HomePage_Banner
HomePage_Banner
HomePage_Banner
HomePage_Banner

ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಪ್ರಕರಣ | ಸೈಬರ್ ಕ್ರೈಂ ಪೊಲೀಸರಿಂದ ಬಡಗನ್ನೂರು ಕೊಯಿಲದ ಯುವಕನ ಬಂಧನ

ಪುತ್ತೂರು: ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿದ ಆರೋಪದ ಮೇಲೆ ಬಡಗನ್ನೂರು ಕೊಯಿಲದ ಯುವಕನೋರ್ವನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

ಮೊಬೈಲ್ ನಂಬರ್‌ವೊಂದರಿಂದ ವಾಟ್ಸಾಪ್ ವಾಯ್ಸ್ ಸಂದೇಶದಲ್ಲಿ ಅಲ್ಲಾಹು, ಪೈಗಂಬರ್, ಟಿಪ್ಪು ಹಾಗೂ ಮುಸ್ಲಿಂ ಹೆಣ್ಮಕ್ಕಳನ್ನು ನಿಂದಿಸಿ ಧರ್ಮ ನಿಂದನೆ, ಜಾತಿ ನಿಂದನೆ ಮಾಡಲಾಗಿದೆ, ಇದರಿಂದಾಗಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು ಸಂದೇಶ ರವಾನಿಸಿದ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಬ್ದುಲ್ ಹಮೀದ್ ಕೂರ್ನಡ್ಕರವರು ದೂರಿನಲ್ಲಿ ತಿಳಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಬಡಗನ್ನೂರು ಗ್ರಾಮದ ಕೊಯಿಲದ ಯುವಕನೋರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಪ್ರಾಪ್ತ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.