HomePage_Banner
HomePage_Banner
HomePage_Banner
HomePage_Banner

ದಿನ ಬಳಕೆ ವಸ್ತುಗಳಿಗೆ ಬೆಲೆ ಏರಿಕೆ – ಸರಕಾರದ ವಿರುದ್ಧ ಮಾ.1ಕ್ಕೆ ಯುವ ಕಾಂಗ್ರೆಸ್‌ನಿಂದ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು: ಕೊರೋನಾದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ದಿನ ನಿತ್ಯ ಬಳಕೆಯ ವಸ್ತುಗಳಿಗೆ ಬೆಲೆ ಏರಿಕೆ ಮಾಡುವ ಮೂಲಕ ಸರಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಈ ನಿಟ್ಟಿನಲ್ಲಿ ಬಡವರ ಧ್ವನಿಯಾಗಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಾ.೧ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸರಕಾರದ ವಿರುದ್ಧ ಪ್ರತಿಭಟಿಸಲಿದ್ದೇವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಎನ್ ಪಾಣಾಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಮಾಜದಲ್ಲಿ ಕೆಲವು ತಿಂಗಳ ಹಿಂದೆ ಕೊರೋನಾ ಎಂಬ ಮಹಾಮಾರಿಗೆ ಅನೇಕರು ಸಂಕಷ್ಟಕ್ಕೆ ಎದುರಾಗಿದ್ದರು. ಇಂತಹ ಸಂದರ್ಭದಲ್ಲಿ ಸರಕಾರ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಜನರ ಒಂದು ಕಷ್ಟಗಳಿಗೆ ಸ್ಪಂಧಿಸುವ ಕೆಲಸ ಮಾಡದೇ ದಿನ ನಿತ್ಯ ಬಳಕೆಯ ವಸ್ತುಗಳಿಗೆ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ ಇದನ್ನು ಪುತ್ತೂರು ಯುವ ಕಾಂಗ್ರೆಸ್ ಖಂಡಿಸುತ್ತೇವೆ ಎಂದ ಅವರು ಬಡವರ ಧ್ವನಿಯಾಗಿ ನಾವು ಪ್ರತಿಭಟನೆ ಮಾಡಲಿದ್ದೇವೆ. ಬೆಲೆ ಏರಿಕೆ ಸಮಸ್ಯೆ ಕೇವಲ ಕಾಂಗ್ರೆಸ್ ಅನುಭವಿಸುತ್ತಿಲ್ಲ. ಎಲ್ಲರಿಗೂ ಬೆಲೆ ಏರಿಕೆ ಕಷ್ಟ ತಟ್ಟಿದೆ. ಹಾಗಾಗಿ ಬೆಲೆ ಏರಿಕೆಯಿಂದ ತೊಂದರೆಗೊಳದಾವರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ವಿನಂತಿಸಿದ ಅವರು ಪ್ರತಿಭಟನೆಯಲ್ಲಿ ಜಿಲ್ಲೆಯ ಅನೇಕ ನಾಯಕರು ಭಾಗವಹಿಸಲಿದ್ದು, ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್, ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಮಿಥುನ್ ರೈ, ರುಕ್ಮನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಹಿಳಾ ಕಾಂಗ್ರೆಸ್, ಸೇವಾದಳ, ಎನ್‌ಎಸ್‌ಯುಐ, ಅಲ್ಪಸಂಖ್ಯಾತ ಘಟಕ, ಹಿಂದುಳಿದ ವರ್ಗ ಘಟಕ ಸೇರಿದಂತೆ ವಲಯ ಅಧ್ಯಕ್ಷರುಗಳು, ಕಾಂಗ್ರೆಸ್‌ಗೆ ಶಕ್ತಿಯಾಗಿ ನಿಂತಹ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಹಸಿವು ಮುಕ್ತ ಭಾರತದ ಗುರಿ:
ಬಿಜೆಪಿಗೆ ಕಾಂಗ್ರೆಸ್ ಮುಕ್ತ ಗುರಿಯಾದರೆ ಕಾಂಗ್ರೆಸ್ ಹಸಿವು ಮುಕ್ತ ಭಾರತದ ಗುರಿ ಇಟ್ಟು ಕೊಂಡು ಬಿಜೆಪಿಯಿಂದ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡು ಇಂದಿರಾ ಕ್ಯಾಂಟೀನ್ ಆರಂಭ ಮಾಡಿದರು. ಆದರೆ ಇಂದು ಬಿಜೆಪಿ ಸರಕಾರ ಅದನ್ನು ಮುಚ್ಚಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಎನ್ ಪಾಣಾಜೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಪುತ್ತೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಸನತ್ ಯೂಸೂಪ್,
ಸಾಮಾಜಿಕ ಜಾಲತಾಣದ ಇನ್‌ಚಾರ್ಜ್ ಜಗದೀಶ್ ಕಜೆ ಉಪಸ್ಥಿತರಿದ್ದರು.

ಪ್ರತಿಭಟನೆಗೆ ನಗರಸಭೆ ಅಡ್ಡಿ
ಪ್ರತಿಭಟನೆಯನ್ನು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಮಾಡುವ ಕುರಿತು ಯುವ ಕಾಂಗ್ರೆಸ್ ಆಯೋಜಿಸಿದ ವೇಳೆ ಆರಂಭದಲ್ಲಿ ಅಲ್ಲಿ ಪ್ರತಿಭಟನೆ ಮಾಡದಂತೆ ನಗರಸಭೆ ಸೂಚಿಸಿತ್ತು. ಹಾಗಾಗಿ ನಾವು ಗಾಂಧಿಕಟ್ಟೆಯಲ್ಲಿ ಪ್ರತಿಭಟನೆ ಮಾಡಲು ಮುಂದಾದಾಗ ಸೋಮವಾರದ ದಿನ ಸಂಚಾರಕ್ಕೆ ಅಡಚಣೆ ಅಗುವ ಸಾಧ್ಯತೆ ಇದೆ ಎಂದು ಪೊಲೀಸರು ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲೇ ಮಾಡುವಂತೆ ತಿಳಿಸಿದರು. ಈ ನಡುವೆ ಆರಂಭದಲ್ಲಿ ಪ್ರತಿಭಟನೆಗೆ ಅಡ್ಡಿಪಡಿಸಿದ ನಗರಸಭೆ ಮತ್ತೆ ಅನುಮತಿ ನೀಡಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.