HomePage_Banner
HomePage_Banner
HomePage_Banner
HomePage_Banner

34 ನೆಕ್ಕಿಲಾಡಿ: ಜಸ್ಟ್‌ಬೇಕ್‌ನ ನೂತನ ಮಳಿಗೆ ಶುಭಾರಂಭ

ಉಪ್ಪಿನಂಗಡಿ: ರಾಜ್ಯ ಹೊರರಾಜ್ಯಗಳಲ್ಲಿ ತನ್ನ ಉತ್ಪನ್ನಗಳ ಸವಿಯನ್ನು ಉಣಬಡಿಸಿ ಮನೆಮಾತಾಗಿರುವ `ಜಸ್ಟ್‌ಬೇಕ್’ನ ನೂತನ ಮಳಿಗೆಯು ೩೪ನೆಕ್ಕಿಲಾಡಿಯ ಮೇದರಬೆಟ್ಟು ಕಾಂಪ್ಲೆಕ್ಸ್ ಶುಕ್ರವಾರ ಶುಭಾರಂಭಗೊಂಡಿತು.

ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿದ ೩೪ನೆಕ್ಕಿಲಾಡಿಯ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ಅಭಿವೃದ್ಧಿ ಹೊಂದಿದ ಪಟ್ಟಣಗಳಿಗಷ್ಟೇ ಸೀಮಿತವಾಗಿದ ಜಸ್ಟ್‌ಬೇಕ್ ಸಂಸ್ಥೆಯು ಇಂದು ನಮ್ಮೂರಿಗೂ ಕಾಲಿಟ್ಟಿದೆ ಎಂಬುದು ನಮಗೆಲ್ಲಾ ಹೆಮ್ಮೆಯಾಗಿದೆ. ಇಲ್ಲಿಯ ಉತ್ಪನ್ನಗಳ ಸವಿಯು ನಮ್ಮೂರಿನ ಗ್ರಾಹಕರನ್ನೂ ತಲುಪುವಂತಾಗಿದ್ದು ಸಂತೋಷವಾಗಿದೆ. ಈ ಸಂಸ್ಥೆಯು ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಕೇಕ್ ತಯಾರಿಕೆಗೆ ಹೆಸರುವಾಸಿಯಾದ ಈ ಸಂಸ್ಥೆಯು ಈಗಾಗಲೇ ಪುತ್ತೂರಿನಲ್ಲಿದ್ದು, ನಾನು ಅಲ್ಲಿಯ ಗ್ರಾಹಕ. ಈಗ ನಮ್ಮ ಪಕ್ಕದಲ್ಲೇ ಆ ಸಂಸ್ಥೆ ಬಂದಿರುವುದು ಇನ್ನಷ್ಟು ಖುಷಿಕೊಟ್ಟಿದೆ. ಪ್ರತಿಯೊಂದು ಪಟ್ಟಣಗಳಲ್ಲಿಯೂ ಇದರ ಶಾಖೆಗಳು ಆರಂಭವಾಗಬೇಕು ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಡಾ. ಶೈನಿ ಪಾಸ್ ಮಾತನಾಡಿ, ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಜಸ್ಟ್‌ಬೇಕ್ ಹೆಸರುವಾಸಿ. ಪುತ್ತೂರಿನಲ್ಲಿ ಇವರ ಸಂಸ್ಥೆಯು ಗ್ರಾಹಕರಿಗೆ ನೀಡುವ ಸೇವೆಯು ಖುಷಿಕೊಟ್ಟಿದೆ. ಅದೇ ಸಂಸ್ಥೆಯ ನೂತನ ಮಳಿಗೆ ಈಗ ಗ್ರಾಮೀಣ ಪ್ರದೇಶದಲ್ಲೂ ಆರಂಭವಾಗಿದ್ದು, ಇಲ್ಲಿನವರಿಗೂ ಉತ್ತಮ ಸೇವೆ ಲಭಿಸುವಂತಾಗಲಿ ಎಂದರು.

ಉಮರುಲ್ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಹಾಜಿ ಅವರು ಮಾತನಾಡಿ, ಹೆಚ್ಚಿನ ಸಮಾರಂಭಗಳಲ್ಲಿ ಇಂದು ಕೇಕ್, ಚಾಕಲೇಟ್‌ಗಳ ಅಗತ್ಯವಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳಿಂದಾಗಿ ಜಸ್ಟ್‌ಬೇಕ್ ಅನ್ನು ಗ್ರಾಹಕರೇ ಹುಡುಕಿಕೊಂಡು ಅದರ ಬಳಿ ಹೋಗುತ್ತಾರೆ. ಅದಕ್ಕಾಗಿ ಮೊದಲು ಪುತ್ತೂರಿಗೆ ಹೋಗಬೇಕಿತ್ತು. ಆದರೆ ಈಗ ಅದರ ಮಳಿಗೆಯು ನೆಕ್ಕಿಲಾಡಿಗೂ ಬಂದಿದೆ. ಪ್ರತಿ ಮನೆಬಾಗಿಲಿಗೂ ಇದರ ಸೇವೆ ತಲುಪಲಿ ಎಂದು ಶುಭಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಮಾಲಕ ದೀಪಕ್ ಶೆಟ್ಟಿ, ನಮ್ಮ ದೇಶದ ಐದು ರಾಜ್ಯಗಳಲ್ಲಿ ಜಸ್ಟ್‌ಬೇಕ್‌ನ ೨೫೦ ಮಳಿಗೆಗಳಿವೆ. ದ.ಕ. ಜಿಲ್ಲೆಯಲ್ಲಿಯೇ ೩೦ ಮಳಿಗೆಗಳಿವೆ. ಇಲ್ಲಿ ಕೇಕ್, ಬರ್ಗರ್, ಸ್ಯಾಂಡ್‌ವಿಚ್, ಚಾಕ್ಲೇಟ್ ಸೇರಿದಂತೆ ೭೫ ಬಗೆಯ ಉತ್ಪನ್ನಗಳಿವೆ. ಮುಂಚಿತವಾಗಿ ತಿಳಿಸಿದ್ದಲ್ಲಿ ಗ್ರಾಹಕರು ಬಯಸುವ ನಮೂನೆಯಲ್ಲಿ, ರುಚಿಯಲ್ಲಿ ಕೇಕ್‌ಗಳನ್ನು ಇಲ್ಲಿ ಮಾಡಿಕೊಡಲಾಗುವುದು. ಪಟ್ಟಣವಲ್ಲದೆ ಗ್ರಾಮೀಣ ಭಾಗದ ಜನತೆಗೂ ಇದರ ಸೇವೆ ಸಿಗಬೇಕೆಂದುಕೊಂಡು ನೆಕ್ಕಿಲಾಡಿಯಲ್ಲಿ ಮಳಿಗೆಯನ್ನು ತೆರೆಯಲಾಗಿದ್ದು, ಇನ್ನಷ್ಟು ಗ್ರಾಮೀಣ ಭಾಗಕ್ಕೂ ಇದನ್ನು ವಿಸ್ತರಿಸುವ ಕನಸು ಇದೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಯು.ರಾಮ, ಕಟ್ಟಡದ ಮಾಲಕ ಸಿದ್ದೀಕ್ ಮೇದರಬೆಟ್ಟು ಉಪಸ್ಥಿತರಿದ್ದರು. ಶ್ರೀಮತಿ ಅಮಿತಾ ಶೆಟ್ಟಿ, ಮಂಜುನಾಥ್ ಶೆಟ್ಟಿ, ಸತೀಶ್ ಪೆರ್ಗಡೆ, ಸಂಪತ್ ಶೆಟ್ಟಿ, ಪ್ರಜ್ವಲ್ ಪ್ರವೀಣ್ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಪ್ರವೀಣ್ ಶೆಟ್ಟಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.