HomePage_Banner
HomePage_Banner
HomePage_Banner
HomePage_Banner

ಫೆ.27, 28: ಕೆಲಂಬೀರಿ ಗರಡಿಯಲ್ಲಿ 46ನೇ ವರ್ಷದ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕಾಣಿಯೂರು: ಕುದ್ಮಾರು ಗ್ರಾಮದ ಕೆಲಂಬೀರಿ ಗರಡಿಯಲ್ಲಿ ೪೬ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಫೆ.27, 28ರಂದು ನಡೆಯಲಿದೆ. ಫೆ ೨೭ರಂದು ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ಶ್ರೀ ನಾಗಬ್ರಹ್ಮ ತಂಬಿಲ, ಅಪರಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಶ್ರೀ ಕೋಡಮಂತಾಯ ದೈವದ ಭಂಡಾ ತೆಗೆಯುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ ೨೮ರಂದು ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ, ಹರಿಕೆ ಮತ್ತು ಬಟ್ಟಲು ಕಾಣಿಕೆ, ಗಂಧ ಪ್ರಸಾದ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆಯಲಿದೆ. ಬಳಿಕ ಗಂಧಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಬ್ರಹ್ಮ ಬೈದೆರುಗಳ ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ಗರಡಿ ಇಳಿಯುವುದು, ಬೈದೆರುಗಳ ಪಾತ್ರಿಗಳ ಸೇಠ್ ನಡೆಯಲಿದೆ. ಮಾ೧ರಂದು ಬೆಳಿಗ್ಗೆ ಬೈದೆರುಗಳ ಸೇಠ್, ಹರಿಕೆ ಮತ್ತು ಗಂಧ ಪ್ರಸಾದ ನಡೆಯಲಿದೆ ಎಂದು ಕೆಲಂಬೀರಿ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್.ಕಾರ್ಲಾಡಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.