HomePage_Banner
HomePage_Banner
HomePage_Banner
HomePage_Banner

ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ – ಧಾರ್ಮಿಕ ಸಭೆ

  • ನಂಬಿಕೆಯಿಂದ ಮೂಲವಿಚಾರಗಳ ಮೂಲಕ ಮುಕ್ತಿ ದೊರಕಲು ಸಾಧ್ಯ- ಎಸ್ ಅಂಗಾರ

ಕಾಣಿಯೂರು : ಮನುಷ್ಯನಲ್ಲಿ ಎಲ್ಲಾ ಸಂಪತ್ತು ಇದ್ದರೂ ನೆಮ್ಮದಿ ಇಲ್ಲದ ಸ್ಥಿತಿ ಎಲ್ಲರಿಗೂ ಇದೆ. ಇದಕ್ಕೆ ಮೂಲ ಕಾರಣ ನಮ್ಮ ಆಚರಣೆಯ ಮೂಲನಂಬಿಕೆಗಳನ್ನು ಮರೆತಿರುವುದೇ ಆಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ದೈವತ್ವವನ್ನು ಪಡೆದು ತುಳುನಾಡಿನಲ್ಲಿ ಕಾರಣಿಕ ಶಕ್ತಿಗಳಾಗಿ ಮೆರೆಯುತ್ತಿದ್ದಾರೆ. ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಮುಂದುವರೆಸಿ ಕೊಂಡು ಹೋಗುವ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡುವ ಕೆಲಸವಾಗಬೇಕು. ಯಾವುದೇ ಜಾತಿ ಆದರೂ ವ್ಯಕ್ತಿಯ ನೀತಿ ಮುಖ್ಯ. ದೈವ ದೇವರುಗಳ ಮೇಲೆ ನಂಬಿಕೆ ಬೇಕು, ನಂಬಿಕೆಯಿಂದ ಮೂಲವಿಚಾರಗಳ ಮೂಲಕ ಮುಕ್ತಿ ದೊರಕಲು ಸಾಧ್ಯ ಎಂದು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಅವರು ಫೆ ೨೫ರಂದು ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ ,ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಪ್ರತಿಷ್ಟೆ ಹಾಗೂ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಸನಾತನ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಮುಂದುವರಿದಾಗ ಸಂಸ್ಕೃತಿ ಉಳಿಯಲು ಸಾಧ್ಯ.ಧಾರ್ಮಿಕ ಶ್ರದ್ದಾ ಕೇಂದ್ರಗಳು ಅಭಿವೃದ್ದಿಯಾದರೆ ಆ ಗ್ರಾಮದಲ್ಲಿ ಸುಭೀಕ್ಷೆ ನೆಲೆಗೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಸಂಪತ್ತು ಎಷ್ಟಿದ್ದರೂ ಮನುಷ್ಯನ ಮಾನಸಿಕ ನೆಮ್ಮದಿ,ಶಾಂತಿ ದೊರಕಲು ಧಾರ್ಮಿಕ ಕೇಂದ್ರಗಳ ಬೇಟಿಯಿಂದ ಸಾಧ್ಯ.ದೈವದೇವರುಗಳ ಮೇಲೆ ನಂಬಿಕೆ ಮುಖ್ಯ.ಗ್ರಾಮದ ಪ್ರತೀಯೊಬ್ಬರೂ ಊರಿನ ಶ್ರದ್ದಾ ಕೇಂದ್ರಗಳ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ದೇವಸ್ಥಾನ, ದೈವಸ್ಥಾನಗಳನ್ನು ನಿರ್ಮಾಣ ಮಾಡಿದರೆ ನಮ್ಮ ಕೆಲಸ ಮುಗಿಯುವುದಿಲ್ಲ, ನಿತ್ಯ ನಿರಂತರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಯೋಜನೆಗಳನ್ನು ರೂಪಿಸುವುದು ಕೂಡ ಅಷ್ಟೆ ಅನಿವಾರ್ಯವಾಗುತ್ತದೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಮಾತನಾಡಿ, ತುಳುನಾಡಿನ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳುವ ಕೆಲಸವಾಗಬೇಕಿದೆ. ಮೂಲ ನಂಬಿಕೆಯ ಮಹತ್ವ ಹಾಗೂ ಆಚಾರ ಪದ್ದತಿಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯನ್ನೂ ತಿಳಿದುಕೊಳ್ಳಬೇಕು. ನಮ್ಮ ತುಳುನಾಡು ದೈವಗಳ ನಾಡು, ಸತ್ಯಧರ್ಮದ ನೆಲೆ,ನಮ್ಮ ನಾಡಿನ ಆಚಾರ ವಿಚಾರಗಳನ್ನು ಅರಿಯಬೇಕು.ಶ್ರದ್ದಾಕೇಂದ್ರಗಳ ಅಭಿವೃದ್ದಿಯಿಂದ ಧರ್ಮಜಾಗೃತಿಯಾಗಲು ಸಾಧ್ಯ ಎಂದರು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ ಮಾತನಾಡಿ, ಧಾರ್ಮಿಕವಾಗಿ ಮುಂದುವರಿದಾಗ ಊರಿನ ಅಭಿವೃದ್ದಿಯ ಜತೆಗೆ ಸಮಾಜವೂ ಅಭಿವೃದ್ದಿಯಾಗಲು ಸಾಧ್ಯ. ಊರಿನ ಪವಿತ್ರವಾದ ದೇಗುಲ ನಿರ್ಮಾಣ, ಜೀರ್ಣೋದ್ಧಾರ ಕಾರ್ಯದಲ್ಲಿ ಸಹಭಾಗಿಗಳಾಗುವುದು ಪ್ರತಿಯೊಬ್ಬ ಬದುಕಿನ ಸುಯೋಗ. ನಮ್ಮ ದೇಶದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಆದಕಾರಣ ತುಳುನಾಡಿನ ಸಂಸ್ಕೃತಿ, ನಂಬಿಕೆ ಮತ್ತು ಆಚರಣೆಗಳು ವಿಶ್ವಮಾನ್ಯತೆ ಪಡೆದಿದೆ ಎಂದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಬ್ರಹ್ಮಕಲಶದಿಂದ ದೇವರ ಶಕ್ತಿ ಉದ್ದೀಪನಗೊಳ್ಳುವುದರೊಂದಿಗೆ ಊರಿಗೆ ಸುಭೀಕ್ಷೆಯಾಗುತ್ತದೆ. ಕುದ್ಮಾರಿನ ಮತ್ತು ಪರವೂರಿನ ಜನತೆಯ ಸಹಕಾರದಿಂದ ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಿದೆ ಎಂದರು. ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ದೇವಸ್ಥಾನ, ದೈವಸ್ಥಾನ ಜೀರ್ಣೋದ್ಧಾರಗೊಂಡು ಅಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಸಂಸ್ಕೃತಿ ಉಳಿಯುವುದರ ಜೊತೆಗೆ ಆ ಊರು ಸಮೃದ್ಧಿಗೊಳ್ಳಲು ಸಾಧ್ಯ. ಬ್ರಹ್ಮಕಲಶೋತ್ಸವದ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು ಎಂದರು.


ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯರಾದ ತಾರಾ ಅನ್ಯಾಡಿ, ಪ್ರವೀಣ್ ಕೆರೆನಾರು, ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್, ನಾಗಬ್ರಹ್ಮ ಆದಿಮುಗೇರ್ಕಳ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಬೇರಿಕೆ , ದೈವಸ್ಥಾನದ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಸತೀಶ್ ಹೊಸೊಕ್ಲು, ಸಂಜೀವ ಗೌಡ ಕೂರ, ರಾಮಯ್ಯ ಗೌಡ ನೂಜಿ, ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ, ಜತೆ ಕಾರ್ಯದರ್ಶಿ ಪದ್ಮನಾಭ ಕೆರೆನಾರು, ರಾಘವೇಂದ್ರ ದೈಪಿಲ, ಕೋಶಾಧಿಕಾರಿ ಕುಂಇಣ್ಣ ನಾಯ್ಕ ಕಾರ್ಲಾಡಿ, ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಅಶೋಕ ಕೆಡೆಂಜಿ, ಕೋಶಾಧಿಕಾರಿ ದೇವರಾಜ್ ನೂಜಿ, ಆಡಳಿತ ಸಮಿತಿ ಉಪಾಧ್ಯಕ್ಷ ರಮೇಶ್ ಬೇರಿಕೆ, ಜತೆ ಕಾರ್ಯದರ್ಶಿ ಬಾಬು ಬರೆಪ್ಪಾಡಿ,ಕೋಶಾಧಿಕಾರಿ ಅಶ್ವತ್ಥ್ ಪದ್ಮುಂಜ , ಮೊಕ್ತೇಸರ ಕುಂಇ ಮುಗೇರ ಬೇರಿಕೆ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ, ಪ್ರಶಾಂತ್ ಬರೆಪ್ಪಾಡಿ, ಅಶೋಕ್ ಕೆಡೆಂಜಿ, ಸತೀಶ್ ಹೊಸವೊಕ್ಲು, ದಾಮೋದರ ನಾಕಿರಣ, ಬಾಲಕೃಷ್ಣ ಗೌಡ ನೂಜಿ, ಚಂದ್ರಶೇಖರ ಬರೆಪ್ಪಾಡಿ ಆದಿಶಕ್ತಿ, ಚಾರ್ವಾಕ ಸಿಎ ಬ್ಯಾಂಕ್ ಸಿಇಓ ಅಶೋಕ್ ಪಿ, ನಾಗೇಶ್ ಕೆಡೆಂಜಿ, ವಿಠಲ ಗೌಡ ಬರೆಪ್ಪಾಡಿ, ಲೋಕೇಶ್ ಬಿ.ಎನ್ ಬರೆಪ್ಪಾಡಿ ಅತಿಥಿಗಳನ್ನು ಗೌರವಿಸಿದರು. ಸೌಮ್ಯ ಹೊಸವೊಕ್ಲು, ಜ್ಯೋತಿಕಾ ಕೆರೆನಾರು ಪ್ರಾರ್ಥಿಸಿದರು. ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ,ತಾ.ಪಂ.ಸದಸ್ಯೆ ಲಲಿತಾ ಈಶ್ವರ ಸ್ವಾಗತಿಸಿ, ದೈವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್.ಕಾರ್ಲಾಡಿ ಪ್ರಸ್ತಾವನೆಗೈದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚೆನ್ನಪ್ಪ ಗೌಡ ನೂಜಿ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಳು ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠೆ :
ಕುದ್ಮಾರು ಬೇರಿಕೆಯಲ್ಲಿ ಕುವೆತ್ತೋಡಿ ನರಸಿಂಹ ಪ್ರಸಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವವು ನಡೆಯಿತು. ಫೆ.೨೫ರಂದು ಬೆಳಿಗ್ಗೆ ಗಣಹೋಮ, ಬೆಳಿಗ್ಗೆ ಮೀನ ಲಗ್ನದಲ್ಲಿ ಪ್ರತಿಷ್ಟೆ, ಕಲಶಾಭಿಷೇಕ, ತಂಬಿಲ, ಕೊರಗಜ್ಜ ದೈವಸ್ಥಾನದ ಶುದ್ದ ಕಲಶ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ನಾಗಬ್ರಹ್ಮ ಆದಿಮುಗೇರ್ಕಳ ದೈವದ ಭಂಡಾರ ತೆಗೆಯುವುದು,ರಾತ್ರಿ ಗಂಧ ಪ್ರಸಾದ ವಿತರಣೆ, ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ, ನಂತರ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಗರಡಿ ಇಳಿಯುವುದು, ನಂತರ ತನ್ನಿ ಮಾಣಿಗ ಗರಡಿ ಇಳಿಯುವುದು,ಫೆ. ೨೬ರಂದು ಬೆಳಿಗ್ಗೆ ಹರಕೆಗಂಧ ಪ್ರಸಾದ,ಗುಳಿಗ ದೈವದ ನೇಮೋತ್ಸವ,ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.

ಗೌರವಾರ್ಪಣೆ
ದೈವಸ್ಥಾನದ ಬೆಳವಣಿಗೆಗೆ ಸಹಕಾರ ನೀಡಿದ ಹಿರಿಯರಾದ ಎಸ್.ಮದನ ಪೂಜಾರಿ,ರಾಮಯ್ಯ ಗೌಡ ನೂಜಿ,ಕುಂಇಣ್ಣ ನಾಯ್ಕ ಕಾರ್ಲಾಡಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ನೂತನ ಸಚಿವರಾದ ಎಸ್ ಅಂಗಾರ ಅವರನ್ನು ಆಡಳಿತ ಸಮಿತಿಯಿಂದ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.