HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು: ಸಾಮಾಜಿಕ ಜಾಲತಾಣದಲ್ಲಿ ಧರ್ಮ, ಪ್ರವಾದಿ ನಿಂದನೆ ಪ್ರಕರಣ | ಬಡಗನ್ನೂರು ಮುಸ್ಲಿಂ ಜಮಾಅತ್ ಹಾಗೂ ಪಾಲಡ್ಕ ಜಮಾಅತ್ ಕಮಿಟಿಯಿಂದ ಖಂಡನಾ ಸಭೆ

ಖಂಡನಾ ಸಭೆ: ಆರೋಪಿ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ

ಪುತ್ತೂರು:  ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಇಸ್ಲಾಂ ಧರ್ಮ, ಪ್ರವಾದಿ ಮುಹಮ್ಮದ್ ಪೈಗಂಬರ್ ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ಅತಿ ಕೆಟ್ಟದಾದ ಅವಾಚ್ಯ ಪದ ಬಳಸಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಮುಸ್ಲಿಂ ಜಮಾಅತ್ ಬಡಗನ್ನೂರು ವಲಯ ಹಾಗೂ ಪಾಲಡ್ಕ ಮುಹಮ್ಮದಿಯ ಜಮಾಅತ್ ಕಮಿಟಿ ವತಿಯಿಂದ ಖಂಡನಾ ಸಭೆ ನಡೆಸಲಾಯಿತು.

ನಾಡಿನ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಕೆಡಿಸುವ ಹುನ್ನಾರ ಇದಾಗಿದ್ದುಪರಸ್ಪರ ಅನ್ಯೋನ್ಯವಾಗಿ ಸಾಮರಸ್ಯದಿಂದ ಜೀವನ ನಡೆಸುವ ನಮ್ಮ ಊರಿಗೆ ಇಂತಹ ಪ್ರಕರಣಗಳು ಕಳಂಕವಾಗಿದೆ. ಸಮಾಜದ ಸೌಹಾರ್ದತೆಯನ್ನು ಕೆಡಿಸಿ ಅಶಾಂತಿ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಲು ಯತ್ನಿಸುವ ಇಂತವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿದ್ದವರು ಆಗ್ರಹಿಸಿದರು. ಖಂಡನಾ ಸಭೆಯಲ್ಲಿ ಜಮಾಅತ್ ಕಮಿಟಿ ಅದ್ಯಕ್ಷ ಹಮೀದ್ ಕೊಯಿಲ, ಪ್ರದಾನ ಕಾರ್ಯದರ್ಶಿ ಸಿ ಕೆ ಅಹ್ಮದ್ ನಯೀಮಿ, ಉಪಾಧ್ಯಕ್ಷರಾದ ಸಿದ್ದೀಕ್ ಪಾಲಡ್ಕ, ಬಡಗನ್ನೂರು ಮುಸ್ಲಿಂ ಜಮಾಅತ್ ಮುಖಂಡರಾದ ಸಲ್ಮಾನ್ ಇಬ್ರಾಹಿಮ್, ಎಸ್‌ವೈಎಸ್ ಮುಖಂಡರಾದ ಸಿ ಕೆ ಮುಹಮ್ಮದ್ ಖಾನ್, ಮುಸ್ತಫಾ ಪಿ ಎಸ್, ಸುಲೈಮಾನ್ ಸಖಾಪಿ, ಎಸ್ಸೆಸ್ಸೆಫ್ ಮುಖಂಡರಾದ ಮುದಶ್ಸಿರ್ ಸರವು,

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.