HomePage_Banner
HomePage_Banner
HomePage_Banner
HomePage_Banner

ಮಾ.1ರಂದು ಉಪ್ಪಿನಂಗಡಿ ಶ್ರೀ ರಾಮ ಶಾಲೆಯಲ್ಲಿ ನವೀಕೃತ ವಿಜ್ಞಾನ ಪ್ರಯೋಗಾಲಯ ಲೋಕಾರ್ಪಣೆ

ಉಪ್ಪಿನಂಗಡಿ: ದಶಮಾನೋತ್ಸವದ ಹೊಸ್ತಿಲಿನಲ್ಲಿರುವ ಉಪ್ಪಿನಂಗಡಿ ನಟ್ಟಿಬೈಲ್‌ನಲ್ಲಿರುವ ಶ್ರೀ ರಾಮ ಶಾಲೆಯಲ್ಲಿ ಮಾರ್ಚ್ ಒಂದಕ್ಕೆ ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂದು ನವೀಕೃತ ವಿಜ್ಞಾನ ಪ್ರಯೋಗಾಲಯ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಸಂಚಾಲಕ ಯು.ಜಿ. ರಾಧಾ ತಿಳಿಸಿದರು.

ಅವರು ಫೆ. ೨೫ರಂದು ವಿದ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಕನ್ನಡ ಮಾತೃ ಭಾಷೆಯಲ್ಲಿ ಸಂಸ್ಕಾರಭರಿತ ಶಿಕ್ಷಣ ನೀಡುವ ಸಂಸ್ಥೆಯಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ವಿದ್ಯಾ ಸಂಸ್ಥೆಯಲ್ಲಿ ಕಲಿಯುವ ಮಕ್ಕಳನ್ನು ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಸುವಂತಾಗಲು ಡಾ| ಎಪಿಜೆ ಅಬ್ದುಲ್ ಕಲಾಂ ಸಂಯೋಜಿತ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀಕರಿಸಲಾಗಿದೆ. ಸಿಸ್ಕೋ ಸಂಭ್ರಮ ಎಂಬ ತಂಡದ ಸಹಯೋಗದೊಂದಿಗೆ ಉನ್ನತೀಕರಿಸಲದ ಈ ಪ್ರಯೋಗಾಲಯದಲ್ಲಿ ವಾರದಲ್ಲಿ ಪ್ರತಿ ತರಗತಿಗೆ ಒಂದು ಅವಧಿಯನ್ನು ಈ ಪ್ರಯೋಗಾಲಯದಲ್ಲೇ ಅಧ್ಯಯನ ನಡೆಸುವಂತೆ ವೇಳಾಪಟ್ಟಿ ಸಿದ್ದಗೊಳಿಸಲಾಗಿದೆ.

ಪ್ರಯೋಗಾಲಯದಲ್ಲಿ ವಿಜ್ಞಾನದ ಅನ್ವೇಷಣೆಗಳ ಕುರಿತು ತಿಳಿಯಲು ಮತ್ತು ಕಿರುಚಿತ್ರವನ್ನು ವೀಕ್ಷಿಸಲು ಸ್ಮಾರ್ಟ್ ಟಿವಿ, ಪ್ರೋಜೆಕ್ಟರ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮಾತೃ ಭಾಷಾ ಶಿಕ್ಷಣದತ್ತ ಹೆಚ್ಚುತ್ತಿದೆ ಒಲವು:
ಕೊರೊನಾ ಸೂಕ್ಷ್ಮತೆಯ ಈ ಕಾಲ ಘಟ್ಟದಲ್ಲಿಯೂ ಮಾತೃ ಭಾಷಾ ಶಿಕ್ಷಣದತ್ತ ಹೆತ್ತವರ ಒಲವು ಹೆಚ್ಚುತ್ತಿರುವ ದ್ಯೋತಕವಾಗಿ ಈ ಬಾರಿ ಒಂದನೇ ತರಗತಿಗೆ ೮೦ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಪ್ರಸಕ್ತ ಶಾಲೆಯಲ್ಲಿ ೬೨೦ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಪ್ರತಿ ೨೫ ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರನ್ನು ಹೊಂದಲಾಗಿದೆ. ಪ್ರತಿ ವಿದ್ಯಾರ್ಥಿಗೂ ಉಚಿತ ಸಂಗೀತ ಶಿಕ್ಷಣ, ಉಚಿತ ಕಂಪ್ಯೂಟರ್ ಶಿಕ್ಷಣ, ಉಚಿತ ಭಜನಾ ತರಗತಿ, ಉಚಿತ ಯೋಗ ತರಗತಿ, ಉಚಿತ ಬಿಸಿಯೂಟ, ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ, ಆಸಕ್ತರಿಗೆ ಭರತನಾಟ್ಯ, ಚೆಸ್, ಕ್ರಾಪ್ಟ್, ಕರಾಟೆ ತರಗತಿಗಳು, ಲಭಿಸುತ್ತಿದೆ. ಮಾತ್ರವಲ್ಲದೆ ಒಂದನೇ ತರಗತಿಯಿಂದಲೇ ಆಂಗ್ಲ ಭಾಷಾ ಭೋಧನೆ, ಕ್ರೀಡಾ ತರಬೇತಿ, ವಿಜ್ಞಾನ ಪ್ರಯೋಗಾಲಯ, ಗ್ರ್ರಂಥಾಲಯಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದ ಅವರು, ಗ್ರಾಮ ವಿಕಾಸ ಯೋಜನೆಯ ಮೂಲಕ ಕೃಷಿ ಚಟುವಟಿಕೆಗೆ ಒತ್ತು ನೀಡುವುದು, ಕೆರೆ ಪುನಶ್ಚೇತನದಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಮಾಜಿಕ ಸ್ಪಂದನೆಗೂ ಗಮನ ಹರಿಸಿದೆ ಎಂದು ಅವರು ತಿಳಿಸಿದರು.

ಮಾರ್ಚ್ ಒಂದರಂದು ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ಮೋಹನ್ ಚೌಧರಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಯುವ ವಿಜ್ಞಾನಿ ಸ್ವಸ್ತಿಕ್ ಪದ್ಮ, ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಲಾ ಅಧ್ಯಕ್ಷ ಕರುಣಾಕರ ಸುವರ್ಣ, ಆಡಳಿತ ಮಂಡಳಿ ಸದಸ್ಯ ಅನಿಲ್ ಕುಮಾರ್ ದಡ್ಡು, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಉಷಾ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕ ರಘುರಾಮ್ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.