HomePage_Banner
HomePage_Banner
HomePage_Banner
HomePage_Banner

ಫಿಲೋಮಿನಾದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ | ಭವಿಷ್ಯದ ಬಗೆಗಿನ ಆಯ್ಕೆ ಧನಾತ್ಮಕವಾಗಿರಲಿ-ಕುಶಲತಾ

ಪುತ್ತೂರು: ಪ್ರತೀ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಬುದ್ಧಿವಂತಿಕೆ ಇದೆ. ಆದರೆ ಅವುಗಳನ್ನು ಬಳಸುವಲ್ಲಿ ಕೆಲವರು ಎಡವುತ್ತಾರೆ. ಸಮಾಜದಲ್ಲಿ ಉತ್ತಮ ಬಾಳ್ವೆ, ಭವಿಷ್ಯ ಕಂಡುಕೊಳ್ಳಬೇಕಾದರೆ ನಾವು ತೆಗೆದುಕೊಳ್ಳುವ ಆಯ್ಕೆಯು ಧನಾತ್ಮಕವಾಗಿದ್ದಲ್ಲಿ ಮಾತ್ರ ಯಶಸ್ಸು ನಮ್ಮದಾಗುತ್ತದೆ ನಿಟ್ಟೆ ವಿಶ್ವವಿದ್ಯಾನಿಲಯದ ಕೌನ್ಸಿಲರ್ ಕುಶಲತಾರವರು ಹೇಳಿದರು. ಅವರು ಮಾ.೨೬ ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವ್ಯಕ್ತಿತ್ವ ವಿಕಸನ ಸಂಘದ ವತಿಯಿಂದ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’ದಲ್ಲಿ ಮಾತನಾಡಿದರು. ದ್ವಿತೀಯ ಪಿಯುಸಿ ಹಂತ ಎಂಬುದು ವಿದ್ಯಾರ್ಥಿಗಳ ಜೀವನದ ನಿರ್ಣಾಯಕ ಘಟ್ಟವಾಗಿದೆ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಅದು ಒಮ್ಮಿಂದೊಮ್ಮೆಲೇ ಸಾಧ್ಯವಿಲ್ಲ. ಕಠಿಣ ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದಾಗ ನಮ್ಮಲ್ಲಿನ ಗುರಿ ಸಾಧನೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು `ಪುಸ್ತಕದ ಬದನೆಕಾಯಿ’ ಎಂಬಂತಾಗದೆ ನಮ್ಮಲ್ಲಿರುವ ಕೌಶಲ್ಯಯುಕ್ತ ಶಕ್ತಿಯನ್ನು ಉಪಯೋಗಿಸಿ ಉತ್ತಮ ಭವಿಷ್ಯವನ್ನು ಹೊಂದುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳನ್ನು ಎದುರಿಸಬೇಕಾದರೂ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಅನೇಕ ಆಯ್ಕೆಗಳಿವೆ. ಪಿಯುಸಿ ನಂತರ ಮತ್ತೇನು ಎಂಬುದನ್ನು ವಿದ್ಯಾರ್ಥಿಗಳು ಸರಿಯಾಗಿ ನಿರ್ಧರಿಸದೆ ಒತ್ತಡಗೊಳಗಾಗುವುದು ಸಹಜವಾಗಿದೆ. ಕಠಿಣ ಪರಿಶ್ರಮ, ಬದ್ಧತೆ, ನಿರ್ಣಯ ಇವುಗಳು ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವ ಸಂದರ್ಭದಲ್ಲಿ ಸರಿಯಾದ ಹೆಜ್ಜೆಗಳನ್ನಿಟ್ಟಾಗ ಜೀವನ ಸುಗಮತೆಯತ್ತ ಸಾಗಬಲ್ಲುದಾಗಿದೆ ಎಂದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವ್ಯಕ್ತಿತ್ವ ವಿಕಸನ ಸಂಘದ ನಿರ್ದೇಶಕ ಗೋವಿಂದ ಪ್ರಕಾಶ್ ಸ್ವಾಗತಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಾಶಿ ರೈ ಕಾರ್ಯಕ್ರಮ ನಿರೂಪಿಸಿದರು.

ಮಹಾನ್ ಸಾಧಕರು ಪದವಿ ಪಡೆದವರಲ್ಲ..
ಹಿಂದಿನ ಮಹಾನ್ ಸಾಧಕರಾದ ಅಬ್ರಹಾಂ ಲಿಂಕನ್, ಥಾಮಸ್ ಎಡಿಸನ್, ಆಲ್ಬರ್ಟ್ ಐನ್‌ಸ್ಟೈನ್, ಇಂದಿನ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ನಟ ಅಕ್ಷಯ್ ಕುಮಾರ್‌ರಂತಹ ಅನೇಕ ಸಾಧಕರು ಯಾವುದೇ ಪದವಿ, ಡಾಕ್ಟರೇಟ್‌ನ್ನು ಪಡೆದವರಲ್ಲ. ಕಲಿತದ್ದು ಕಡಿಮೆಯಾದರೂ ತಮ್ಮ ಕ್ಷೇತ್ರದಲ್ಲಿ ಅವಿರತ ಶ್ರಮದಿಂದ ಸಮಾಜದಲ್ಲಿ ಗುರುತಿಸಿಕೊಂಡಿರುತ್ತಾರೆ. ಸಾಧಕರು ತಮ್ಮ ಸಾಧನೆಯನ್ನು ಒಮ್ಮೆಗೇ ಮಾಡಿರದೆ ತನ್ನ ಸಾಧನೆಯ ಹಿಂದೆ ನೂರಾರು ಬಾರಿ ಸೋತು ಸಾಧನೆಗೈದು ಸೋಲೇ ಗೆಲುವಿನ ಸೋಪಾನವಾಗಿಸಿದವರಾಗಿದ್ದಾರೆ. ಸಾಧನೆಗೆ ಪದವಿ ಮುಖ್ಯವಲ್ಲ, ಬದಲಾಗಿ ನಮ್ಮ ನಿರ್ಧಾರಗಳು ಮತ್ತು ಪರಿಶ್ರಮ ಮುಖ್ಯವೆನಿಸುತ್ತದೆ.
-ಕುಶಲತಾ, ಕೌನ್ಸಿಲರ್, ನಿಟ್ಟೆ ವಿಶ್ವವಿದ್ಯಾನಿಲಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.