ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ.೯ರಿಂದ ಮಾ.೧೭ರವರೆಗೆ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ನಡೆಯಲಿರುವುದು. ಮಾ.೧೭ರಂದು ಕಿನ್ನಿಮಾಣಿ, ಪೂಮಾಣಿ. ಪಿಲಿಚಾಮುಂಡಿ ದೈವಗಳ ನೇಮವು ಜರಗಲಿರುವುದು. ಅದರ ಪ್ರಕಾರ ಫೆ.೨೬ರಂದು ಗೊನೆ ಮುಹೂರ್ತ ಪಟ್ರೋಡಿ ಬಾಲಕೃಷ್ಣ ರೈಯವರ ತೋಟದಲ್ಲಿ ನಡೆಯಿತು. ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಶ್ರೀ ಕುಮಾರ್ ಕತ್ರಿಬೈಲು ಮತ್ತು ಮಾಜಿ ಮೊಕ್ತೇಸರ ನರಸಿಂಹ ಪಕ್ಕಳ ಕರ್ನೂರು ನೆರವೇರಿಸಿದರು.
ಈ ಸಂದರ್ಭದಲ್ಲಿ ಅರ್ಚಕ ರವೀಂದ್ರ ಮಾಣಿಲತ್ತಾಯ, ಉತ್ಸವ ಸಮಿತಿಯ ಅಧ್ಯಕ್ಷ ವಿಕ್ರಂ ರೈ ಸಾಂತ್ಯ, ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ, ಖಜಾಂಜಿ ಪ್ರವೀಣ ರೈ ಮೇನಾಲ, ಉಪಾಧ್ಯಕ್ಷರುಗಳಾದ ಸದಾಶಿವ ರೈ ನಡುಬೈಲು, ನಾಗಪ್ಪ ಮಾಸ್ತರ್ ಬೊಮ್ಮಟ್ಟಿ, ಶಂಕರ ಮುಖಾರಿ ಪಟ್ರೋಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಆಳ್ವ ಸಾಂತ್ಯ, ಮೋಹನದಾಸ ಶೆಟ್ಟಿ ನೂಜಿಬೈಲು, ನಿತಿನ್ ಪ್ರಸಾದ ಹೆಗ್ಡೆ ಮೇನಾಲ, ರಾಮ್ಪ್ರಸಾದ್ ಆಳ್ವ ಮೇನಾಲ, ಪ್ರದೀಪ್ ರೈ ಮೇನಾಲ, ರತನ್ ನಾಕ್ ಕರ್ನೂರು, ಮಂಜುನಾಥ ರೈ ಸಾಂತ್ಯ, ಕುಂಞ ಪಾಟಾಳಿ ಪಂಚೋಡಿ, ಆನಂದ ರೈ ಸಾಂತ್ಯ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ರಮೇಶ್ ರೈ ಸಾಂತ್ಯ, ಗ್ರಾ.ಪಂ.ಸದಸ್ಯ ಶ್ರೀ ರಾಮ್ ಪಕ್ಕಳ, ಸುಭಾಶ್ಚಂದ್ರ ರೈ ಕರ್ನೂರು, ದಿವಾಕರ ರೈ ಕರ್ನೂರು, ಬಾಲಕೃಷ್ಣ ಆಳ್ವ ಅಲೆಪ್ಪಾಡಿ, ಜಯಪ್ರಕಾಶ್ ಶೆಟ್ಟಿ ನೂಜಿಬೈಲು, ಜಯಚಂದ್ರ ಸೇರಾಜೆ, ಉಮೇಶ್, ಬಾಬು ಮೊದಲಾದವರು ಉಪಸ್ಥಿತರಿದ್ದರು.