾನುಭವಿಗಳಿಗೆ ಸಮಸ್ಯೆಗಳಿದ್ದಲ್ಲಿ ಸರಿಪಡಿಸುವ ಉದ್ದೇಶಿತ ಕಾರ್‍ಯಕ್ರಮ-ಯತೀಶ್ ಉಳ್ಳಾಲ್

ಉಪ್ಪಿನಂಗಡಿ: ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಸಲುವಾಗಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ಪಡೆಯುವಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಪಿಂಚಣಿ ಅದಾಲತ್ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳು ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್ ಹೇಳಿದರು. ಅವರು ಫೆ. ೨೪ರಂದು ಕಂದಾಯ ಇಲಾಖೆ, ಉಪ ವಿಭಾಗಾಧಿಕಾರಿ ಪುತ್ತೂರು ಹಾಗೂ ತಾಲೂಕು ಆಡಳಿತ ಪುತ್ತೂರು ಇದರ ಸಹಯೋಗದಲ್ಲಿ ಬಜತ್ತೂರು, ಹಿರೇಬಂಡಾಡಿ, ಉಪ್ಪಿನಂಗಡಿ, ೩೪-ನೆಕ್ಕಿಲಾಡಿ, ಕೋಡಿಂಬಾಡಿ-ಬೆಳ್ಳಿಪ್ಪಾಡಿ ಗ್ರಾಮ ವ್ಯಾಪ್ತಿಯ ಪಿಂಚಣಿ ಯೋಜನೆಯ ಫಲಾನುಭವಿಗಳಿಗಾಗಿ ಹಮ್ಮಿಕೊಳ್ಳಲಾದ ಪಿಂಚಣಿ ಅದಾಲತ್ ಕಾರ್‍ಯಕ್ರಮದಲ್ಲಿ ಮಾತನಾಡಿ ತಾಲ್ಲೂಕಿನಲ್ಲಿ ಇದು ೨ನೇ ಕಾರ್‍ಯಕ್ರಮವಾಗಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ಸಮಾಜದ ಅಶಕ್ತ, ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವಿವಿಧ ಮಾಸಾಶನ ಯೋಜನೆಗಳಿದ್ದು, ಅದರ ಮಾಹಿತಿ ಪಡೆದುಕೊಂಡು ಅರ್ಹರು ಅದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದ ಅವರು ಈ ವರ್ಷದಲ್ಲಿ ೩೭೦ ಅಂತ್ಯ ಸಂಸ್ಕಾರ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ೨೬೦ ಮಂದಿಗೆ ವಿತರಣೆ ಮಾಡುವಷ್ಟು ಅನುದಾನ ಬಂದಿರುತ್ತದೆ, ಉಳಿದ ೧೧೦ ಮಂದಿಗೆ ಹಿರಿತನದ ಆಧಾರದಲ್ಲಿ ಮತ್ತೆ ದೊರಕಲಿದೆ ಎಂದರು.

ಪುತ್ತೂರು ತಹಸೀಲ್ದಾರ್, ಐಎಎಸ್. ಅಧಿಕಾರಿಣಿ ಶ್ರೀಮತಿ ಮೋನಾ ರೋತ್ ಮಾತನಾಡಿ ಇಂತಹ ಅದಾಲತ್ ಮೂಲಕ ಫಲಾನುಭವಿಗಳು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದರು. ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಲೋಕನಾಥ್, ಬೀಡಿ ಕಾರ್ಮಿಕರ ಇಲಾಖೆಯ ಡಾ| ಚಂದ್ರಾವತಿ ಇಲಾಖಾ ಮಾಹಿತಿ ನೀಡಿದರು. ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಮುಳಿಯ ಸಂದರ್ಭೋಚಿತವಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಹರೀಶ್ ನಾಯಕ್, ಗೀತಾ ವಾಸು ಗೌಡ, ವೇದಾವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ ಉಪಸ್ಥಿತರಿದ್ದರು.

ಗ್ರಾಮಕರಣಿಕರಾದ ಶರಣ್ಯ ಸ್ವಾಗತಿಸಿ, ರಮಾನಂದ ಚಕ್ಕಡಿ ವಂದಿಸಿದರು. ಕಂದಾಯ ನಿರೀಕ್ಷಕ ವಿಜಯವಿಕ್ರಂ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.