HomePage_Banner
HomePage_Banner
HomePage_Banner
HomePage_Banner

ಕಡಬ ತಾಲೂಕು ಪಂಚಾಯತ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ | ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸದಂತೆ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹ

ಕಡಬ: ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸಬಾರದು, ಪಂಚಾಯತ್‌ರಾಜ್ ವ್ಯವಸ್ಥೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿ ಯೂ ಸವಲತ್ತು ಪಡೆಯುವಂತಾಗಿದೆ ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಫೆ.೨೬ರಂದು ದ.ಕ ಜಿಲ್ಲಾ ಪಂ. ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಅನುದಾನದಡಿ, ಮತ್ತು ಇತರ ಅನುದಾನದಿಂದ ಸುಮಾರು ೪.೫ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಡಬ ತಾ.ಪಂ ನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾಮಫಲಕ ಅನಾವರಣ ಮಾಡಿ ಮಾತನಾಡಿದರು. ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸಬಾರದೆಂದು, ಕೆಲವರು ರದ್ದುಪಡಿಸಬೇಕೆಂದು ನನ್ನ ಅಭಿಪ್ರಾಯ ಪ್ರಕಾರ ತಾಲೂಕು ಪಂ. ವ್ಯವಸ್ಥೆ ಉಳಿಯಬೇಕು, ತಾಲೂಕು ಲೂಕು ಪಂಚಾಯತ್ ವ್ಯವಸ್ಥೆ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದರೊಂದಿಗೆ ಎರಡನೆ ಸ್ತರದ ನಾಯಕತ್ವವನ್ನು ಬೆಳೆಸಲು ಪೂರಕವಾಗಿದೆ. ತಾ.ಪಂ ನ್ನು ಉಳಿಸಕೊಂಡು ಅದಕ್ಕೆ ಹೆಚ್ಚುವರಿ ಅನುದಾನಗಳನ್ನು ನೀಡುವುದರೊಂದಿಗೆ ಅದರ ಸಬಳಿಕರಣ ಮಾಡಬೇಕು, ತಾಲೂಕಿನ ಅಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ತಾ.ಪಂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳನ್ನು ನೀಡುತ್ತದೆ ಈ ಹಿನ್ನೆಲೆಯಲ್ಲಿ ತಾ.ಪಂ.ನ್ನು ರದ್ದುಪಡಿಸದಂತೆ ಸರಕಾರದಲ್ಲಿ ಸಂಬಂಧಪಟ್ಟ ಸಚಿವರನ್ನು ಅಗ್ರಹಿಸಲಾಗುವುದು ಎಂದು ಹೇಳಿದ ಕೋಟಾ ತಾ.ಪಂ ವ್ಯವಸ್ಥೆಯಲ್ಲಿ ಅಧಿಕಾರಿಗಳ ಕಾರ್ಯದಕ್ಷತೆ, ಜನಪ್ರತಿನಿಧಿಗಳ ದೂರಗಾಮಿ ಚಿಂತನೆ ಸದೃಢ ಪಂಚಯತ್ ವ್ಯವಸ್ಥೆಯನ್ನು ಉಳಿಕೊಳ್ಳಲು ಪೂರಕವಾಗುತ್ತದೆ, ತಾ.ಪಂ ನಲ್ಲಿ ಅಧಿಕಾರ ನಡೆಸುವವರು ದಡ್ಡರಾದರೆ ಕೆಲವರು ತಲೆ ಮೇಲೆ ಕೂರುತ್ತಾರೆ, ಅದಕ್ಕಾಗಿ ನಾವು ಬಿದ್ದಿವಂತರಾಗಬೇಕು, ಸಬೆಗಳು ರಾಜಕೀಯ ಕೆಸರೆಚಾಟಕ್ಕೆ ಸಿಮಿತವಾದೆ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಹೇಳಿದರು.

ಶಿಲಾನ್ಯಾಸ ನೆರವೇರಿಸಿದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕಡಬ ತಾಲೂಕು ಅಭಿವೃದ್ಧಿಯಾಗಬೇಕಾದರೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು, ಈಗಾಗಲೇ ಮಿನಿವಿಧಾನ ಸೌಧ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾಲೂಕು ಪಂ ಕಟ್ಟಡ ಕೂಡಾ ಶೀಘ್ರದಲ್ಲಿ ನಿರ್ಮಾಣವಾಗಲಿದೆ, ಲೋಕೋಪಯೋಗಿ ಇಲಾಖಾ ಉಪವಿಭಾಗದ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಹಂತಹಂತವಾಗಿ ತಾಲೂಕು ಅನುಷ್ಠಾನಕ್ಕೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ತಾಲೂಕು ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಪಿ.ವರ್ಗೀಸ್, ಆಶಾ ತಿಮ್ಮಪ್ಪ ಗೌಡ, ಪ್ರಮೀಳಾ ಜನಾರ್ಧನ, ಸರ್ವೋತ್ತಮ ಗೌಡ, ಹರೀಶ್ ಕಂಜಿಪಿಲಿ, ಕಡಬ ತಾಲೂಕು ಪಂ ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ.ಕುಸುಮಾ, ಪುತ್ತೂರು ಎ.ಪಿ.ಎಂಸಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಹಶಿಲ್ದಾರ್ ಅನಂತ ಶಂಕರ, ಪಂ.ರಾಜ್ ಇಂಜಿನಿಯರಿಂಗ್ ಪುತ್ತೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಭರತ್ ಬಿ.ಎಂ, ಮತ್ತಿತರರು ಉಪಸ್ಥಿತರಿದ್ದರು.

ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಪ್ರಸ್ತಾವನೆಗೈದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ವಂದಿಸಿದರು. ಇದಕ್ಕೂ ಮುನ್ನ ಭೂಮಿ ಪೂಜಾ ಕಾರ್ಯಕ್ರಮವನ್ನು ಅರ್ಚಕ ಕೇಶವ ಬೈಪಡಿತ್ತಾಯ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.