HomePage_Banner
HomePage_Banner
HomePage_Banner
HomePage_Banner

ಕೊರೋನಾ ಸಂಕಷ್ಟದಲ್ಲೂ ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ | ಪಿಎಲ್‌ಡಿ ಬ್ಯಾಂಕ್‌ಗೆ ಜಿಲ್ಲಾಮಟ್ಟದ ದ್ವಿತೀಯ ಪ್ರಶಸ್ತಿ

ಪುತ್ತೂರು: ಕೊರೋನಾ ಸಂಕಷ್ಟದಲ್ಲೂ ಜೂನ್ 2020ರ ಅಂತ್ಯಕ್ಕೆ ಸಾಧಿಸಿರುವ ಸಾಲ ವಸೂಲಾತಿ ಪ್ರಗತಿಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇವರಿಂದ ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ದ.ಕ.ಜಿಲ್ಲಾ ಮಟ್ಟದ ದ್ವಿತೀಯ ಪ್ರಶಸ್ತಿ ಲಭಿಸಿದ್ದು ಫೆ.೨೫ರಂದು ಬ್ಯಾಂಕ್‌ನ ಪುತ್ತೂರು ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇದರ ದ.ಕ.ಜಿಲ್ಲಾ ನಿರ್ದೇಶಕ ರಾಜಶೇಖರ್ ಜೈನ್ ಹಾಗೂ ಜಿಲ್ಲಾ ವ್ಯವಸ್ಥಾಪಕ ಮುತ್ತುರಾಜ್‌ರವರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿಯವರಿಗೆ ಶಾಲು, ಹಾರಾರ್ಪಣೆ ಮಾಡಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷೆ ಸುಜಾತ ರಂಜನ್ ರೈ, ಕೋಶಾಧಿಕಾರಿ ನಾರಾಯಣ ಪೂಜಾರಿ ಕೆ., ನಿರ್ದೇಶಕರುಗಳಾದ ಎ.ಬಿ.ಮನೋಹರ ರೈ, ನಾರಾಯಣ ಕೆ., ಶ್ರೀಮತಿ ಮೀನಾಕ್ಷಿ, ದೇವಯ್ಯ ಗೌಡ, ಉಮೇಶ್ ನಾಯಕ್, ಪ್ರವೀಣ್ ರೈ ಎಂ., ಧರ್ಣಪ್ಪ ಮೂಲ್ಯ, ಸೋಮಪ್ಪ ನಾಯ್ಕ್ ಎಸ್., ಶೀನ ನಾಯ್ಕ್, ವ್ಯವಸ್ಥಾಪಕ ಬಾಲಕೃಷ್ಣ ಪಿ., ಕಡಬ ಶಾಖಾ ವ್ಯವಸ್ಥಾಪಕಿ ಶ್ರೀಮತಿ ಸುಮನ ಎಂ., ಕ್ಷೇತ್ರಾಧಿಕಾರಿ ಶೇಖರ ಎಂ., ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.