HomePage_Banner
HomePage_Banner
HomePage_Banner
HomePage_Banner

ರೆಡ್‌ಬ್ಯಾಕ್ ಗಾಳಿಮುಖ ವತಿಯಿಂದ ರಕ್ತದಾನ ಶಿಬಿರ

ಪುತ್ತೂರು: ರೆಡ್‌ಬ್ಯಾಕ್ ಗಾಳಿಮುಖ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ೪೦ ಮಂದಿ ರಕ್ತದಾನ ಮಾಡಿದರು. ಈಶ್ವರಮಂಗಳ ಹೊರಠಾಣಾ ಎಎಸ್ಸೈ ತಿಮ್ಮಯ್ಯ ಗೌಡರವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಕೀಯ ತಂಡದ ಮುಖ್ಯಸ್ಥ ರಾಮಚಂದ್ರ ಭಟ್‌ರವರು ರಕ್ತದಾನದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಮಾಜಿ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್, ಶಾಫಿ ಜಿ.ಕೆ, ಐಡಿಯಲ್ ಖಾದರ್, ಜಿ.ಎಸ್ ಖಾದರ್, ಶಾಬಿರ್, ಎ.ಬಿ ಅಶ್ರಫ್, ಸಾಬಿತ್, ಮುನೀರ್ ಜನತಾ, ಬಾತಿಷ ಕೆ.ವೈ, ಶಮೀಮ್, ಶಂಸು ಕಂಡತ್ತಿಲ್ ಉಪಸ್ಥಿತರಿದ್ದರು. ರಕ್ತದಾನ ಮಾಡಿದವರಿಗೆ ರೆಡ್‌ಬ್ಯಾಕ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ಸುಹೈಬ್, ಮಶೂದ್, ಬಾಸಿತ್, ಸಫ್ವಾನ್, ಸವಾದ್ , ಸುಫೈಲ್, ಶಾಫಿ ಸಹಕರಿಸಿದರು. ಅಶ್ರಫ್ ಕೊಟ್ಯಾಡಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.