ಕಬಕ: ಕಬಕ ಸರಕಾರಿ ಪದವಿಪೂರ್ವ ಕಾಲೇಜಿನ ಅಗತ್ಯ ಬೇಡಿಕೆಗಳಿಗೆ ೨.ಲಕ್ಷ ರೂ.ಗಳನ್ನು ದೇಣಿಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಮುಂಬೈನಲ್ಲಿ ಉದ್ಯಮಿಯಾಗಿರುವ ಭವಾನಿ ಶಿಪ್ಪಿಂಗ್ ಕಂಪೆನಿಯ ಮಾಲಕ ಕೆ.ಡಿ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಕಾಲೇಜಿನಲ್ಲಿ ಬಳಿಕ ಮಾತನಾಡಿದ ಕೆ.ಡಿ.ಶೆಟ್ಟಿಯವರು ಶುಭಹಾರೈಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಟಿ.ಯಸ್.ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸರಿತಾ ಕೆ.ಡಿ ಶೆಟ್ಟಿ, ಮಗಳು ಶಿಖಾ, ಜಯರಾಮ ರೈ. ಕರಿಂಕ, ಪ್ರಜ್ವಲ್ ಜಯರಾಮ ರೈ ಉಪಸ್ಥಿತರಿದ್ದರು. ರುಕ್ಮಯ್ಯ ಗೌಡ ಪೋಳ್ಯ, ಶಾಬಾ ಅಭಿನಂದಿಸಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೇಮಲತಾ ಜೆ. ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಯನ ಕುಮಾರಿರವರು ಕೆ.ಡಿ ಶೆಟ್ಟಿಯವರ ವ್ಯಕ್ತಿ ಪರಿಚಯ ಮಾಡಿದರು. ಚಂದ್ರಹಾಸ ರೈ ಸ್ವಾಗತಿಸಿ ವನಿತಾ.ಕೆ ವಂದಿಸಿದರು. ಶ್ರೀಧರ ರೈ ಕಾರ್ಯಕ್ರಮ ನಿರೂಪಿಸಿದರು.