HomePage_Banner
HomePage_Banner
HomePage_Banner
HomePage_Banner

ಕುಂಬ್ರ ಬದ್ರಿಯಾನಗರ ಬದ್ರಿಯಾ ಜಮಾಅತ್ ಕಮಿಟಿ | 36ನೇ ಬಾರಿಗೆ ಅಧ್ಯಕ್ಷರಾಗಿ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್ ಪುನರಾಯ್ಕೆ

  • ಉಪಾಧ್ಯಕ್ಷ ಹಮೀದ್ ದರ್ಬಾರ್, ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ

ಪುತ್ತೂರು: ಕುಂಬ್ರ ಬದ್ರಿಯಾ ನಗರ ಅಲ್‌ಮದ್ರಸತುಲ್ ಬದ್ರಿಯಾ ಮತ್ತು ಬದ್ರಿಯಾ ಜುಮಾ ಮಸೀದಿ ಕುಂಬ್ರ ಇದರ ವಾರ್ಷಿಕ ಮಹಾಸಭೌಎಯು ಫೆ. ೧೯ ರಂದು ಮಸೀದಿ ಸಭಾಂಗಣದಲ್ಲಿ ಅಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್ ರವರು ಪುನರಾಯ್ಕೆಯಾದರು. ಕಳೆದ ೩೫ ವರ್ಷಗಳಿಂದ ಜಮಾತ್ ಕಮಿಟಿ ಅಧ್ಯಕ್ಷರಾಗಿರುವ ಅವರನ್ನು ಜಮಾಅತರು ಒಕ್ಕೊರಳಿನಿಂದ ಮರು ಅಯ್ಕೆ ಮಾಡಿದರು. ೧೯೮೫ ರಲ್ಲಿ ಮದ್ರಸ ಆರಂಭವಾಗುವ ವೇಳೆಯಲ್ಲೇ ಜಮಾತನ್ನು ಮುನ್ನಡೆಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಹಮೀದ್ ದರ್ಬಾರ್ ಅವರನ್ನು ಮರು ಆಯ್ಕೆ ಮಾಡಲಾಯಿತು. ಮೂರನೇ ಬಾರಿಗೆ ಇವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಕೋಳಿಗದ್ದೆ, ಕಾರ್ಯದರ್ಶಿಯಾಗಿ ಬಶೀರ್ ಕಡ್ತಿಮಾರ್, ಕೋಶಾಧಿಕಾರಿಯಾಗಿ ಅಬ್ಬಾಸ್ ಬ್ರೆಂಚ್, ಮದ್ರಸ ಉಸ್ತುವಾರಿಗಳಾಗಿ ಪಳ್ಳಿಕುಂಞಿ ಕಡ್ತಿಮಾರ್, ಉಸ್ಮಾನ್ ಮುಸ್ಲಿಯಾರ್ ಸಾಂತಿನಡಿ ಹಾಗೂ ಸಿದ್ದಿಕ್ ಕುಂಬ್ರ ಅವರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯೂಸುಫ್ ಕಡ್ತಿಮಾರ್, ಅಬ್ದುಲ್ಲ ಕೋಳಿಗದ್ದೆ, ಇಬ್ರಾಹಿಂ ಕಡ್ತಿಮಾರ್, ಅಬ್ದುಲ್‌ರಹಿಮಾನ್ ಕೊಯಿಲ, ಮಹಮ್ಮದ್ ಮಗಿರೆ, ಅರಬಿಕುಂಞಿ, ಇಸ್ಮಾಯಿಲ್ ಕೊಯಿಲ, ಇಸುಬು ಕೊಯಿಲ, ಹಾಗೂ ಇಸ್ಮಾಯಿಲ್ ಕೋಟ್ರಾಸ್ ರವರನ್ನು ನೇಮಿಸಲಾಯಿತು.

ಕಾರ್ಯದರ್ಶಿ ಬಶೀರ್ ಕಡ್ತಿಮಾರ್ ಲೆಕ್ಕಪತ್ರಮ ಮಂಡಿಸಿದರು. ಮಸೀದಿ ಖತೀಬ್ ಲುಕ್ಮಾನುಲ್ ಹಕೀಂ ಫೈಝಿ ದುವಾ ನೆರವೇರಿಸಿದರು. ಜಾಬಿರ್ ಜೌಹರಿ ಉಪಸ್ಥಿತರಿದ್ದರು.

ಜಮಾತ್ ಕಮಿಟಿ ಅದು ಸರಕಾರವಿದ್ದಂತೆ: ಅಹ್ಮದ್ ಹಾಜಿ
ಜಮಾತ್ ಕಮಿಟಿ ಅಂದರೆ ಅದೊಂದು ಸರಕಾರ ಇದ್ದಂತೆ. ಜಮಾತಿನ ಎಲ್ಲಾ ಆಗುಹೋಗುಗಳನ್ನು ಪರಿಶೀಲಿಸುವುದು ಮತ್ತು ಜಮಾತಿನಲ್ಲಿ ನೊಂದವರಿಗೆ ನೆರವಾಗುವ ಮೂಲಕ ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವು ನೀಡಬೇಕು. ಸ್ವಾರ್ಥತೆಯನ್ನು ಬಿಟ್ಟರೆ ಮಾತ್ರ ಸಮುದಾಯದ ನಾಯಕರಾಗಲು ಸಾಧ್ಯವಿದೆ. ನಾವು ಮಾಡುವ ಪ್ರತೀಯೊಂದು ಕೆಲಸಗಳು ಅಲ್ಲಾಹನಿಗೆ ತೃಪ್ತಿದಾಯಕವಾಗಿರಬೇಕು ಎಂದು ಹೇಳಿದರು.

ಸಭೆಯಲ್ಲಿ ಕೆ ಬಿ ಮಹಮ್ಮದ್ , ಅಲ್‌ಬದ್ರಿಯಾ ಯಂಗ್ ಮೆನ್ಸ್ ಕಮಿಟಿ ಅಧ್ಯಕ್ಷ ಆಸಿಫ್ ಕಡ್ತಿಮಾರ್, ಕಾರ್ಯದರ್ಶಿ ಸಾದಿಕ್ ಮಗಿರೆ, ಮಾಜಿ ಅಧ್ಯಕ್ಷ ಫಾರೂಕ್ ಮಗಿರೆ, ರಫೀಕ್ ಕಡ್ತಿಮಾರ್, ಲತೀಫ್ ಮಗಿರೆ, ಹಸೈನಾರ್ ಮಗಿರೆ, ಫಾರೂಕ್ ಕಡ್ತಿಮಾರ್, ನೌಶಾದ್ ಕೊಯಿಲ, ಸಿರಾಜ್ ಕೊಯಿಲ, ಮಹಮ್ಮದ್ ಕಡ್ತಿಮಾರ್, ಸಯ್ಯದ್ ಬ್ಯಾರಿ ಕೊಯಿಲ, ಸೂಪಿಚ್ಚ ಕೊಯಿಲ, ಹಸೈನಾರ್ ಕೋಳಿಗದ್ದೆ ಸೇರಿದಂತೆ ಜಮಾತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.