HomePage_Banner
HomePage_Banner
HomePage_Banner
HomePage_Banner

ಕೊಂಬಾರು ಗ್ರಾ.ಪಂ. ಅಧ್ಯಕ್ಷೆಯಾಗಿ ಸುಶೀಲಾ, ಉಪಾಧ್ಯಕ್ಷೆಯಾಗಿ ಸರಿತಾ ಆಯ್ಕೆ

ಕಡಬ: ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸುಶೀಲಾ, ಉಪಾಧ್ಯಕ್ಷೆಯಾಗಿ ಸರಿತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಅವರು ಚುನಾವಣಾಧಿಕಾರಿಯಾಗಿದ್ದರು. ಗ್ರಾ.ಪಂ. ೯ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮೀಸಲಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಜಯಶ್ರೀ ರಾಮಚಂದ್ರ ಗೌಡ, ಸುಜಾತ ಜಯರಾಮ, ಚೆನ್ನಕೇಶವ ಕೈಂತಿಲ, ಮಧುಸೂಧನ್ ಒಡೋಳಿ, ಸದಾನಂದ ಪೂಜಾರಿ, ವೀಣಾಜಗದೀಶ್, ಗಣೇಶ್ ಪಿಲಿಕಜೆ, ಪಿಡಿಒ ರಾಘವೇಂದ್ರ ಗೌಡ ಉಪಸ್ಥಿತರಿದ್ದರು.

೧೫ ತಿಂಗಳ ಅಧಿಕಾರ ಹಂಚಿಕೆ-ಒಪ್ಪಂದ
ಕೊಂಬಾರು ಗ್ರಾ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಈ ಅಧ್ಯಕ್ಷ ಸ್ಥಾನಕ್ಕೆ ಸುಶೀಲಾ ಹಾಗೂ ಜಯಶ್ರೀ ರಾಮಚಂದ್ರ ಆಕಾಂಕ್ಷಿಯಾಗಿದ್ದರು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ. ಸ್ಥಾನಕ್ಕೆ ಮೀಸಲಾಗಿದ್ದು ಇಲ್ಲಿಯೂ ಸರಿತಾ ಗುಂಡ್ಯ ಹಾಗೂ ಸದಾನಂದ ಪೂಜಾರಿ ಆಕಾಂಕ್ಷಿಗಳಾಗಿದ್ದು ಈ ಹಿನ್ನಲೆಯಲ್ಲಿ ಒಟ್ಟು ೩೦ ತಿಂಗಳ ಆಡಳಿತ ಅವಧಿಯಲ್ಲಿ ಪ್ರಸ್ತುತ ೧೫ ತಿಂಗಳು ಅಧ್ಯಕ್ಷರಾಗಿ ಸುಶೀಲ, ಉಪಾಧ್ಯಕ್ಷರಾಗಿ ಸರಿತಾ ಮತ್ತು ಮುಂದಿನ ೧೫ ತಿಂಗಳು ಅಧ್ಯಕ್ಷೆಯಾಗಿ ಜಯಶ್ರೀ ರಾಮಚಂದ್ರ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಆಯ್ಕೆಯಾಗುವ ಬಗ್ಗೆ ಪಕ್ಷ ಸಭೆಯಲ್ಲಿ ನಿರ್ಣಯಿಸಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.